ನವದೆಹಲಿ: ದೆಹಲಿಯ ಮೆಟ್ರೋ ನಿಲ್ದಾಣಗಳು ತಮ್ಮ ಇ-ಕಾಮರ್ಸ್ ಸೈಟ್ಗಳ ವಲಯವನ್ನು ದುಪ್ಪಟ್ಟುಗೊಳಿಸಲಿದ್ದು, ಗ್ರಾಹಕರು ತಮಗೆ ಅನುಕೂಲವಾಗುವಂತೆ ಆಯ್ದ ನಿಲ್ದಾಣಗಳಲ್ಲಿ ಉತ್ಪನ್ನಗಳನ್ನು ಪಡೆಯುವ ಅವಕಾಶ ಕಲ್ಪಿಸಲಿದೆ.
ಆನ್ಲೈನ್ ಖರೀದಿದಾರರಿಗೆ ಈ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಪ್ರಯಾಣದ ಸಂದರ್ಭ ಆಯ್ದ ಮೆಟ್ರೋ ಟರ್ಮಿನಲ್ಗಳಲ್ಲಿ ಉತ್ಪನ್ನಗಳನ್ನು ವಿತರಿಸುವಂತೆ ಪೋರ್ಟಲ್ಗಳ ಮೂಲಕ ಮನವಿ ಮಾಡಬಹುದಾಗಿದೆ. ಆದರೆ ಈ ಆನ್ಲೈನ್ ಸೇವೆ ಮೂಲಕ ಖರೀದಿಸಲಾಗುವ ಉತ್ಪನ್ನಗಳು ಮನೆಗಳಿಗೆ ತಲುಪಿಸಲಾಗುವುದಿಲ್ಲ ಎಂದು ದೆಹಲಿ ಮೆಟ್ರೋ ರೈಲು ನಿಗಮ ಅಧಿಕಾರಿ ತಿಳಿಸಿದ್ದಾರೆ.
ನಿರ್ದಿಷ್ಟ ಮೆಟ್ರೋ ಸ್ಟೇಷನ್ಗಳಾದ ಎಂ.ಜಿ.ರಸ್ತೆ, ಹುಡಾ ಸಿಟಿ ಸೆಂಟರ್, ನೋಯ್ಡಾ ಸೆಕ್ಟರ್ ೧೮, ಲಕ್ಷ್ಮೀ ನಗರ, ವೈಶಾಲಿ, ನೆಹರೂ ಪ್ಲೇಸ್, ದ್ವಾರಕಾ ಸೆಕ್ಟರ್ ೯, ಕಾಶ್ಮೀರಿ ಗೇಟ್, ರಾಜೀವ್ ಚೌಕ್ ಮತ್ತು ಜಿಟಿಬಿ ನಗರಗಳಲ್ಲಿ ಈ ವ್ಯವಸ್ಥೆ ಒದಗಿಸಲಾಗಿದೆ.
ಗುರ್ಗಾಂವ್ ಹಾಗೂ ನೋಯ್ಡಾ ಸೇರಿದಂತೆ ೧೦ ಸ್ವಯೋಚಾಲಿತ ಪಾರ್ಸೆಲ್ ಡೆಲಿವರಿ ಟರ್ಮಿನಲ್ಗಳಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸಹಾಯದಿಂದ ವಾಪತಿ ಆಯ್ಕೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನ್ಲೈನ್ ಗ್ರಾಹಕರಿಗೆ ಎಸ್ಎಂಎಸ್ ಅಥವಾ ಇ-ಮೇಲ್ ಮೂಲಕ ಒನ್ ಟೈಮ್ ಪಾಸ್ವರ್ಡ್(ಒಟಿಪಿ) ಕಳುಹಿಸಲಿದ್ದು, ಗ್ರಾಹಕರು ಟರ್ಮಿನಲ್ ಸಿಬ್ಬಂದಿಗೆ ಈ ಒಟಿಪಿ ನೀಡಿ ತಮ್ಮ ಉತ್ಪನ್ನಗಳನ್ನು ಖರೀದಿಸಬಹುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.