Date : Wednesday, 18-07-2018
ಚೆನ್ನೈ: ಪ್ರಾರ್ಥನೆಗಳನ್ನು ಸಲ್ಲಿಸುವ ಸಲುವಾಗಿ ಸಾರ್ವಜನಿಕ ಜಾಗಗಳನ್ನು ಅತಿಕ್ರಮಣ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ನಗುಂಬಕಂನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಟೆಂಟ್ ಹಾಕಿ ನಿರ್ದಿಷ್ಟ ಸಮುದಾಯದವರು ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು, ಇದನ್ನು ವಿರೋಧಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನಡೆಸಿ ಆದೇಶ ನೀಡಲಾಗಿದೆ. ಟೆಂಟ್‌ನ್ನು...
Date : Wednesday, 18-07-2018
ನವದೆಹಲಿ: ಫ್ರಾನ್ಸ್‌ನಲ್ಲಿ ಜರುಗಿದ ಸೊಟ್ಟೆವಿಲ್ಲೆ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಭಾರತದ ಜಾವೆಲಿನ್ ಥ್ರೋ ಆಟಗಾರ ನೀರಜ್ ಛೋಪ್ರಾ ಅವರು ಬಂಗಾರದ ಪದಕವನ್ನು ಜಯಿಸಿದ್ದಾರೆ. ಈಟಿಯನ್ನು 85.17 ಮೀಟರ್ ದೂರ ಎಸೆಯುವ ಮೂಲಕ ಅವರು ಬಂಗಾರದ ಸಾಧನೆಯನ್ನು ಮಾಡಿದ್ದಾರೆ. ಮಾಲ್ಡೋವ್ಸ್‌ನ ಆಂಡ್ರಿಯನ್ ಮರ್ಡೆರ್ ಅವರು...
Date : Wednesday, 18-07-2018
ನವದೆಹಲಿ: ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು, ಪ್ರಧಾನಿ ನರೇಂದ್ರ ಮೋದಿಯವರು ಕಲಾಪ ಸುಗುಮವಾಗಿ ನಡೆಯುವುದಕ್ಕೆ ಸಹಕರಿಸುವಂತೆ ಎಲ್ಲಾ ಪಕ್ಷಗಳಿಗೆ ಮನವಿ ಮಾಡಿದರು. ಎಲ್ಲಾ ಪಕ್ಷಗಳು ಸದನದಲ್ಲಿ ಎತ್ತುವ ಪ್ರತಿ ಪ್ರಶ್ನೆಗಳಿಗೂ ಉತ್ತರ ನೀಡಲು ಕೇಂದ್ರ ಸಿದ್ಧವಿದೆ ಎಂದ ಅವರು, ಈ...
Date : Wednesday, 18-07-2018
ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು, ಮಧ್ಯಪ್ರದೇಶ ಸ್ಟಾರ್ಟ್‌ಅಪ್ ಯಾತ್ರೆಗೆ ಮಂಗಳವಾರ ಚಾಲನೆ ನೀಡಿದ್ದಾರೆ. ಯುವ ಮನಸ್ಸುಗಳು ತಮ್ಮ ಸೃಜನಶೀಲತೆ ಮತ್ತು ಆವಿಷ್ಕಾರಗಳನ್ನು ಅನುಷ್ಠಾನಗೊಳಿಸಲು ಉತ್ತೇಜನ ನೀಡುವ ಸಲುವಾಗಿ ಈ ಸ್ಟಾರ್ಟ್‌ಅಪ್ ಯಾತ್ರೆ ಆರಂಭಗೊಂಡಿದೆ. ಈ ಕಾರ್ಯಕ್ರಮದಿಂದಾಗಿ ಮುಂದಿನ...
Date : Wednesday, 18-07-2018
ನ್ಯೂಯಾರ್ಕ್: ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಬಗ್ಗೆ ಹಲವಾರು ವಾದ ವಿವಾದಗಳಿವೆ. ಶಹಜಹಾನ್ ತನ್ನ ಪತ್ನಿ ಮುಮ್ತಾಜ್ ನೆನಪಿಗಾಗಿ ಕಟ್ಟಿದ ಪ್ರೇಮ ಸೌಧ ಇದೆಂದು ಅಧಿಕೃತವಾಗಿ ನಂಬಲಾದರೂ, ಇದರ ಹಿಂದೆ ಬೇರೆಯದ್ದೇ ಇತಿಹಾಸ ಇದೆ ಎಂಬುದು ಹಲವರ ವಾದವಾಗಿದೆ. ನ್ಯೂಯಾರ್ಕ್...
