Date : Tuesday, 07-03-2017
ರಾಮೇಶ್ವರಂ: ತಮಿಳುನಾಡು ಕರಾವಳಿ ಗಡಿ ಸಮೀಪದ ದನುಶ್ಕೋಡಿ ಮತ್ತಿ ಕಚತೀವು ಸಮೀಪ ಮೀನುಗಾರಿಕೆ ಮಾಡುತ್ತಿದ್ದ ಭಾರತೀಯ ಮೀನುಗಾರರ ಗುಂಪಿನ ಮೇಲೆ ಶ್ರೀಲಂಕಾ ನೌಕಾಪಡೆಯ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಒರ್ವ ಮೃತಪಟ್ಟಿದ್ದಾನೆ. ಗುಂಡಿನ ದಾಳಿಯಲ್ಲಿ ಪ್ರಿಚೋ ಎಂಬ 22 ವರ್ಷದ ಮೀನುಗಾರ...
Date : Tuesday, 07-03-2017
ಅಮರಾವತಿ: ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ಮೊದಲ ಐತಿಹಾಸಿಕ ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನ ಆರಂಭಗೊಂಡಿದೆ. ಆಂಧ್ರಪ್ರದೇಶ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಎರಡು ಮನೆಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಶಾಸಕಾಂಗದ ಹೊಸ ಕಟ್ಟಡ ವೆಲಗಪುಡಿ ಗ್ರಾಮದಲ್ಲಿ ನಿರ್ಮಿಸಲಾಗಿದೆ....
Date : Tuesday, 07-03-2017
ಪಾಟ್ನಾ: ಹುಟ್ಟುಹಬ್ಬದಂದು ಕೇಕ್ ಕಟ್ ಮಾಡುವುದು ಪಾಶ್ಚಿಮಾತ್ಯ ಸಂಸ್ಕೃತಿ. ದೇವಸ್ಥಾನಕ್ಕೆ ತೆರಳಿ ಪ್ರಾರ್ಥಿಸುವುದು ನಮ್ಮ ಭಾರತೀಯ ಸಂಸ್ಕೃತಿ ಎಂದು ಕೇಂದ್ರ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಖಾತೆ ಸಚಿವ ಗಿರಿರಾಜ ಸಿಂಗ್ ಹೇಳಿದ್ದಾರೆ. ಬಿಹಾರದ ಔರಂಗಾಬಾದ್ ಜಿಲ್ಲೆಯ ಧಾರ್ಮಿಕ ಸಮಾರಂಭವೊಂದರಲ್ಲಿ ಈ...
Date : Tuesday, 07-03-2017
ಪಿತೋರಗಢ್: ಉತ್ತರಾಖಂಡದ ಪಿತೋರಗಢ ಪ್ರದೇಶದಲ್ಲಿ ಮಂಗಳವಾರ ಭಾರತ ಮತ್ತು ನೇಪಾಳದ ನಡುವೆ ‘ಸೂರ್ಯ ಕಿರಣ್-Xi’ ಜಂಟಿ ಸಮರಾಭ್ಯಾಸ ಆರಂಭಗೊಂಡಿದೆ. ಇದು ಉಭಯ ದೇಶಗಳ ಸೇನೆಗಳ ನಡುವಣ ಬ್ಯಾಟಲಿಯನ್ ಹಂತದ ಜಂಟಿ ಸಮರಾಭ್ಯಾಸವಾಗಿದೆ. ಎರಡು ವಾರಗಳ ಕಾಲ ನಡೆಯುವ ಸಮರಾಭ್ಯಾಸ ಇದಾಗಿದ್ದು, ದಂಗೆಗಳ...
Date : Monday, 06-03-2017
ನವದೆಹಲಿ: ಅಸ್ಸಾಂನ ದಂಪತಿಗೆ ಜನಿಸಿದ 8 ದಿನಗಳ ಹೆಣ್ಣು ಮಗುವಿನ ತುರ್ತು ವೈದ್ಯಕೀಯ ಚಿಕಿತ್ಸೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಹಕರಿಸಿದ್ದಾರೆ. ಶ್ವಾಸಕೋಷದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಅಸ್ಸಾಂನ ದಬ್ರಘಟ್ನಿಂದ ದೆಹಲಿಗೆ ಏರ್ ಆಂಬ್ಯುಲೆನ್ಸ್ ಮೂಲಕ ಕರೆತರಲಾಗಿದ್ದು, ವಿಮಾನ ನಿಲ್ದಾಣದಿಂದ ಗಂಗಾರಾಮ್ಸ್ ಆಸ್ಪತ್ರೆಗೆ...
