News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಿಕ್ಷುಕರಿಗೆ ದುಡಿದು ತಿನ್ನುವ ಯೋಜನೆ ರೂಪಿಸಿದ ಲಕ್ನೋ ಮಹಾನಗರ ಪಾಲಿಕೆ

ಲಕ್ನೋ: ಉತ್ತರ ಪ್ರದೇಶದ ಲಕ್ನೋ ಶೀಘ್ರದಲ್ಲೇ ಭಿಕ್ಷುಕ ಮುಕ್ತ ನಗರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಲಕ್ನೋ ಮುನ್ಸಿಪಲ್ ಕಾರ್ಪೋರೇಶನ್(ಎಲ್ ಎಂಸಿ) ಈ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಿದ್ದು, ದೈಹಿಕವಾಗಿ ಸದೃಢರಾಗಿರುವ ಭಿಕ್ಷುಕರನ್ನು ದಿನಗೂಲಿ ಕಾರ್ಮಿಕರನ್ನಾಗಿಸಲು ಮುಂದಾಗಿದೆ. ಆರೋಗ್ಯವಾಗಿದ್ದರೂ ಕೆಲಸ ಮಾಡದೆ ಭಿಕ್ಷಾಟನೆಗೆ ಮುಂದಾಗುವ ಜನರಿಗೆ...

Read More

ಮೋದಿ ಮನವಿಯ ಮೇರೆಗೆ ಭಾರತದ ಹಜ್ ಕೋಟಾವನ್ನು 1.70 ಲಕ್ಷದಿಂದ 2 ಲಕ್ಷಕ್ಕೆ ಏರಿಸಿದ ಸೌದಿ

ನವದೆಹಲಿ: ಮಹತ್ವದ ಬೆಳೆವಣಿಗೆಯೊಂದರಲ್ಲಿ ಸೌದಿ ಅರೇಬಿಯಾವು ಭಾರತದ ಹಜ್ ಕೋಟಾವನ್ನು 170,000 ದಿಂದ 200,000 ಕ್ಕೆ ಏರಿಕೆ ಮಾಡಿದೆ. ಹೀಗಾಗಿ ಇನ್ನು ಮುಂದೆ 30,000 ಹೆಚ್ಚುವರಿ ಭಾರತೀಯ ಮುಸ್ಲಿಮರಿಗೆ ವಾರ್ಷಿಕವಾಗಿ ಮೆಕ್ಕಾ ಯಾತ್ರೆಗೆ ಹೋಗುವ ಅವಕಾಶ ಸಿಕ್ಕಂತಾಗಿದೆ. ಸೌದಿ ಅರೇಬಿಯಾದ ಉತ್ತರಾಧಿಕಾರಿ ಮೊಹಮ್ಮದ್ ಬಿನ್ ಸಲ್ಮಾನ್...

Read More

ಮಹಿಳಾ ಸಬಲೀಕರಣಕ್ಕಾಗಿ ರಾಷ್ಟ್ರೀಯ ಮಹಿಳಾ ನೀತಿ

ನವದೆಹಲಿ: ಲಿಂಗ ತಾರತಮ್ಯವನ್ನು ಮೆಟ್ಟಿ ನಿಂತು ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇಂತಹ ಮಹಿಳೆಯರಿಗೆ ಇನ್ನಷ್ಟು ಪುಷ್ಠಿ ನೀಡುವ ಸಲುವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ರಾಷ್ಟ್ರೀಯ ಮಹಿಳಾ ನೀತಿ ಕರಡು ಅನ್ನು ಸಿದ್ಧಪಡಿಸುತ್ತಿದೆ....

Read More

ಹಕ್ಕಿ ಹೊಡೆತಕ್ಕೆ ಎಂಜಿನ್ ಕೈಕೊಟ್ಟರೂ ಸಾಹಸಮಯವಾಗಿ ಯುದ್ಧವಿಮಾನ ಲ್ಯಾಂಡ್ ಮಾಡಿದ ಯುವ ಪೈಲೆಟ್

ನವದೆಹಲಿ: ಹಕ್ಕಿಗಳ ಹೊಡೆತದಿಂದಾಗಿ ಎರಡು ಎಂಜಿನ್­ಗಳ ಪೈಕಿ ಒಂದು ಎಂಜಿನ್ ಸ್ಥಗಿತಗೊಂಡ ಭಾರತೀಯ ವಾಯುಸೇನೆಗೆ ಸೇರಿದ ಜಾಗ್ವಾರ್ ಫೈಟರ್ ಜೆಟ್­ ಅನ್ನು ಪೈಲೆಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಮಯಪ್ರಜ್ಞೆ ಮತ್ತು ಸಾಹಸದಿಂದಾಗಿ ಅಂಬಾಲ ವಾಯುನೆಲೆಯ ಸಮೀಪ ವಾಸಿಸುತ್ತಿರುವ ಹಲವಾರು...

Read More

ಹಡುಗುಗಳ ಸಂಚಾರಕ್ಕೆ ತೆರೆಯಲ್ಪಟ್ಟಿತು ಪಂಬನ್ ರೈಲ್ವೇ ಬ್ರಿಡ್ಜ್

ರಾಮೇಶ್ವರಂ: ಉತ್ತಮ ಸೇವೆಗಾಗಿ ಭಾರತೀಯ ರೈಲ್ವೆಯು ತಾಂತ್ರಿಕ ಸುಧಾರಣೆಗಳೊಂದಿಗೆ ಪ್ರಗತಿಯತ್ತ ದಾಫುಗಾಲಿಡುತ್ತಿದೆ. ಆದರೂ, ಪರಂಪರೆಗೆ ಅದು ಸದಾ  ಬದ್ಧತೆಯನ್ನು ಪ್ರದರ್ಶಿಸಿದೆ. ಪರಂಪರೆಯ ಸಂರಕ್ಷಣೆಯೊಂದಿಗೆ ಮತ್ತೊಂದು ಅದ್ಭುತ ಪ್ರಗತಿಯನ್ನು ಸಾಧಿಸಿರುವ ರೈಲ್ವೆ ಪ್ರಾಧಿಕಾರವು ಶುಕ್ರವಾರ 105 ವರ್ಷಗಳ ಹಳೆಯ ಪಂಬನ್ ರೈಲು ಸೇತುವೆಯಲ್ಲಿನ ಶೆರ್ಜರ್ಸ್...

