ನವದೆಹಲಿ: ಎಂಪ್ಲಾಯ್ಸ್ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್(ಇಪಿಎಫ್ಓ) ಆಧಾರ್ನ್ನು UMANG ಮೊಬೈಲ್ ಅಪ್ಲಿಕೇಶನ್ ಮೂಲಕ ಪಿಎಫ್ ಅಕೌಂಟ್ (ಯೂನಿವರ್ಸಲ್ ಅಕೌಂಟ್ ನಂಬರ್)ಗೆ ಜೋಡಿಸುವ ಸೌಲಭ್ಯವನ್ನು ಹೊರತಂದಿದೆ.
UMANG ಮೊಬೈಲ್ ಆ್ಯಪ್ ನ ಇಪಿಎಫ್ಓ ಲಿಂಕ್ ಬಳಸಿ ಉದ್ಯೋಗಿಗಳು ತಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ಗೆ ಆಧಾರ್ ಲಿಂಕ್ ಮಾಡಬಹುದಾಗಿದೆ.
ಪ್ರಸ್ತುತ ಇರುವ ಇಪಿಎಫ್ಓ ವೆಬ್ಸೈಟ್ಗೆ ಹೆಚ್ಚುವರಿಯಾಗಿ ಈ ಸೌಲಭ್ಯವನ್ನು ಹೊರತರಲಾಗಿದೆ. ಇ-ಕೆವೈಸಿ ಪೋರ್ಟಲ್ನಲ್ಲಿರುವ ಫೀಚರ್ ಮೂಲಕ ಯುಎಎನ್ಗೆ ಆಧಾರ್ ಲಿಂಕ್ ಮಾಡುವ ಸೌಲಭ್ಯವಿದೆ.
ಡಿಜಿಟಲೀಕರಣಕ್ಕೆ ಉತ್ತೇಜನ ನೀಡಲು ಇಪಿಎಫ್ಓ ಇ-ನಾಮಿನೇಶನ್ ಸೌಲಭ್ಯವನ್ನೂ ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.