ನವದೆಹಲಿ: ಸರ್ಕಾರ ತನ್ನ ಚಿನ್ನ ಠೇವಣಿ ಯೋಜನೆ ಅಡಿಯಲ್ಲಿ ಗೃಹಬಳಕೆ ಹಾಗೂ ದೇವಾಲಯಗಳ ಒಟ್ಟು 900 ಕೆ.ಜಿ. ಚಿನ್ನವನ್ನು ಇದುವರೆಗೆ ಕ್ರೋಢೀಕರಿಸಿದೆ. ಮುಂದೆ ಭವಿಷ್ಯದಲ್ಲಿ ಇದು ಇನ್ನಷ್ಟು ಏರಿಕೆಯಾಗುವ ಭರವಸೆ ಇದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಂಠ ದಾಸ್ ತಿಳಿಸಿದ್ದಾರೆ.
ಈ ಯೋಜನೆ ನ. 5 ರಂದು ಆರಂಭಿಸಲಾಗಿದ್ದು, ಬ್ಯಾಂಕುಗಳಿಗೆ 15 ವರ್ಷಗಳ ವರೆಗೆ ಚಿನ್ನ ಸಂಗ್ರಹಿಸಿ ಹರಾಜು ನಡೆಸುವ ಅಥವಾ ಕಾಲಕಾಲಕ್ಕೆ ಚಿನ್ನ ವ್ಯಾಪಾರಸ್ಥರಿಗೆ ನೀಡುವ ಅಧಿಕಾರ ನೀಡಲಾಗಿದೆ. ಠೇವಣಿದಾರರು ಶೇ. 2.5 ವಾರ್ಷಿಕ ಬಡ್ಡಿ ಪಡೆಯಬಹುದಾಗಿದೆ. ಪ್ರಸ್ತುತ 46 ಚಿನ್ನದ ಹಾಲ್ಮಾರ್ಕ್ ಕೇಂದ್ರಗಳಿದ್ದು, ಇವು ಚಿನ್ನದ ಸಂಗ್ರಹ ಮತ್ತು ಶುದ್ಧತೆ ಪರೀಕ್ಷೆ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ.
ಭಾರತ ಪ್ರತಿ ವರ್ಷ ಸುಮಾರು 1,000 ಟನ್ ಚಿನ್ನ ಆಮದು ಮಾಡುತ್ತಿದ್ದು, ಅತ್ಯಮೂಲ್ಯ ಲೋಹ ಮತ್ತು ಕಚ್ಚಾ ತೈಲದ ನಂತರದ ಸ್ಥಾನದಲ್ಲಿದೆ. ಸದ್ಯ ಎಪ್ರಿಲ್ -ಡಿಸೆಂಬರ್ ಹಣಕಾಸು ವರ್ಷದ ಅವಧಿಯಲ್ಲಿ ಸುಮಾರು 26.45 ಬಿಲಿಯನ್ ಡಾಲರ್ ಚಿನ್ನ ಆಮದು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.