News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೆಲ್ಬೋರ್ನ್‌ನಲ್ಲಿ ನಡೆಯಲಿದೆ ಪುರುಷ, ಮಹಿಳಾ ಟಿ20 ವಿಶ್ವಕಪ್ ಪಂದ್ಯಾಟ

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಈ ಬಾರಿಯ ಪುರುಷ ಮತ್ತು ಮಹಿಳೆಯರ ಟಿ20 ವಿಶ್ವಕಪ್ ಆಯೋಜನೆಗೊಳ್ಳಲಿದೆ. ಮಹಿಳೆಯರ ಟಿ20 ಫೆಬ್ರವರಿ.21ರಿಂದ ಮಾ.8ರವರೆಗೆ ಆಯೋಜನೆಗೊಳ್ಳಲಿದೆ. ಒಟ್ಟು 10 ತಂಡಗಳು ಪಂದ್ಯದಲ್ಲಿ ಭಾಗವಹಿಸಲಿವೆ. ಪುರುಷರ ಟಿ20ವಿಶ್ವಕಪ್ ಅಕ್ಟೋಬರ್.18ರಿಂದ ನ.15ರವರೆಗೆ ನಡೆಯಲಿದ್ದು, 16 ತಂಡಗಳು ಕಣದಲ್ಲಿರಲಿದೆ....

Read More

ಜ.31ರಿಂದ ದೆಹಲಿಯಲ್ಲಿ ‘ಖೇಲೋ ಇಂಡಿಯಾ’ ಸ್ಕೂಲ್ ಗೇಮ್ಸ್

ನವದೆಹಲಿ: ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯವು ಜ.31ರಿಂದ ನವದೆಹಲಿಯಲ್ಲಿ ‘ಖೇಲೋ ಇಂಡಿಯಾ’ ಸ್ಕೂಲ್ ಗೇಮ್ಸ್ 2018ನ್ನು ಆಯೋಜನೆಗೊಳಿಸುತ್ತಿದೆ. ಶಾಲಾ ಮಟ್ಟದಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ಸಲುವಾಗಿ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ 2018ನ್ನು ಆಯೋಜನೆಗೊಳಿಸಲಾಗಿದೆ. ಇದರಿಂದ ದೇಶದಲ್ಲಿ ಕ್ರೀಡಾ...

Read More

ರಾಜ್‌ಘಾಟ್‌ನಲ್ಲಿ ರಾಷ್ಟ್ರಪಿತನಿಗೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ, ರಾಷ್ಟ್ರಪತಿ

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ೭೦ನೇ ಪುಣ್ಯತಿಥಿಯ ಅಂಗವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮನ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Read More

ಯು19 ವಿಶ್ವಕಪ್: ಸೆಮಿಫೈನಲ್‌ನಲ್ಲಿ ಪಾಕ್ ಸೋಲಿಸಿ ಭಾರತ ಫೈನಲ್‌ಗೆ

ಕ್ರಿಸ್ತ್‌ಚರ್ಚ್: ಅಂಡರ್ 19 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಭಾರತೀಯ ಬಾಲಕರ ತಂಡ ಪಾಕಿಸ್ಥಾನವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ನ್ಯೂಜಿಲ್ಯಾಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 272 ರನ್‌ಗಳನ್ನು ಬಾರಿಸಿತ್ತು. ಇದನ್ನು ಬೆನ್ನತ್ತಿದ ಪಾಕಿಸ್ಥಾನಿಯರು 29.3 ಓವರ್‌ಗಳಿಗೆಯೇ...

Read More

ವೈಫೈ ಹಾಟ್‌ಸ್ಪಾಟ್ ಆದ ಪುಣೆ ನಗರ: ಡಿಜಿಟಲೀಕರಣಕ್ಕೆ ಒತ್ತು

ಪುಣೆ: ಇನ್ನು ಮುಂದೆ ಪುಣೆ ನಿವಾಸಿಗಳು ಯಾವುದೇ ಖರ್ಚಿಲ್ಲದೆ ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳಬಹುದು. ಈ ನಗರದಾದ್ಯಂತ ಉಚಿತ ವೈಫೈ ಸೇವೆಯನ್ನು ಆರಂಭಿಸಲಾಗಿದೆ. ಪುಣೆ ಮುನ್ಸಿಪಲ್ ಕಾರ್ಪೋರೇಶನ್ ಸುಮಾರು 150 ವೈಫೈ ಹಾಟ್‌ಸ್ಪಾಟ್‌ಗಳನ್ನು ಪುಣೆಯಾದ್ಯಂತ ಪರಿಚಯಿಸಿದೆ. ೨೦೨೦ರ ವೇಳೆಗೆ ಪುಣೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಗುರಿಯನ್ನು ಅದು...

Read More

ಕೇರಳ: ಏಷ್ಯಾದ ಅತೀ ಹಳೆಯ ಡ್ಯಾಂನಲ್ಲಿ ಲೇಝರ್ ಸ್ಕ್ರೀನಿಂಗ್

ತಿರುವನಂತಪುರಂ: ಏಷ್ಯಾದ ಅತ್ಯಂತ ಹಳೆಯ ಅಣೆಕಟ್ಟು ಎಂಬ ಕೀರ್ತಿ ಪಡೆದಿರುವ ಕೇರಳದ ಇಡುಕ್ಕಿ ಡ್ಯಾಂನಲ್ಲಿ ಇನ್ನು ಮುಂದೆ ಲೇಝರ್ ಸ್ಕ್ರೀನಿಂಗ್ ನಡೆಯಲಿದೆ. ಈ ಮೂಲಕ ಅದು ಟೂರಿಸ್ಟ್ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಲಿದೆ. ಇಡುಕ್ಕಿ ಡ್ಯಾಂನಲ್ಲಿ ಕೇರಳ ರಾಜ್ಯದ ಇತಿಹಾಸವನ್ನು ತೋರಿಸುವ ಲೇಝರ್...

