ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಿಂದೂ ಸಂಘನೆಗಳ ನಾಯಕರು ಮತ್ತು ಕಾರ್ಯಕರ್ತರ ಮೇಲಿನ ಹಲ್ಲೆ ಮತ್ತು ಕೊಲೆ ಪ್ರಕರಣಗಳ ಬಗ್ಗೆ ಕರ್ನಾಟಕ ರಾಜ್ಯ ಸರಕಾರ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಚಕಾರವೆತ್ತದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.
ಮೂಡಬಿದಿರೆಯಲ್ಲಿ ಪ್ರಶಾಂತ್ ಕೊಲೆ, ಹಂಡೇಲುನಲ್ಲಿ ಅಶೋಕ್ ಪೂಜಾರಿ ಮತ್ತು ಯೋಗೀಶ್ ಅಚಾರ್ಯ, ಪೆರ್ಮುದೆಯಲ್ಲಿ ನಡೆದ ಹಿಂದೂ ಯುವಕನ ಕೊಲೆ ಯತ್ನ ಹೀಗೆ ಹಲವಾರು ಪ್ರಕರಣಗಳು.
ನಡೆದಿದ್ದು, ಕೊಲೆಗಡುಕರಿಗೆ ಬಲಿಯಾದ ಪ್ರಶಾಂತನ ಮನೆಗೆ ಪೋಲಿಸ್ ಆಯುಕ್ತರು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕ ಅಭಯಚಂದ್ರ ಜೈನ್ ಮೃತನ ತಂದೆ, ತಾಯಿಗೆ ಸಾಂತ್ವನ ಮಾತು ಹೇಳಲು ಹೋಗದಿದ್ದುದು ಖಂಡನೀಯ ಎಂದು ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ುಮಾನಾಥ್ ಕೋಟ್ಯಾನ್ ಹಾಗೂ ಬಿಜೆಪಿ, ಮೂಡಬಿದಿರೆ ಮಂಡಲ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕೆಯೊಂದು ಕೊಲೆಗೂ ದಾವೂದ್ ಇಬ್ರಾಹಿಂ ಮತ್ತು ಐ.ಎಸ್.ಐ. ನಂಟಿರುವ ಬಗ್ಗೆ ವರದಿ ಮಾಡಿದೆ. ಆದರೆ ಶಾಸಕ ಅಭಯಚಂದ್ರ ಜೈನ್ರಿಗೆ ಅಂತರರಾಷ್ಟ್ರೀಯ ಬೆದರಿಕೆ ಕರೆ ಬಂದಿರುವುದು ತನಿಖೆಯನ್ನು ದಿಕ್ಕು ತಪ್ಪಿಸುವ ಯತ್ನ ಎಂದು ದೂರಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ನಡೆದ ಘಟನೆಗಳು ಪಾಕಿಸ್ತಾನದ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವುದು ಇದಕ್ಕೆ ಪುಷ್ಠಿ ನೀಡಿದೆ. ಜಿಲ್ಲೆಯ ಜನರ ಭದ್ರತೆಯ ದೃಷ್ಠಿಯಿಂದ ಈ ಕೂಡಲೇ ಸಚಿವ ಅಭಯಚಂದ್ರ ಜೈನ್ರವರು ರಾಜೀನಾಮೆ ನೀಡಿ, ಸಿ.ಬಿ.ಐ. ತನಿಖೆಗೆ ಒಳಪಡಿಸಬೇಕು. ಪ್ರಶಾಂತ್ ಪೂಜಾರಿ ಕುಟುಂಬಕ್ಕೆ ಕನಿಷ್ಟ ರೂಪಾಯಿ 25 ಲಕ್ಷ ಪರಿಹಾರ ನೀಡಿದಂತೆ ಆಗ್ರಹಿಸಿದರು.
ಅಶೋಕ್ ಪೂಜಾರಿ ಒಂದು ಕೈ ಕಳಕೊಂಡು ಚೇತರಿಸಿಕೊಳ್ಳುತ್ತಿದ್ದರೂ, ಈವರೆಗೆ ಆಸ್ಪತ್ರೆಯಲ್ಲಿ ಖರ್ಚಾಗಿರುವ ಸುಮಾರು ೩ ಲಕ್ಷ ರೂಪಾಯಿಯನ್ನು ರಾಜ್ಯ ಸರ್ಕಾರ ಈ ಕೂಡಲೇ ಭರಿಸಬೇಕು. ಅಲ್ಲದೆ ಆತನಿಗೆ ಸರ್ಕಾರಿ ಕೆಲಸ ಕೊಡಿಸಿ ಹೆಚ್ಚಿನ ಪರಿಹಾರ ಒದಗಿಸಬೇಕು. ಸಚಿವರಿಗೂ ವಿದೇಶದಿಂದ ಈ ಕೇಸಿನ ಬಗ್ಗೆ ಬೆದರಿಕೆ ಕರೆ ಬಂದಿರುವುದರಿಂದ ಇದನ್ನು ಸಿ.ಬಿ.ಐ.ಗೆ ನೀಡಿ ಇಂಟರ್ ಪೋಲ್ ಮೂಲಕ ತನಿಖೆ ನಡೆಸುವುದು ಅಗತ್ಯ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.