Date : Monday, 14-09-2015
ಪಾಟ್ನಾ: ಹಲವಾರು ಹಂತಗಳ ಮಾತುಕತೆಯ ಬಳಿಕ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟದ ಸೀಟು ಹಂಚಿಕೆಯ ಬಿಕ್ಕಟ್ಟು ಕೊನೆಗೂ ಅಂತ್ಯವಾಗಿದೆ. ಬಿಜೆಪಿ ಒಟ್ಟು 160ಸ್ಥಾನಗಳಲ್ಲಿ ಸ್ಪಧಿಸುತ್ತಿದ್ದು, ಅದರ ಮಿತ್ರ ಪಕ್ಷಗಳು 83 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ರಾಮ್ ವಿಲಾಸ್ ಪಾಸ್ವಾನ್ ಅವರು ಎಲ್‌ಜೆಪಿ...
Date : Monday, 14-09-2015
ನವದೆಹಲಿ: ಪುಣೆ ಮೂಲದ ಉದ್ಯಮಿ ಸೈರಸ್ ಪೂನಾವಾಲಾ ಅವರು ಬರೋಬ್ಬರಿ 750ಕೋಟಿ ನೀಡಿ ದಕ್ಷಿಣ ಮುಂಬಯಿಯ ಬ್ರೀಚ್ ಕ್ಯಾಂಡಿಯಲ್ಲಿರುವ ಯುಎಸ್ ಗವರ್ನ್‌ಮೆಂಟ್ ಒಡೆತನದ ಅರಮನೆ ಆಸ್ತಿ ಲಿಂಕನ್ ಹೌಸನ್ನು ಖರೀದಿಸಿದ್ದಾರೆ. ಎರಡು ಎಕರೆ ಪ್ರದೇಸದಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ಈ ಅರಮನೆ...
Date : Monday, 14-09-2015
ತಿರುವನಂತಪುರ: ಒಂದು ಕಾಲದಲ್ಲಿ ದೇಶದ ಫಿಲ್ಮ್ ಸೊಸೈಟಿ ಚಳುವಳಿಗೆ ಸಾಕ್ಷಿಯಾಗಿದ್ದ ಕೇರಳ ಇದೀಗ ದೇಶದ ಮೊದಲ ಮಹಿಳಾ ಫಿಲ್ಮ್ ಸೊಸೈಟಿಯನ್ನು ಹೊಂದಲಿದೆ. ಲಿಂಗ ಕೇಂದ್ರಿತ ವಿಷಯಗಳ ಬಗ್ಗೆ ಸಂಶೋಧನೆ, ಜಾಗೃತಿ ಮೂಡಿಸುವ ‘ಕೇರಳ ಸ್ತ್ರೀ ಪದನ ಕೇಂದ್ರಂ’ ಎಂಬ ಸಂಘಟನೆ ಮೊತ್ತ...
Date : Monday, 14-09-2015
ನವದೆಹಲಿ: ಕೈಯಲ್ಲಿ ಶೂ ಹಿಡಿದು ವಿಷ್ಣು ದೇವರಂತೆ ಫೋಸ್ ನೀಡಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಕ್ರಿಕೆಟ್ ತಾರೆ ಮಹೇಂದ್ರ ಸಿಂಗ್ ಧೋನಿ ಅವರ ವಿರುದ್ಧದ ಕ್ರಿಮಿನಲ್ ವಿಚಾರಣಾ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ. ಸಾಮಾಜಿಕ ಹೋರಾಟಗಾರ...
Date : Monday, 14-09-2015
ನವದೆಹಲಿ: ಸೆ.27ರಂದು ಅಮೆರಿಕಾಗೆ ಪ್ರಯಾಣ ಬೆಳೆಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಫೇಸ್‌ಬುಕ್ ಕಛೇರಿಗೆ ತೆರಳಿ ಸಿಇಓ ಮಾರ್ಕ್ ಝುಕರ್‌ಬರ್ಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಫೇಸ್‌ಬುಕ್ ಸಿಇಓನನ್ನು ಅವರು ಭೇಟಿಯಾಗುವ ವಿಚಾರ ತಿಳಿಯುತ್ತಲೇ ಹಲವಾರು ಮಂದಿ ಫೇಸ್‌ಬುಕ್‌ನಲ್ಲಿನ ‘ಕ್ಯಾಂಡಿ ಕ್ರಶ್’ ನೋಟಿಫಿಕೇಶನ್ ವಿಷಯದಲ್ಲಿ...
