News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 24th February 2026

×
Home About Us Advertise With s Contact Us

ವೊಡಾಫೋನ್-ಐಡಿಯಾ ವಿಲೀನಕ್ಕೆ ಕೇಂದ್ರದ ಅನುಮೋದನೆ

ನವದೆಹಲಿ: ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯೂಲರ್ ವಿಲೀನಕ್ಕೆ ಭಾರತ ಸರ್ಕಾರ ಅನುಮೋದನೆಯನ್ನು ನೀಡಿದೆ. ವೊಡಾಫೋನ್ ಮತ್ತು ಐಡಿಯಾ ವಿಲೀನದಿಂದ ದೇಶದಲ್ಲಿ 23 ಬಿಲಿಯನ್ ಮೌಲ್ಯದ ಮೊಬೈಲ್ ಫೋನ್ ಆಪರೇಟರ್ ಸ್ಥಾಪನೆಗೊಳ್ಳಲಿದೆ, ಶೇ.35ರಷ್ಟು ಮಾರ್ಕೆಟ್ ಶೇರ್‌ನ್ನು ಇದು ಹೊಂದಲಿದೆ. ಎರಡೂ ಸಂಸ್ಥೆಗಳು...

Read More

ವಿಮಾನದ ಮಾದರಿಯಲ್ಲೇ ರೈಲ್ವೇಯಲ್ಲೂ ಟ್ರ್ಯಾಶ್ ಬ್ಯಾಗ್ ಬಳಕೆ

ನವದೆಹಲಿ: ಫ್ಲೈಟ್ ಅಟೆಂಡೆಂಟ್‌ಗಳ ಮಾದರಿಯಲ್ಲೇ ಪ್ರಯಾಣಿಕರು ತಿಂದುಳಿದ ಆಹಾರ, ಇತ್ಯಾದಿ ತ್ಯಾಜ್ಯಗಳನ್ನು ಸಂಗ್ರಹ ಮಾಡಲು ರೈಲ್ವೇ ಕ್ಯಾಟರಿಂಗ್ ಸ್ಟಾಫ್ ಟ್ರ್ಯಾಶ್ ಬ್ಯಾಗ್‌ಗಳನ್ನು ಬಳಸಲಿದೆ. ಆಹಾರದಿಂದ ಹಿಡಿದು ವ್ಯಾಕ್ಯೂಂ ಟಾಯ್ಲೆಟ್‌ಗಳವರೆಗೂ ವಿಮಾನಗಳಲ್ಲಿನ ಮಾದರಿಯನ್ನು ಅನುಸರಿಸಲು ರೈಲ್ವೇ ಪ್ರಯತ್ನಿಸುತ್ತಿದೆ. ಪ್ರಯಾಣಿಕರಿಗೆ ವಿಮಾನ ಮಾದರಿ ಸೌಕರ್ಯವನ್ನು...

Read More

ವಾಯುಸೇನೆ ಸದಾ ಅಲರ್ಟ್‌ನಲ್ಲೇ ಇರುತ್ತದೆ: ಐಎಎಫ್ ಮುಖ್ಯಸ್ಥ

ನವದೆಹಲಿ: ಭಾರತೀಯ ವಾಯುಸೇನೆ ಸದಾ ಎಚ್ಚರಿಕೆಯಲ್ಲಿದ್ದು, ಯಾವುದೇ ಸನ್ನಿವೇಶಗಳನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂದು ವಾಯುಸೇನಾ ಮುಖ್ಯಸ್ಥ ಮಾರ್ಷಲ್ ಬಿರೇಂದರ್ ಸಿಂಗ್ ಧಾನೋ ಹೇಳಿದ್ದಾರೆ. ಪಾಕಿಸ್ಥಾನದ ಚುನಾವಣೆಯಲ್ಲಿ ಗೆದ್ದಿರುವ ಇಮ್ರಾನ್ ಖಾನ್ ಅವರು, ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತೇನೆ ಅವರು...

Read More

ಭಾರತದ ಅಪಾಚೆ, ಚಿನೂಕ್ ಹೆಲಿಕಾಫ್ಟರ್ ಮೊದಲ ಹಾರಾಟ ಕಂಡಿದೆ: ಬೋಯಿಂಗ್

ನವದೆಹಲಿ: ಭಾರತದ ಅಪಾಚೆ ಮತ್ತು ಚಿನೂಕ್ ಹೆಲಿಕಾಫ್ಟರ್‌ಗಳ ಮೊದಲ ಪ್ರಾಯೋಗಿಕ ಹಾರಾಟವನ್ನು ನಡೆಸಲಾಗಿದ್ದು, 2019ರ ವೇಳೆಗೆ ಇದನ್ನು ಭಾರತಕ್ಕೆ ಪೂರೈಕೆ ಮಾಡಲಾಗುತ್ತದೆ ಎಂದು ಏರೋಸ್ಪೇಸ್ ದಿಗ್ಗಜ ಬೋಯಿಂಗ್ ಹೇಳಿದೆ. ‘ಭಾರತದ ಶಸ್ತ್ರಾಸ್ತ್ರ ಪಡೆಗಳ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಅಪಾಚೆ ಮತ್ತು ಚಿನೂಕ್ ಹೆಲಿಕಾಫ್ಟರ್‌ಗಳ...