Read More

ನೀರು ಉಳಿಸಲು ಬಾಳೆ ಎಲೆ ಬಳಸುತ್ತಿವೆ ಚೆನ್ನೈ ಹೋಟೆಲ್­ಗಳು

ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀರಿನ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದೆ, ಇದರಿಂದಾಗಿ ಜನರು ಎಲ್ಲಾ ಕೆಲಸಗಳಿಗೂ ಕಡಿಮೆ ನೀರು ಬಳಕೆಯ ಪರ್ಯಾಯ ಮಾರ್ಗವನ್ನು ಕಂಡುಹಿಡಿಯುವ ಅನಿವಾರ್ಯತೆಗೆ ಸಿಲುಕಿಕೊಂಡಿದ್ದಾರೆ. ನೀರಿನ ಸಂರಕ್ಷಣೆಯ ದೃಷ್ಟಿಯಿಂದ ಇಲ್ಲಿನ ಹೆಚ್ಚಿನ ಹೋಟೆಲ್ ಮತ್ತು ರೆಸ್ಟೋರೆಂಟ್­ಗಳು ಪ್ಲೇಟ್­ಗಳ ಬದಲು ಹಳೆಯ...

Read More

ಆರೋಗ್ಯ ಸಚಿವಾಲಯದ ಸಭೆಗಳಲ್ಲಿ ಬಿಸ್ಕೆಟ್, ಕುಕ್ಕೀಸ್­ಗಳಿಗೆ ಬ್ರೇಕ್: ಆರೋಗ್ಯಪೂರ್ಣ ತಿನಿಸುಗಳಿಗಷ್ಟೇ ಸ್ಥಾನ

ನವದೆಹಲಿ: ಆರೋಗ್ಯಯುತ ಆಹಾರ ಸೇವನೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ತನ್ನ ಸಭೆಗಳಲ್ಲಿ ಬಿಸ್ಕೇಟ್ ಅಥವಾ ಕುಕ್ಕೀಸ್­ಗಳನ್ನು ನೀಡುವ ಬದಲಾಗಿ ಬಾದಾಮಿ, ಗೋಡಂಬಿ, ಕರ್ಜೂರ, ವಾಲ್­ನಟ್ಸ್, ಹುರಿದ ಕಡಲೆಕಾಳು ಇತ್ಯಾದಿಗಳನ್ನು ನೀಡಲು ನಿರ್ಧರಿಸಿದೆ. ಜೂನ್ 19...

Read More

‘ಕಿತ್ನಾ ಅಚ್ಛೇ ಹೈ ಮೋದಿ’ ಎಂದು ಸೆಲ್ಫಿಯೊಂದಿಗೆ ಟ್ವೀಟ್ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ

ಒಸಕಾ: ಜಪಾನಿನಲ್ಲಿ ಒಸಕಾ ನಗರದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಇದನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ಈ ಸೆಲ್ಫಿಗೆ ಅವರು ಹಿಂದಿಯಲ್ಲಿ ‘ಕಿತ್ನಾ ಅಚ್ಛೇ ಹೈ ಮೋದಿ’ ಎಂಬ ಶೀರ್ಷಿಕೆಯನ್ನು...

Read More

ನಾಳೆ ಹೊಸ ಕೇಸರಿ ಜೆರ್ಸಿ ತೊಟ್ಟು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ ಭಾರತ ಕ್ರಿಕೆಟ್ ತಂಡ

ನವದೆಹಲಿ: ವಿಶ್ವಕಪ್ ಸಮರದ ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಹೊಸ ಜೆರ್ಸಿ ಹಲವರ ಕಣ್ಣು ಕುಕ್ಕುವಂತೆ ಮಾಡಿದೆ. ಇದಕ್ಕೆ ಕಾರಣ ಅದರ ಬಣ್ಣ ‘ಕೇಸರಿ’ ಎಂಬುದು. ನರೇಂದ್ರ ಮೋದಿ ಸರ್ಕಾರವೇ ಮುಂದೆ ನಿಂತು ಈ ಕೇಸರಿ ಸಮವಸ್ತ್ರವನ್ನು ಸಿದ್ಧಪಡಿಸಿದೆ ಎಂಬ ರೀತಿಯಲ್ಲಿ...

Read More

ಜಿ20 ಶೃಂಗಸಭೆ : ಟರ್ಕಿ ಅಧ್ಯಕ್ಷರೊಂದಿಗೆ ಮೋದಿ ದ್ವಿಪಕ್ಷೀಯ ಸಭೆ

ಒಸಾಕಾ: ಜಪಾನಿನಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿ20 ಶೃಂಗಸಭೆಯ ಕೊನೆಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಅಲ್ಲದೇ, ಅವರು ಆಸ್ಟ್ರೇಲಿಯಾ ಅಧ್ಯಕ್ಷ ಸ್ಕಾಟ್ ಮಾರಿಸನ್ ಸೇರಿದಂತೆ ಜಗತ್ತಿನ...

Read More

Recent News

Back To Top