News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಚ್ಚಾ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟ: 2 ಸಾವು

ಬಿರ್‌ಭುಮ್: ಪಶ್ಚಿಮ ಬಂಗಾಳದ ಬಿರ್‌ಭುಮ್ ಜಿಲ್ಲೆಯ ಗ್ರಾಮವೊಂದರಲ್ಲಿ ಕಚ್ಚಾ ಬಾಂಬ್‌ಗಳನ್ನು ತಯಾರಿಸುತ್ತಿದ್ದ ಸಂದರ್ಭ ಸ್ಫೋಟ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಕೋಲ್ಕತಾದಿಂದ 100 ಕಿ.ಮೀ. ದೂರದ ಆದಂಪುರ್ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ...

Read More

ಪ್ರಶಸ್ತಿ ಮರಳಿ ಪಡೆಯಲು ನಯನತಾರಾ ಸೆಹಗಲ್ ನಿರ್ಧಾರ

ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದ ನಯನತಾರಾ ಸೆಹಗಲ್ ಮತ್ತು ನಂದ್ ಭಾರಧ್ವಜ್ ಪ್ರಶಸ್ತಿಯನ್ನು ಮರಳಿ ಪಡೆಯಲು ಒಪ್ಪಿಕೊಂಡಿದ್ದಾರೆ. ‘ಅವಾರ್ಡ್ ವಾಪಸಿ’ ಅಭಿಯಾನಕ್ಕೆ ಮೊದಲು ಧುಮುಕ್ಕಿದ್ದ ನಯನ ತಾರಾ ಅವರು, ಸಾಹಿತಿಗಳ ಮೇಲೆ ನಡೆಯುತ್ತಿರುವ...

Read More

ನನ್ನ ತಂದೆ ಸತ್ತಿದ್ದು ವಿಮಾನ ಅಪಘಾತದಿಂದಲೇ ಎಂದ ನೇತಾಜೀ ಪುತ್ರಿ

ನವದೆಹಲಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಶನಿವಾರದಿಂದ ಬಹಿರಂಗಪಡಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ. ಆದರೆ ಈ ನಡುವೆಯೇ ನೇತಾಜೀ ಅವರು ವಿಮಾನ ಅಪಘಾತದಿಂದಲೇ ತೀರಿಕೊಂಡಿದ್ದಾರೆ ಎಂದು ಅವರ ಪುತ್ರಿ ಹೇಳಿದ್ದಾರೆ. ಮಾಧ್ಯಮವೊಂದರಲ್ಲಿ ಮಾತನಾಡಿದ...

Read More

ಸಂಪುಟದಲ್ಲಿ ಮಹತ್ವದ ಬದಲಾವಣೆಗೆ ಮೋದಿ ನಿರ್ಧಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆರ್ಥಿಕ ಪ್ರಗತಿ, ವಿವಿಧ ರಾಜ್ಯಗಳ ಚುನಾವಣೆಯ ದೃಷ್ಟಿಯಿಂದ ಈ ಬದಲಾವಣೆ ಮಹತ್ವ ಪಡೆದುಕೊಂಡಿದೆ. ಮೂಲಗಳ ಪ್ರಕಾರ ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ರಕ್ಷಣಾ ಖಾತೆಗೆ ವರ್ಗಾಯಿಸುವ...

Read More

ಗುಜರಾತ್‌ನ ಹತ್ತಿ ಬೆಳೆಗಾರರಿಗೆ ಸರ್ಕಾರದಿಂದ ಬೋನಸ್

ರಾಜ್‌ಕೋಟ್: ದೇಶದಲ್ಲೇ ಅತಿ ಹೆಚ್ಚು ಹತ್ತಿ ಬೆಳೆಯುವ ಗುಜರಾತ್‌ನ ರೈತರಿಗೆ ಈ ವರ್ಷ ಹತ್ತಿ ಬೆಲೆಗಳ ಏರಿಕೆಯಿಂದ ಸ್ವಲ್ಪ ಮಟ್ಟಿಗೆ ಚೇತರಿಕೆ ನೀಡಿದೆ. ಗುಜರಾತ್ ಹಾಗೂ ಪಾಕಿಸ್ಥಾನದ ಸಂಯೋಜಿತ ಹತ್ತಿ ಬೆಳೆಗೆ ಕಳೆದ 18 ವರ್ಷಗಳಲ್ಲೇ ಅತಿ ಕಡಿಮೆ ಬೆಲೆ ಇದ್ದು, ಸದ್ಯ...