Read More

ರಿವರ್ ಟ್ಯಾಕ್ಸಿ ಸೇವೆ ಆರಂಭಿಸಲು ಓಲಾದೊಂದಿಗೆ ಅಸ್ಸಾಂ ಒಪ್ಪಂದ

ದಿಸ್ಪುರ್: ತನ್ನ ರಾಜ್ಯದಲ್ಲಿ ರಿವರ್ ಟ್ಯಾಕ್ಸಿ ಸೇವೆಯನ್ನು ಆರಂಭಿಸುವ ಸಲುವಾಗಿ ಅಸ್ಸಾಂ, ಟ್ಯಾಕ್ಸಿ ದಿಗ್ಗಜ ಓಲಾದೊಂದಿಗೆ ಕೈಜೋಡಿಸಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಓಲಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಿರುವ ಅಸ್ಸಾಂ ಸರ್ಕಾರ ತನ್ನ ರಾಜ್ಯದಲ್ಲಿ ರಿವರ್ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಲಿದೆ. ಇದಕ್ಕೂ ಮುಂಚಿತವಾಗಿ ಬ್ರಹ್ಮಪುತ್ರ ನದಿಯಲ್ಲಿ...

Read More

ಕೆಂಪುಕೋಟೆಯಲ್ಲಿ ನಡೆಯುತ್ತಿದೆ ‘ಭಾರತ್ ಪರ್ವ್’

ನವದೆಹಲಿ: ಪ್ರವಾಸೋದ್ಯಮ ಸಚಿವಾಲಯವು ಜ.26ರಿಂದ ಜ.31ರವರೆಗೆ ‘ಭಾರತ್ ಪರ್ವ್’ನ್ನು ಕೆಂಪುಕೋಟೆಯಲ್ಲಿ ಆಯೋಜನೆಗೊಳಿಸಿದ್ದು, ‘ನಮ್ಮ ದೇಶವನ್ನು ನೋಡಿ’ ಎಂಬ ವಿಷಯದ ಮೇಲೆ ಇದು ಕೇಂದ್ರಿತವಾಗಿದೆ. ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಪರ್ವದಲ್ಲಿ ಪಾಲ್ಗೊಳ್ಳುತ್ತಿದ್ದು, ದೇಶದ ವೈವಿಧ್ಯ ಸಂಸ್ಕೃತಿ, ಆಹಾರ, ಕರಕುಶಲಗಳ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ....

Read More

18 ರಾಷ್ಟ್ರಗಳ ರಾಷ್ಟ್ರಗೀತೆ ಹಾಡುತ್ತಾನೆ 13 ವರ್ಷದ ಯುಪಿ ಬಾಲಕ

ಲಕ್ನೋ: ನಮ್ಮ ರಾಷ್ಟ್ರಗೀತೆಯನ್ನು ಹಾಡುವ ವಿಷಯದಲ್ಲಿ ನಾವೇ ವಿವಾದ ಸೃಷ್ಟಿಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಉತ್ತರಪ್ರದೇಶದ 13 ವರ್ಷದ ಬಾಲಕನೊಬ್ಬ ಬರೋಬ್ಬರಿ 18 ದೇಶಗಳ ರಾಷ್ಟ್ರಗೀತೆಗಳನ್ನು ಹಾಡುತ್ತಾನೆ. ರುದ್ರ ಪ್ರತಾಪ್ ಸಿಂಗ್, ಕ್ರಿಕೆಟ್ ಮತ್ತು ಫುಟ್ಬಾಲ್ ಟೂರ್ನಮೆಂಟ್‌ಗಳ ಮುನ್ನ ಪ್ರಸಾರವಾಗುವ ಆಯಾ ರಾಷ್ಟ್ರಗಳ ರಾಷ್ಟ್ರಗೀತೆಯನ್ನು ಟಿವಿಯಲ್ಲಿ...

Read More

ಭಾರತೀಯ ಅಂಚೆ ಸಿಬ್ಬಂದಿಗಳಿಗೆ ಇನ್ನು ಮುಂದೆ ಖಾದಿ ಸಮವಸ್ತ್ರ

ನವದೆಹಲಿ: ಫೆಬ್ರವರಿ ತಿಂಗಳಿನಿಂದ ದೇಶದ ಎಲ್ಲಾ ಪೋಸ್ಟ್‌ಮ್ಯಾನ್ ಮತ್ತು ಪೋಸ್ಟ್ ವುಮೆನ್‌ಗಳು ಖಾದಿ ಸಮವಸ್ತ್ರಗಳನ್ನು ತೊಡಲಿದ್ದಾರೆ. ಇವರಿಗೆ ಸಮವಸ್ತ್ರ ಹಂಚಿಕೆ ಮಾಡಲು ಖಾದಿ ಮತ್ತು ಗ್ರಾಮೀಣ ಕೈಗಾರಿಕ ಸಮಿತಿ ರೂ.48 ಕೋಟಿ ರೂಪಾಯಿಗಳ ಆರ್ಡರ್ ಪಡೆದುಕೊಂಡಿದೆ. ಕೇಂದ್ರ ಸಣ್ಣ ಮತ್ತು ಮಧ್ಯಮ...

Read More

Recent News

Back To Top