ಕೋಲ್ಕತ್ತಾ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ 91ನೇ ಸಂಸ್ಥಾಪನ ದಿನದ ಅಂಗವಾಗಿ ಬುಧವಾರ ನಾಥು ಲಾದಲ್ಲಿ ಭಾರತ-ಚೀನಾ ನಡುವೆ ವಿಶೇಷ ಗಡಿ ಸಿಬ್ಬಂದಿ ಸಭೆ ಜರುಗಿತು.
ಚೀನಾ ಸೇನೆಯ ಆಹ್ವಾನದ ಮೇರೆಗೆ ಅಧಿಕಾರಿಗಳು ಮತ್ತು ಸೈನಿಕರನ್ನೊಳಗೊಂಡ ಭಾರತೀಯ ಸೇನೆಯ ನಿಯೋಗ ಚೀನಿಗರ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲೂ ಭಾಗಿಯಾಯಿತು.
ಚೀನಾ ಯೋಧರು ಭಾರತೀಯ ನಿಯೋಗದೊಂದಿಗೆ ಸಂವಾದ ನಡೆಸಿದರು ಮತ್ತು ಸಂಭ್ರಮಾಚರಣೆಯ ಭಾಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ಭಾರತೀಯರು ಕೂಡ ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದಶಿಸಿದರು. ಉಭಯ ದೇಶಗಳ ಶ್ರೀಮಂತ ಸಂಸ್ಕೃತಿ ನಾಥು ಲಾದಲ್ಲಿ ಅನಾವರಣಗೊಂಡಿತು ಎಂದು ಮೂಲಗಳು ತಿಳಿಸಿವೆ.
ಉಭಯ ಪಡೆಗಳ ಈ ನಡೆ ಗಡಿಯಲ್ಲಿ ಶಾಂತಿ ಮತ್ತು ಸಾಮರಸ್ಯ ಸ್ಥಾಪನೆಗೆ ಪೂರಕವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.