ನವದೆಹಲಿ: ವಿಶ್ವದಲ್ಲೇ ಅತೀದೊಡ್ಡ ಶೌಚಾಲಯ ನಿರ್ಮಾಣದ ಯೋಜನೆ ಭಾರತದಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಸ್ವಚ್ಛ ಭಾರತ’ ಅಭಿಯಾನ 111 ಮಿಲಿಯನ್ ಟಾಯ್ಲೆಟ್ಗಳನ್ನು 5 ವರ್ಷದಲ್ಲಿ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ.
ಈ ಯೋಜನೆಯಿಂದಾಗಿ ದೇಶದ ಆರೋಗ್ಯ, ಘನತೆ, ಸುರಕ್ಷತೆ ವೃದ್ಧಿಯಾಗಲಿದೆ. ಮಾತ್ರವಲ್ಲ ಶೌಚಾಲಯ ನಿರ್ಮಾಣದ ಯೋಜನೆಯಿಂದಾಗಿ ನಿರ್ಮಾಣ ಪರಿಕರಗಳ ಮಾರಾಟ ಪ್ರಮಾಣವೂ ಶೇ.81ರಷ್ಟು ಹೆಚ್ಚಾಗಿದೆ. ಬಾತ್ ರೂಮ್ ಮತ್ತು ಸ್ಯಾನಿಟರಿವೇರ್ ಸೇಲ್ಸ್ಗಳ ಪ್ರಮಾಣವೂ ಶೇ.48ರಷ್ಟು ಹೆಚ್ಚಾಗಿದೆ ಎಂದು ಯುರೋಮಾನಿಟರ್ ಇಂಟರ್ನ್ಯಾಷನಲ್ ಹೇಳಿದೆ. ಇದರಿಂದ ಕ್ಲೀನಿಂಗ್ ಉತ್ಪನ್ನಗಳ ತಯಾರಿಕ ಸಂಸ್ಥೆಗಳಿಗೆ ಸಾಕಷ್ಟು ಆದಾಯ ಸಿಗುತ್ತಿದೆ.
ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡ 2014ರ ಬಳಿಕ ಸುಮಾರು 80 ಮಿಲಿಯನ್ ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಿದೆ, 2019ರ ಅಕ್ಟೋಬರ್ನೊಳಗೆ ದೇಶದ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ, ದೇಶವ್ಯಾಪಿಯಾದ ಈ ಅಭಿಯಾನದ ಪರಿಣಾಮವಾಗಿ ಶೌಚಾಲಯ ಸಂಬಂಧಿತ ಉತ್ಪನ್ನ ಮತ್ತು ಸೇವೆಗಳ ವಹಿವಾಟು 2021ರ ವೇಳೆಗೆ 62 ಬಿಲಿಯನ್ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಭಾರತದ ಸ್ವಚ್ಛ ಭಾರತ ಅಭಿಯಾನ ಜಗತ್ತಿನ ಅತೀದೊಡ್ಡ, ಅತೀ ಯಶಸ್ವಿ ಮನಸ್ಥಿತಿ ಬದಲಾವಣೆಯ ಅಭಿಯಾನ ಎಂದು ಲಂಡನ್ ಸ್ಕೂಲ್ ಆಫ್ ಹೈಜಿನ್ ಆಂಡ್ ಟ್ರೋಪಿಕಲ್ ಮೆಡಿಸಿನ್ಸ್ ಎನ್ವಿರಾನ್ಮೆಂಟಲ್ ಹೆಲ್ತ್ ಗ್ರೂಪ್ ನಿರ್ದೇಶಕ ವಾಲ್ ಕರ್ಟಿಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.