Date : Monday, 06-03-2017
ನವದೆಹಲಿ: 26/11ರ ಮುಂಬಯಿ ದಾಳಿಯನ್ನು ಪಾಕ್ ಮೂಲದ ಭಯೋತ್ಪಾದಕರ ತಂಡವೇ ನಡೆಸಿದ್ದು ಎಂದು ಪಾಕಿಸ್ಥಾನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜನರಲ್ ಮಹಮೂದ್ ಅಲಿ ದುರ್ರಾನಿ ಸೋಮವಾರ ಹೇಳಿದ್ದಾರೆ. ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಎಂಡ್ ಅನಾಲಿಸಿಸ್ನ 19ನೇ ಏಷ್ಯನ್ ಭದ್ರತಾ...
Date : Monday, 06-03-2017
ನವದೆಹಲಿ: ಭಯೋತ್ಪಾದನೆ ಜಾಗತಿಕ ಭದ್ರತೆಗೆ ಅತ್ಯಂತ ವ್ಯಾಪಕ ಮತ್ತು ಗಂಭೀರ ಬೆದರಿಕೆಯಾಗಿದೆ ಎಂದು ಹೇಳಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಏಷ್ಯಾದ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಭಯೋತ್ಪಾದನೆ ಜಾಗತಿಕ ಭದ್ರತೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ...
Date : Monday, 06-03-2017
ವಾರಣಾಸಿ: ಇಲ್ಲಿಯ ಗಡ್ವಾಘಾಟ್ ಆಶ್ರಮದಿಂದ ರಾಮನಗರ ನಡುವೆ ರೋಡ್ ಶೋ ನಡೆಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಲಾಲ್ ಬಹಾದೂರ್ ಶಾಸ್ತ್ರಿ ಸ್ಮಾರಕಕ್ಕೆ ತೆರಳಿ ಅವರಿಗೆ ಗೌರವ ಅರ್ಪಿಸಿದರು. ಪ್ರಧಾನಿ ಮೋದಿ ಅವರು ರೋಹಾನಿಯಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಘಾಜಿಪುರ್, ವಾರಣಾಸಿ,...
Date : Monday, 06-03-2017
ವಾರಣಾಸಿ: ಇಲ್ಲಿಯ ಪ್ರಸಿದ್ಧ ಗಡ್ವಾಘಾಟ್ ಆಶ್ರಮಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆಶ್ರಮದ ಹಸುಗಳಿಗೆ ಆಹಾರ ನೀಡಿದರು. ನಂತರ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿ ಮಹಂತ್ ಶಾರದಾನಂದ ಅವರನ್ನು ಭೇಟಿ ಮಾಡಿದ್ದಾರೆ. ಆಶ್ರಮದ ವ್ಯವಸ್ಥಾಪಕ ಸಮಿತಿ ಸದಸ್ಯರು ಪ್ರಧಾನಿ ಮೋದಿ...
Date : Monday, 06-03-2017
ಹೈದರಾಬಾದ್: ಡಿಜಿಟಲೀಕರಣವನ್ನು ಬೆಂಬಲಿಸುವ ಗುರಿಯೊಂದಿಗೆ ಗೂಗಲ್ ಇಂಡಿಯಾ ಮತ್ತು ತೆಲಂಗಾಣ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ತೆಲಂಗಾಣ ಸರ್ಕಾರದ ಟಿ-ಹಬ್ ಯೋಜನೆಯ ಅಡಿಯಲ್ಲಿ ಅರ್ಹ ಸ್ಟಾರ್ಟ್-ಅಪ್ ಉದ್ಯಮಿಗಳಿಗೆ ಗೂಗಲ್ ಕ್ಲೌಡ್ ಉತ್ಪನ್ನಗಳು ಮತ್ತು ಗೂಗಲ್ ಕ್ಲೌಡ್ ವೇದಿಕೆ ಅಡಿಯಲ್ಲಿ ಬರುವ ಎಲ್ಲ...