ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದ ನಯನತಾರಾ ಸೆಹಗಲ್ ಮತ್ತು ನಂದ್ ಭಾರಧ್ವಜ್ ಪ್ರಶಸ್ತಿಯನ್ನು ಮರಳಿ ಪಡೆಯಲು ಒಪ್ಪಿಕೊಂಡಿದ್ದಾರೆ.
‘ಅವಾರ್ಡ್ ವಾಪಸಿ’ ಅಭಿಯಾನಕ್ಕೆ ಮೊದಲು ಧುಮುಕ್ಕಿದ್ದ ನಯನ ತಾರಾ ಅವರು, ಸಾಹಿತಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅಕಾಡಮಿ ನೀಡಿದ ಪ್ರತಿಕ್ರಿಯೆಗೆ ತೃಪ್ತಿ ವ್ಯಕ್ತಪಡಿಸಿದ ಅವಾರ್ಡ್ನ್ನು ಮರಳಿ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ ಅವರು ವಾಪಾಸ್ ಮಾಡಿದ್ದ ಪ್ರಶಸ್ತಿ ಮೌಲ್ಯ 1 ಲಕ್ಷ ರೂಪಾಯಿಯನ್ನು ಅವರಿಗೆ ವಾಪಾಸ್ ನೀಡಲಾಗಿದೆ ಎಂದು ಅಕಾಡಮಿ ಹೇಳಿದೆ.
ಇನ್ನೋರ್ವ ಸಾಹಿತಿ ನಂದ ಭಾರಧ್ವಜ್ ಅವರೂ ವಾಪಾಸ್ ಮಾಡಿದ್ದ ಪ್ರಶಸ್ತಿಯನ್ನು ಮರಳಿ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಉಳಿದವರ ಮನವೊಲಿಕೆಗೂ ಅಕಾಡಮಿ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.