Date : Monday, 15-02-2016
ನವದೆಹಲಿ: ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ದೇಶದ್ರೋಹದ ಚಟುವಟಿಕೆಯ ವಿವಾದಗಳು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಜೆಎನ್ಯು ಆವರಣದಲ್ಲಿ ಕೆಲ ವಿದ್ಯಾರ್ಥಿಗಳು ‘ಪಾಕಿಸ್ಥಾನ ಜಿಂದಾಬಾದ್’ ’ಭಾರತ್ ಬರ್ಬಾದ್’ ಎಂಬ ಘೋಷಣೆಗಳನ್ನು ಕೂಗುವ ವೀಡಿಯೋವೊಂದು ಸಿಕ್ಕಿದ್ದು ಭಾರೀ ಚರ್ಚೆಗೆ...
Date : Monday, 15-02-2016
ಶ್ರಿನಗರ: ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಮುಖಂಡ ಸೈಯದ್ ಅಲಿ ಶಾ ಗಿಲಾನಿಯನ್ನು ಹತ್ಯೆ ಮಾಡುವುದಾಗಿ ಭೂಗತ ದೊರೆ ರವಿ ಪೂಜಾರಿ ಬೆದರಿಕೆ ಹಾಕಿದ್ದಾನೆ. ಶ್ರೀನಗರದಲ್ಲಿನ ಹುರಿಯತ್ ಕಛೇರಿಯ ಲ್ಯಾಂಡ್ಲೈನ್ಗೆ ಕರೆ ಮಾಡಿದ್ದ ಪೂಜಾರಿ, ಗಿಲಾನಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ. ಆತನ ಮಾತುಗಳು...
Date : Monday, 15-02-2016
ಪಠಾನ್ಕೋಟ್: ಕಳೆದ ತಿಂಗಳು ಪಂಜಾಬ್ನ ಪಠಾನ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿ ಸೇನಾ ಪಡೆಗಳ ಗುಂಡಿಗೆ ಬಲಿಯಾದ ನಾಲ್ವರು ಉಗ್ರರ ಮೃತದೇಹವನ್ನು ವಿಶೇಷ ತನಿಖಾ ತಂಡ ಸಂರಕ್ಷಿಸಿ ಇಟ್ಟಿದ್ದು, ಅದರ ಫೋಟೋವನ್ನು ಪಾಕಿಸ್ಥಾನಕ್ಕೆ ಕಳುಹಿಸಿಕೊಡಲಿದೆ. ಅನಿರ್ದಿಷ್ಟಾವಧಿಯವರೆಗೂ ಉಗ್ರರ ಮೃತದೇಹಗಳನ್ನು ಸಂರಕ್ಷಿಸಿ ಇಡಲು...
Date : Monday, 15-02-2016
ಲೇಹ್: ಸಿಯಾಚಿನ್ನಲ್ಲಿ ನಡೆದ ಹಿಮಪಾತದಲ್ಲಿ ಮೃತರಾದ 9 ಯೋಧರ ಮೃತದೇಹಗಳನ್ನು ಭಾನುವಾರ ಲೇಹ್ಗೆ ಕರೆತರಲಾಗಿದ್ದು, ಸೋಮವಾರ ದೆಹಲಿಗೆ ತರಲಾಗುತ್ತಿದೆ. ಲೇಹ್ನಲ್ಲಿ ಸೋಮವಾರ ಬೆಳಿಗ್ಗೆ ಹುತಾತ್ಮರಿಗೆ ಗೌರವ ನಮನ ಕಾರ್ಯಕ್ರಮ ಇರಲಿದೆ, ಇದರಲ್ಲಿ ಲೇಹ್ ಕಾರ್ಪ್ಸ್ ಕಮಾಂಡರ್ಗಳುನ ಭಾಗಿಯಾಗಲಿದ್ದಾರೆ. ಬಳಿಕ ದೇಹಗಳನ್ನು ದೆಹಲಿಗೆ...
