
ಇಸ್ಲಾಮಾಬಾದ್: ಪಾಕಿಸ್ತಾನದ ಫಾರೂಕಾಬಾದ್‌ನಲ್ಲಿರುವ 125 ವರ್ಷ ಹಳೆಯ ಗುರುದ್ವಾರದ ಒಂದು ಭಾಗವನ್ನು ಧ್ವಂಸಗೊಳಿಸಿದ್ದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಅಲ್ಲದೇ ಇದನ್ನು “ಅತ್ಯಂತ ಶೋಚನೀಯ ಮತ್ತು ಗುರಿಯಾಗಿಟ್ಟುಕೊಂಡು ನಡೆಸಲಾದ ವಿಧ್ವಂಸಕ ಕೃತ್ಯ” ಎಂದು ಬಣ್ಣಿಸಿದೆ.
ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್ ಅನ್ನು ಧ್ವಂಸಗೊಳಿಸಿರುವ ವರದಿಗಳ ಬಗ್ಗೆ ಭಾರತದ ಕಳವಳಗೊಂಡಿದೆ ಎಂದು ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
“ಪಾಕಿಸ್ತಾನದ ಫಾರೂಕಾಬಾದ್‌ನಲ್ಲಿರುವ 125 ವರ್ಷ ಹಳೆಯ ಐತಿಹಾಸಿಕ ಪವಿತ್ರ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್ ಧ್ವಂಸಗೊಂಡ ಬಗ್ಗೆ ನಾವು ತೀವ್ರ ದುಃಖಕರ ವರದಿಗಳನ್ನು ನೋಡಿದ್ದೇವೆ. ಪೂಜ್ಯ ಸಿಖ್ ದೇವಾಲಯದ ಮೇಲೆ ನಡೆದ ಈ ಅತ್ಯಂತ ಶೋಚನೀಯ ಮತ್ತು ಗುರಿಯಾಗಿಟ್ಟುಕೊಂಡು ನಡೆಸಲಾದ ವಿಧ್ವಂಸಕ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸ್ಥಳೀಯ ಅಧಿಕಾರಿಗಳು ಅಥವಾ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ETPB) ಯಾವುದೇ ಅರ್ಥಪೂರ್ಣ ಕ್ರಮ ಕೈಗೊಂಡಿಲ್ಲ ಎಂಬ ವರದಿಗಳ ಜೊತೆಗೆ ಅದರ ನಾಶವು ಗಂಭೀರ ಕಳವಳಕಾರಿ ವಿಷಯವಾಗಿದೆ” ಎಂದು ಜೈಸ್ವಾಲ್ ಹೇಳಿದ್ದಾರೆ.
ಗುರುದ್ವಾರದ ಕೆಡವಲಾದ ಭಾಗಗಳನ್ನು ಪುನಃಸ್ಥಾಪಿಸಲು ಭಾರತ ಪಾಕಿಸ್ತಾನವನ್ನು ಕೇಳಿದೆ.
“ದುರದೃಷ್ಟವಶಾತ್ ಇದು ಪ್ರತ್ಯೇಕ ಘಟನೆಯಲ್ಲ, ಏಕೆಂದರೆ ನಾವು ಈ ಹಿಂದೆಯೂ ಇದೇ ರೀತಿಯ ವರದಿಗಳನ್ನು ನೋಡಿದ್ದೇವೆ. ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಳ್ಳುವುದು ನಿರಂತರವಾಗಿ ಮುಂದುವರೆದಿದೆ” ಎಂದು ಜೈಸ್ವಾಲ್ ಹೇಳಿದ್ದಾರೆ.
“ಈ ವಿಷಯವನ್ನು ತ್ವರಿತವಾಗಿ ತನಿಖೆ ಮಾಡಿ ಈ ಹೇಯ ಕೃತ್ಯದ ಅಪರಾಧಿಗಳನ್ನು ನ್ಯಾಯಕ್ಕೆ ತರುವಂತೆ ನಾವು ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