Date : Monday, 14-09-2015
ಅಲಹಾಬಾದ್: ಪರ್ಶಿಯ ಮತ್ತು ಉರ್ದು ಭಾಷೆಯಲ್ಲಿ ಮುಸ್ಲಿಂ ಲೇಖಕರು ಬರೆದ ರಾಮನ ಕಥೆಗಳುಳ್ಳ ಪುಸ್ತಕಗಳನ್ನು ಅಲಹಾಬಾದ್‌ನಲ್ಲಿ ಸೆ.30 ರಿಂದ ಅಕ್ಟೋಬರ್ 4ರವರೆಗೆ ಪ್ರದರ್ಶನಕ್ಕೆ ಇಡಲಾಗುತ್ತದೆ. ಸದುಲ್ಲಾಹ ಮಸಿಹಿ ಅವರು ಪರ್ಶಿಯನ್ ಭಾಷೆಯಲ್ಲಿ ಬರೆದ ಪ್ರಸಿದ್ಧ ಕೃತಿ ರಾಮಾಯಣ ಮಸಿಹಿ ಸೇರಿದಂತೆ 4...
Date : Monday, 14-09-2015
ನವದೆಹಲಿ: ಮೆಕ್ಕಾದಲ್ಲಿ ಕ್ರೇನ್ ಕುಸಿದು ಬಿದ್ದು ನಡೆದ ದುರಂತದಲ್ಲಿ ಒಟ್ಟು 11 ಮಂದಿ ಅಸುನೀಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಶುಕ್ರವಾರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕ್ರೇನ್ ಮೆಕ್ಕಾದ ಮಸೀದಿಯ ಮೇಲೆ ಬಿದ್ದಿತ್ತು, ಪರಿಣಾಮ 100ಕ್ಕೂ ಅಧಿಕ ಮಂದಿ ಅಸುನೀಗಿದ್ದರು. ಇದರಲ್ಲಿ...
Date : Saturday, 12-09-2015
ಹೈದರಾಬಾದ್ : ಬಿಹಾರದ ಚುನಾವಣೆಯಲ್ಲಿ ಸಿಮಾಂಚಲ ಪ್ರದೇಶದಲ್ಲಿ ಎ.ಐ.ಎಂ.ಐ.ಎಂ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಎಂ.ಐ.ಎಂ ಮುಖಂಡ ಅಸಾವುದುದ್ದೀನ್ ಒವೈಸಿ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಕ್ಷ ಬಿಹಾರದ ಸಿಮಾಂಚಲ ಪ್ರದೇಶದಲ್ಲಿ 4 ಜಿಲ್ಲೆಗಳಿಗೆ ಸೀಮಿತವಾಗಿ ಸ್ಪರ್ಧಿಸಲಿದೆ. ಅದರೆ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಸಂಖ್ಯೆಯನ್ನು...
Date : Saturday, 12-09-2015
ನವದೆಹಲಿ: ಡೆಂಗಿ ಜ್ವರಕ್ಕೆ ತಮ್ಮ ಮಗ ಬಲಿಯಾಗಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ದಂಪತಿಗಳು ನಾಲ್ಕು ಮಹಡಿಯ ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ. ಈ ದಂಪತಿಯ ಏಕೈಕ ಪುತ್ರನಾಗಿದ್ದ ಅವಿನಾಶ್ ಡೆಂಗಿ ಜ್ವರದಿಂದ ಬಳಲುತ್ತಿದ್ದ, ಈತನನ್ನು...
Date : Saturday, 12-09-2015
ಮುಂಬಯಿ: ಕೇಂದ್ರ ಜಾರಿಗೆ ತರಲು ಉದ್ದೇಶಿಸಿದ್ದ ಭೂಸ್ವಾಧೀನ ಮಸೂದೆಯನ್ನು ವಿರೋಧಿಸಿ ಹಾಗೂ ಏಕ ಶ್ರೇಣಿ, ಏಕ ಪಿಂಚಣಿ ಜಾರಿಗೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಅ.2ರ ಗಾಂಧಿ ಜಯಂತಿಯಂದು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದರು. ಆದರೀಗ ತಮ್ಮ ನಿರ್ಧಾರವನ್ನು ಅವರು...