Date : Wednesday, 18-07-2018
ಮೀರತ್: ಕೆಲ ಮಹಿಳೆಯರು ಮುಖ, ತಲೆ ಮುಚ್ಚಿಕೊಳ್ಳಲು ಬಳಸುವ ಹೆಡ್ ಸ್ಕಾರ್ಫ್‌ಗೆ ಮೀರತ್‌ನ ಚೌಧರಿ ಚರಣ್ ಸಿಂಗ್ ಯೂನಿವರ್ಸಿಟಿ ನಿಷೇಧ ಹೇರಿದೆ. ಯಾವುದೇ ಧರ್ಮದ ಮಹಿಳೆಯರಾದರೂ ಸ್ಕಾರ್ಫ್ ಧರಿಸಿ ಆವರಣವನ್ನು ಪ್ರವೇಶ ಮಾಡುವಂತಿಲ್ಲ ಎಂದು ಯೂನಿವರ್ಸಿಟಿ ಆದೇಶಿಸಿದೆ. ವಿಶ್ವವಿದ್ಯಾಲಯದೊಳಗೆ ಅಪರಿಚಿತರು ಪ್ರವೇಶ...
Date : Tuesday, 17-07-2018
ನವದೆಹಲಿ: ಕಾಯಕಕ್ಕೆ ಅತೀವ ಪ್ರಾಮುಖ್ಯತೆ ನೀಡುವ ಪ್ರಧಾನಿ ನರೇಂದ್ರ ಮೋದಿಯವರು, ಹಗಲು ರಾತ್ರಿ ಎನ್ನದೆ ದೇಶದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಕಳೆದ ಶನಿವಾರ ತಡ ರಾತ್ರಿ ಜಗತ್ತು ಮಲಗಿದ್ದ ವೇಳೆ ಅವರು ತಮ್ಮ ಸ್ವಕ್ಷೇತ್ರ ವಾರಾಣಸಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ್ದಾರೆ. ಅವರ...
Date : Tuesday, 17-07-2018
ಭುವನೇಶ್ವರ: ಕೌಶಲ್ಯ ಭರಿತ ಮಾನವ ಸಂಪನ್ಮೂಲಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ(ಎನ್‌ಎಸ್‌ಟಿಐ)ಯನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ. ಒರಿಸ್ಸಾ ರಾಜಧಾನಿ ಭುವನೇಶ್ವರದ ಬರಂಗ್‌ನಲ್ಲಿ ಎನ್‌ಎಸ್‌ಟಿಐಗೆ ಕೇಂದ್ರ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಚಿವ...
Date : Tuesday, 17-07-2018
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಉಪಗ್ರಹ ಉಡಾವಣಾ ವಾಹಕ(ರಾಕೆಟ್)ಗಳಿಗೆ ಶಕ್ತಿ ತುಂಬುವ ವಿಕಾಸ್ ಎಂಜಿನ್‌ನನ್ನು ಸುಧಾರಣೆಗೊಳಿಸಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಅದರ ಮೂರು ಉಪಗ್ರಹ ಉಡಾವಣಾ ವಾಹಕಗಳ ಸ್ಪೇಸ್‌ಕ್ರಾಫ್ಟ್ ಲಿಫ್ಟಿಂಗ್ ಸಾಮರ್ಥ್ಯಕ್ಕೆ ಹೆಚ್ಚಿನ ಶಕ್ತಿ ಸೇರ್ಪಡೆಯಾಗಲಿದೆ. ಹೈ-ಥ್ರಸ್ಟ್ ವಿಕಾಸ್...
Date : Tuesday, 17-07-2018
ನವದೆಹಲಿ: ಬುಧವಾರದಿಂದ ಮಳೆಗಾಲದ ಸಂಸತ್ತು ಅಧಿವೇಶನ ಆರಂಭಗೊಳ್ಳಲಿದೆ. ಅಧಿವೇಶನವನ್ನು ಫಲದಾಯಕವನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಅಧಿವೇಶನಕ್ಕೂ ಮುಂಚಿತವಾಗಿ ಇಂದು ಸರ್ವ ಪಕ್ಷ ಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗುತ್ತಿದ್ದಾರೆ. ಸುಗಮ ಕಲಾಪಕ್ಕೆ ಸಹಕರಿಸುವಂತೆ ಎಲ್ಲಾ ಪಕ್ಷಗಳಲ್ಲಿ ಅವರು...