ನವದೆಹಲಿ: ಭಾರತೀಯ ಕುಸ್ತಿ ಕ್ರೀಡೆಯ ಪ್ರಾಯೋಜಕತ್ವವನ್ನು ವಹಿಸಿಕೊಳ್ಳಲು ಟಾಟಾ ಮೋಟರ್ಸ್ ಮುಂದಾಗಿದೆ. ಇದಕ್ಕಾಗಿ ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದೊಂದಿಗೆ ಮೂರು ವರ್ಷಗಳ ಒಪ್ಪಂದವನ್ನು ಅದು ಮಾಡಿಕೊಂಡಿದೆ.
ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಸುಶೀಲ್ ಕುಮಾರ್, ಯೋಗೇಶ್ವರ್ ದತ್ತ್, ಸಾಕ್ಷಿ ಮಲಿಕ್ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ.
ಇದೇ ಮೊದಲ ಬಾರಿಗೆ ರಸ್ಲಿಂಗ್ ಫೆಡರೇಶನ್ ಸಂಸ್ಥೆಯೊಂದರ ಪ್ರಾಯೋಜಕತ್ವವನ್ನು ಪಡೆದುಕೊಂಡಿರುವುದು. ಏಷ್ಯನ್ ಗೇಮ್ಸ್ಗೆ ಮುಂಚಿತವಾಗಿ ಈ ಘೋಷಣೆ ಹೊರಬಿದ್ದಿದ್ದು ಕುಸ್ತಿಗೆ ಇನ್ನಷ್ಟು ಬಲ ತಂದುಕೊಡಲಿದೆ.
ಶೀಘ್ರದಲ್ಲೇ ‘ಟಾಟಾ ಯೋಧ’ ಎಂಬ ಬರಹವುಳ್ಳ ನೂತನ ಜೆರ್ಸಿಯನ್ನು ತೊಟ್ಟು ಕುಸ್ತಿಪಟುಗಳು ಕಣಕ್ಕಿಳಿಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.