Read More

ಬ್ರಿಕ್ಸ್ ಸಮಿತ್ ವೇಳೆ ಸಭೆ ನಡೆಸಲಿದ್ದಾರೆ ಮೋದಿ-ಜಿನ್‌ಪಿಂಗ್

ಜೋಹನ್ಸ್‌ಬರ್ಗ್: ಗಡಿಯಲ್ಲಿ ಶಾಂತಿ ಸ್ಥಾಪನೆ ಮಾಡಿ, ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಚಿನ್‌ಪಿಂಗ್ ಅವರು ಬ್ರಿಕ್ಸ್ ಸಮಿತ್‌ನ ಸೈಡ್‌ಲೈನ್‌ನಲ್ಲಿ ಸಭೆ ನಡೆಸಲಿದ್ದಾರೆ. ‘ಉಭಯ ದೇಶಗಳ ನಡುವಣ ಸಂವಹನವನ್ನು...

Read More

ವಿಶ್ವ ನಂ.1 ಆದ ಭಾರತದ ಮಹಿಳಾ ಆರ್ಚರಿ ತಂಡ

ನವದೆಹಲಿ: ಆರ್ಚರಿಯಲ್ಲಿ ಭಾರತ ಇತಿಹಾಸವನ್ನು ನಿರ್ಮಿಸಿದೆ, ಮಹಿಳಾ ತಂಡ ಕೆಟಗರಿಯಲ್ಲಿ ಭಾರತ ವಿಶ್ವದಲ್ಲೇ ಟಾಪ್ ರ‍್ಯಾಂಕ್ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ಚೀನಾ ಇದೆ. ವಿ.ಜ್ಯೋತಿ ಸುರೇಖಾ, ತ್ರಿಶಾ ದೇಬ್, ಪಿ.ಲಿಲ್ಲಿ ಚಾನು, ಮುಸ್ಕಾನ್ ಕಿರರ್, ದಿವ್ಯಾ ದಯಾಳ್, ಮಧುಮಿತ ಅವರನ್ನೊಳಗೊಂಡ ಭಾರತೀಯ...

Read More

ಇಬ್ಬರು ಭಾರತೀಯರಿಗೆ ಮ್ಯಾಗ್ಸೆಸೆ ಪ್ರಶಸ್ತಿ

ನವದೆಹಲಿ: ಇಬ್ಬರು ಭಾರತೀಯರು ಈ ಬಾರಿಯ ರಮೊನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಭರತ್ ವಟ್ವಾನಿ ಮತ್ತು ಸೋನಂ ವಾಂಗ್ಚುಕ್ ನೋಬೆಲ್ ಪ್ರಶಸ್ತಿಯ ಏಷ್ಯಾ ವರ್ಶನ್ ಎಂದೇ ಕರೆಯಲ್ಪಡುವ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಒಟ್ಟು 6 ವ್ಯಕ್ತಿಗಳನ್ನು ರಮೊನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆ...

Read More

46 ವರ್ಷಗಳ ಬಳಿಕ ಮತ್ತೆ ಸೇತುವೆ ಪಡೆದ ಒರಿಸ್ಸಾದ 151 ಗ್ರಾಮಗಳು

ಭುವನೇಶ್ವರ: 46 ವರ್ಷಗಳ ಸುಧೀರ್ಘ ಕಾಯುವಿಕೆಯ ಬಳಿಕ ಒರಿಸ್ಸಾದ ಮಲ್ಕನ್‌ಗಿರಿ ಜಿಲ್ಲೆಯಲ್ಲಿ 910 ಮೀಟರ್ ಉದ್ದದ ಸೇತುವೆ ನಿರ್ಮಾಣಗೊಂಡಿದೆ. ಗುರುವಾರ ಸಿಎಂ ನವೀನ್ ಪಟ್ನಾಯಕ್ ಅವರು ಇದನ್ನು ಉದ್ಘಾಟನೆಗೊಳಿಸಿದ್ದಾರೆ. ಈ ಸೇತುವೆ ಮಲ್ಕನ್‌ಗಿರಿ ಜಿಲ್ಲೆಯ ಪ್ರಮುಖ 151 ಗ್ರಾಮಗಳನ್ನು ಸಂಪರ್ಕಿಸಲಿದೆ. 1972ರಲ್ಲಿ ಇಲ್ಲಿಗೆ ಬಲಿಮೆಲ ಹೈಡ್ರೋ...

Read More

ತೆರಿಗೆ ಪಾವತಿ ದಿನಾಂಕ ಆ.31ರವರೆಗೆ ವಿಸ್ತರಣೆ

ನವದೆಹಲಿ: ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆಗೆ ಇದ್ದ ಕಡೆಯ ದಿನಾಂಕವನ್ನು ಒಂದು ತಿಂಗಳ ಅವಧಿಗೆ ಆದಾಯ ತೆರಿಗೆ ಇಲಾಖೆ ವಿಸ್ತರಣೆ ಮಾಡಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕೊನೆ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್...

Read More

ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಸಜ್ಜು: ಸಚಿವ ರಾಥೋಡ್

ನವದೆಹಲಿ: ಪಾಕಿಸ್ಥಾನದ ಚುನಾವಣಾ ಫಲಿತಾಂಶ ಹೊರ ಬಿದ್ದಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದೆ ಎಂದಿದ್ದಾರೆ. ಕೇಂದ್ರ ವಿದೇಶಾಂಗ ಸಚಿವಾಲಯ ಎಲ್ಲಾ ವಿಷಯವನ್ನೂ ಗಮನಿಸುತ್ತಿದೆ, ಪಾಕಿಸ್ಥಾನದೊಂದಿಗೆ ಉತ್ತಮ...

Read More

Recent News

Back To Top