Date : Monday, 15-02-2016
ಮುಂಬಯಿ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಗೆ ರೂ.9,800 ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಭಾರತೀಯ ರೈಲ್ವೇ ಘೋಷಿಸಿದೆ. ಈ ರೈಲು 300-350 ಕೆಎಂಪಿಎಚ್ ವೇಗದಲ್ಲಿ ಚಲಿಸಲಿದ್ದು, ಜಪಾನಿನ ಇನ್ವೆಸ್ಟ್ಮೆಂಟ್ ಕೋ-ಅಪರೇಶನ್ ಏಜೆನ್ಸಿ(ಜೆಐಸಿಎ) ಇದಕ್ಕೆ ಶೇ.81ರಷ್ಟು ಹೂಡಿಕೆ ಮಾಡಲಿದೆ. ಲೋನ್ ಮುಖಾಂತರ ಶೇ.0.1ರಷ್ಟು...
Date : Monday, 15-02-2016
ಮುಂಬಯಿ: ಮಹಾರಾಷ್ಟ್ರದಲ್ಲಿ ಪ್ರಸ್ತುತ ನಡೆಯುತ್ತಿರುವ ’ಮೇಕ್ ಇನ್ ಇಂಡಿಯಾ’ ವೀಕ್ ಕಾರ್ಯಕ್ರಮದಲ್ಲಿ ಭಾನುವಾರ ಬೆಂಕಿ ಅವಘಢ ಸಂಭವಿಸಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಘಟನೆ ನಡೆಯುವ ವೇಳೆ ಸ್ಥಳದಲ್ಲಿ ಗಣ್ಯರ ನಿಯೋಗ, ರಾಜಕಾರಣಿಗಳು, ಹೂಡಿಕೆದಾರರು, ನಟರು ಇದ್ದರು. ಅವರನ್ನೆಲ್ಲಾ ಸುರಕ್ಷಿತವಾಗಿ...
Date : Monday, 15-02-2016
ಮುಂಬಯಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿತ್ತ ಸಚಿವರಾಗಿದ್ದ ಸಂದರ್ಭ ಉತ್ತಮ ಕಾರ್ಯವನ್ನು ಮಾಡಿದ್ದಾರೆ, ಆದರೆ ಅವರು ಪ್ರಧಾನಿಯಾದ ಬಳಿಕ ಸುಧಾರಣಾ ಕ್ರಮಗಳು ಸ್ಥಗಿತಗೊಂಡವು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ...
Date : Saturday, 13-02-2016
ಮುಂಬಯಿ: ಅಮೇರಿಕಾದಲ್ಲಿ ಜಾರಿಯಲ್ಲಿರುವ ’ಇನ್ಫಿ ಮೇಕರ್ ಅವಾರ್ಡ್’ ಪ್ರಶಸ್ತಿಯನ್ನು ಭಾರತದಲ್ಲೂ ಜಾರಿಗೊಳಿಸಲು ಇನ್ಫೋಸಿಸ್ ನಿರ್ಧರಿಸಿದೆ. ಅದರಂತೆ ಜಗತ್ತಿನಾದ್ಯಂತ ಜನರ ಯಾವುದೇ ಸಮಸ್ಯೆ, ದುಃಖ, ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡಿ ಬಗೆಹರಿಸಿದಲ್ಲಿ ಆತನಿಗೆ 5 ಲಕ್ಷ ರೂ.ಗಳ ಪ್ರಶಸ್ತಿ ದೊರೆಯಲಿದೆ. ಇನ್ಫಿ ಮೇಕರ್ ವಾರ್ಷಿಕ...
Date : Saturday, 13-02-2016
ನವದೆಹಲಿ: ಹಣಕಾಸು ಸಚಿವ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಪ್ರಸ್ತುತ ಪ್ರಧಾನಿಯ ’ಲಾಸ್ಟ್ ವರ್ಡ್’ ಇರುವ ಸರ್ಕಾರವನ್ನು ಭಾರತ ಹೊಂದಿದೆ ಎನ್ನುವ ಮೂಲಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ತಿರುಗೇಟು ನೀಡಿದ್ದಾರೆ. ಮಾಧ್ಯಮ...
Date : Saturday, 13-02-2016
ಚೆನ್ನೈ: ಎಐಎಡಿಎಂಕೆ ಪಕ್ಷ ತಮಿಳುನಾಡಿನಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರುವುದನ್ನು ಶತಾಯ ಗತಾಯ ತಡೆಯುವ ಸಲುವಾಗಿ ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಮೈತ್ರಿ ಮಾಡಿಕೊಂಡಿವೆ. ಶನಿವಾರ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಅವರು ಡಿಎಂಕೆ ಮುಖಂಡ ಕರುಣಾನಿಧಿಯನ್ನು ಚೆನ್ನೈನ...