ಲತೆಹಾರ್: ಝಾರ್ಖಂಡ್ನಲ್ಲಿನ ಮೋಸ್ಟ್ ವಾಂಟೆಡ್ ನಕ್ಸಲ್ವೊಬ್ಬ ಮಂಗಳವಾರ ಪೊಲೀಸರಿಗೆ ಶರಣಾಗತನಾಗಿದ್ದಾನೆ. ಈತನ ತಲೆ ಮೇಲೆ ಪೊಲೀಸರು ರೂ.3ಲಕ್ಷ ಬಹುಮಾನವನ್ನು ಘೋಷಣೆ ಮಾಡಿದ್ದರು.
ಬ್ರಹ್ಮದೇವ್ ಶರಣಾದ ನಕ್ಸಲ್ ಆಗಿದ್ದು, ಈತನ ನಕ್ಸಲ್ ಝೋನ್ನ ತೃತೀಯ ಸಮ್ಮೇಳನ್ ಪ್ರಸ್ತುತಿ ಕಮಿಟಿಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. 10ನೇ ವಯಸ್ಸಿನಲ್ಲೇ ನಕ್ಸಲ್ ಪಡೆಗೆ ಸೇರ್ಪಡೆಗೊಂಡಿದ್ದ ಎನ್ನಲಾಗಿದೆ.
4-5 ವರ್ಷಗಳ ಕಾಲ ನಕ್ಸಲ್ ಪಡೆಯಲ್ಲಿದ್ದು, ಬಳಿಕ ಅದನ್ನು ಆತ ತೊರೆದಿದ್ದ. ಆದರೆ ನಕ್ಸಲರು ಈತನನ್ನು ಬೆಂಬಿಡದೆ ಮತ್ತೆ ತಮ್ಮ ಪಡೆಗೆ ಸೇರ್ಪಡೆಗೊಳಿಸಿದ್ದರು ಎನ್ನಲಾಗಿದೆ.
ಇದೀಗ ಆತ ಲತೆಹಾರ್ ಪೊಲೀಸ್ ಸ್ಟೇಶನ್ನಲ್ಲಿ ಶರಣಾಗಿದ್ದಾನೆ, ಹೂವಿನ ಹಾರ ಹಾಕಿ, ಉಡುಗೊರೆ ಕೊಟ್ಟು ಈತನನ್ನು ಪೊಲೀಸರು ಸ್ವಾಗತಿಸಿದ್ದಾರೆ. ಈತನ ಶರಣಾಗತಿಯಿಂದಾಗಿ ಝಾರ್ಖಂಡ್ನಲ್ಲಿ ನಕ್ಸಲರ ಬಲ ಅರ್ಧದಷ್ಟು ಕುಸಿದಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.