ನವದೆಹಲಿ: ದೇಶದ ವಿರುದ್ಧ ಮಾತನಾಡುವ ವ್ಯಕ್ತಿಯನ್ನು ಒಲಿಂಪಿಕ್ನಲ್ಲಿ ಪದಕ ಗೆದ್ದವನಂತೆ ಸ್ವಾಗತಿಸಲು ಹೇಗೆ ಸಾಧ್ಯ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಪ್ರಶ್ನಿಸಿದ್ದಾರೆ.
ಶುಕ್ರವಾರ ಜೆಎನ್ಯು ಕ್ಯಾಂಪಸ್ನಲ್ಲಿ ತಮ್ಮ ಸಿನಿಮಾ ’ಬುದ್ಧ ಇನ್ ಟ್ರಾಫಿಕ್ ಜಾಮ್’ನ ಸ್ಕ್ರೀನಿಂಗ್ ನಡೆಸಿ ಮಾತನಾಡಿದ ಅವರು ಕನ್ಹಯ್ಯ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
‘ಆತ ಜಾಮೀನಿನಿಂದ ಹೊರಗಿದ್ದಾನೆ, ಆತನಿಗೆ ಅಭೂತಪೂರ್ವ ಸ್ವಾಗತ ಕೋರಲು ಆತನೇನು ಒಲಿಂಪಿಕ್ನಲ್ಲಿ ಪದಕ ಗೆದ್ದು ಬಂದಿಲ್ಲ, ಆತ ಸಚಿನ್, ಸೈನಾ ಅಥವಾ ಹನುಮಂತಪ್ಪ ಅಲ್ಲ’ ಎಂದಿದ್ದಾರೆ.
’ನಿನ್ನ ಪ್ರಕಾರ ದೇಶದಲ್ಲಿ ತಪ್ಪು ಎನಿಸಿದ ಬಗ್ಗೆ ನೀನು ಮಾತನಾಡುತ್ತಿ, ಆದರೆ ಈ ದೇಶಕ್ಕೆ ಟೀಕೆಯೊಂದನ್ನು ಬಿಟ್ಟು ಬೇರೆ ಏನನ್ನಾದರು ನೀನು ನೀಡಿದ್ದೀಯಾ? ಯಾವುದು ದೇಶದಲ್ಲಿ ನಡೆಯುತ್ತಿಲ್ಲ ಎಂಬುದರ ಬಗ್ಗೆ ಮಾತನಾಡಬೇಡ, ಏನು ಆಗುತ್ತಿದೆ ಎಂಬುದರ ಬಗ್ಗೆ ಮಾತನಾಡು. ನೀನಿಲ್ಲಿ ಓದಲು ಬಂದಿದ್ದೀಯಾ, ರಾಜಕೀಯ ಮಾಡಲು ಅಲ್ಲ. ರಾಜಕೀಯ ಮಾಡುವುದಾದರೂ ದೇಶದ ವಿರುದ್ಧ ಮಾಡಬೇಡ’ ಎಂದಿದ್ದಾರೆ.
ಅವರ ಸ್ಕ್ರೀನಿಂಗ್ನಲ್ಲಿ ಅಪಾರ ಪ್ರಮಾಣದ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದರು. ಇದರಿಂದಾಗಿ ಜೆಎನ್ಯು ಪವಿತ್ರವಾಯಿತು, ಥ್ಯಾಂಕ್ಯೂ ವಿದ್ಯಾರ್ಥಿಗಳೇ ಎಂದು ಖೇರ್ ಟ್ವಿಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.