Read More

ಗಂಗಾ ನದಿ ತಟದಲ್ಲಿನ 150 ಕೈಗಾರಿಕೆಗಳಿಗೆ ಮುಚ್ಚಲು ಆದೇಶ

ನವದೆಹಲಿ: ಗಂಗಾ ನದಿಯನ್ನು ಶುದ್ಧಗೊಳಿಸಲು ಸರ್ಕಾರ ಮಹತ್ವದ ಕಾರ್ಯವೊಂದನ್ನು ಆರಂಭಿಸಿದೆ. ನದಿ ದಂಡೆಯ ಸಮೀಪದಲ್ಲಿರುವ 150 ಕೈಗಾರಿಕೆಗಳಿಗೆ ಬಾಗಿಲು ಮುಚ್ಚುವ ಆದೇಶವನ್ನು ನೀಡಿದೆ. ಗಂಗೆಯ ಮಾಲಿನ್ಯ ಈಗಾಗಲೇ ಶೇ.25ರಷ್ಟು ಕಡಿಮೆಯಾಗಿದೆ, ನದಿ ತಟದಲ್ಲಿನ 150 ಕೈಗಾರಿಕೆಗಳಿಗೆ ಬಾಗಿಲು ಮುಚ್ಚುವಂತೆ ನಾವು ನೋಟಿಸ್...

Read More

ಗಣರಾಜ್ಯೋತ್ಸವಕ್ಕೆ ಭಾರತ, ಫ್ರೆಂಚ್ ಭದ್ರತಾ ಪಡೆಗಳ ಕಣ್ಗಾವಲು

ನವದೆಹಲಿ: ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಉಗ್ರರ ಬೆದರಿಕೆ ಇರುವ ಹಿನ್ನಲೆಯಲ್ಲಿ ಭಾರೀ ಬಿಗಿ ಭದ್ರತೆಗಳನ್ನು ಏರ್ಪಡಿಸಲಾಗಿದೆ. ಭಾರತ ಮತ್ತು ಫ್ರೆಂಚ್‌ನ ಭದ್ರತಾ ಪಡೆಗಳು ಸಂಪೂರ್ಣ ಕಣ್ಗಾವಲು ಇರಿಸಲಿದೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಫ್ರೆಂಚ್ ಅಧ್ಯಕ್ಷ ಫ್ರಾನ್ಸಿಸ್ಕೋ ಹೋಲ್ಯಾಂಡ್ ಅವರು ಮುಖ್ಯ ಅತಿಥಿಯಾಗಿ...

Read More

ಬಿಜೆಪಿ ಪೂರ್ಣಾವಧಿ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಅಮಿತ್ ಶಾ

ನವದೆಹಲಿ: ಅಮಿತ್ ಶಾ ಅವರು ಭಾರತೀಯ ಜನತಾ ಪಾರ್ಟಿಯ ಪೂರ್ಣಾವಧಿ ರಾಷ್ಟ್ರಾಧ್ಯಕ್ಷರಾಗಿ ಜ.24ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 2014ರಲ್ಲಿ ರಾಜ್‌ನಾಥ್ ಸಿಂಗ್ ಅವರು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಮಿತ್ ಶಾ ಅವರು ರಾಷ್ಟ್ರಾಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು....

Read More

2016ರಲ್ಲಿ ತಾಪಮಾನ ಅಸಹನೀಯವಾಗಲಿದೆ

ನವದೆಹಲಿ: ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, 2016 ಅತ್ಯಂತ ಬಿಸಿಯಾಗಿರಲಿದೆ ಎಂದು ವರದಿಗಳು ತಿಳಿಸಿವೆ. 2015ನ್ನು ಆಧುನಿಕ ಕಾಲದ ಅತ್ಯಂತ ಬಿಸಿಯಾದ ವರ್ಷ ಎಂದು ಪರಿಗಣಿಸಲಾಗಿದೆ, 1880ರ ಬಳಿಕ ಅತೀ ಉಷ್ಣತೆಯನ್ನು ಹೊಂದಿದ ವರ್ಷ ಇದೆಂದು ಹೇಳಲಾಗಿತ್ತು. ಇದೀಗ 2016ಅದನ್ನೂ ಮೀರಿಸುವ ಆತಂಕ...

Read More

ಇನ್‌ಕ್ರೆಡಿಬಲ್ ಇಂಡಿಯಾ ರಾಯಭಾರಿಗಳಾಗಿ ಅಮಿತಾಭ್, ಪ್ರಿಯಾಂಕ

ನವದೆಹಲಿ: ಇನ್‌ಕ್ರೆಡಿಬಲ್ ಇಂಡಿಯಾದ ರಾಯಭಾರಿಗಳಾಗಿ ಅಮಿತಾಭ್ ಬಚ್ಚನ್ ಮತ್ತು ಪ್ರಿಯಾಂಕ ಛೋಪ್ರಾ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರ ಆಯ್ಕೆಯನ್ನು ಮುಂದಿನ ವಾರ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಅಮೀರ್ ಖಾನ್ ಅವರನ್ನು ಇತ್ತೀಚಿಗಷ್ಟೇ ರಾಯಭಾರಿ ಸ್ಥಾನದಿಂದ ತೆಗೆದು ಹಾಕಲಾಗಿತ್ತು....

Read More

Recent News

Back To Top