ನವದೆಹಲಿ: ವಿಶ್ವಕಪ್ ಸಮರದ ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಹೊಸ ಜೆರ್ಸಿ ಹಲವರ ಕಣ್ಣು ಕುಕ್ಕುವಂತೆ ಮಾಡಿದೆ. ಇದಕ್ಕೆ ಕಾರಣ ಅದರ ಬಣ್ಣ ‘ಕೇಸರಿ’ ಎಂಬುದು. ನರೇಂದ್ರ ಮೋದಿ ಸರ್ಕಾರವೇ ಮುಂದೆ ನಿಂತು ಈ ಕೇಸರಿ ಸಮವಸ್ತ್ರವನ್ನು ಸಿದ್ಧಪಡಿಸಿದೆ ಎಂಬ ರೀತಿಯಲ್ಲಿ ಪ್ರತಿಪಕ್ಷಗಳು ಬೊಬ್ಬಿಡುತ್ತಿವೆ. ‘ಕೇಸರಿ’ ಕೋಮುವಾದಿ ಬಣ್ಣ ಎಂದು ಹಿಂದಿನಿಂದಲೂ ಬಿಂಬಿಸಿಕೊಂಡು ಬರುತ್ತಿರುವ ಈ ಪಕ್ಷಗಳಿಗೆ ಇದೀಗ ನಮ್ಮ ಕ್ರಿಕೆಟಿಗರು ಕೇಸರಿ ಜೆರ್ಸಿ ತೊಟ್ಟು ಮೈದಾನಕ್ಕಿಳಿಯುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.
ಪ್ರತಿಪಕ್ಷಗಳ ಟೀಕೆಗೆ ಸೊಪ್ಪು ಹಾಕದ ಕ್ರಿಕೆಟ್ ಮಂಡಳಿ, ಜೂನ್ 30ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪಂದ್ಯಾಟಕ್ಕೆ ಭಾರತೀಯ ಕ್ರಿಕೆಟಿಗರನ್ನು ಕೇಸರಿ ಮತ್ತು ನೀಲಿ ಬಣ್ಣದ ಹೊಸ ಸಮವಸ್ತ್ರದೊಂದಿಗೆ ಮೈದಾನಕ್ಕಿಳಿಸಲಿದೆ. ಬರ್ಮಿಂಗ್ಹ್ಯಾಮಿನ ಎಡ್ಜ್ಬ್ಯಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯಾಟ ಜರುಗಲಿದೆ.
ನಾಳೆ ಕೊಹ್ಲಿ ಬಾಯ್ಸ್ ಹೊಸ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ ಎಂಬುದನ್ನು ನೈಕ್ ಇಂಡಿಯಾ ಖಚಿತಪಡಿಸಿದ್ದು, “ಈ ವರ್ಷ ಬಿಡುಗಡೆಯಾದ ಏಕದಿನ ಮತ್ತು ಅವೇ ಕಿಟ್ ವಿನ್ಯಾಸಗಳು ಭಾರತದ ಯುವ ಹೊಸ ಪೀಳಿಗೆಯಿಂದ ಮತ್ತು ರಾಷ್ಟ್ರೀಯ ತಂಡಗಳ ನಿರ್ಭೀತ ಮನೋಭಾವದಿಂದ ಪ್ರೇರಿತವಾಗಿವೆ”ಎಂದಿದೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ಜೆರ್ಸಿಯ ಬಣ್ಣವು ನೀಲಿ ಇದ್ದ ಕಾರಣ ಭಾರತೀಯ ತಂಡ ತನ್ನ ಜೆರ್ಸಿಯ ಬಣ್ಣವನ್ನು ಬದಲಾಯಿಸುವುದು ಅಗತ್ಯವಾಗಿತ್ತು. ಹೀಗಾಗಿ ಹಳೆಯ ಟಿ20 ಜೆರ್ಸಿಯೊಂದರಿಂದ ಪ್ರೇರಣೆ ಪಡೆದುಕೊಂಡು ಬಿಸಿಸಿಐ ಹೊಸ ಜೆರ್ಸಿಯ ಬಣ್ಣವನ್ನು ಆಯ್ಕೆ ಮಾಡಿದೆ.
ಈಗಾಗಲೇ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ದೋನಿ ಈ ಜೆರ್ಸಿ ತೊಟ್ಟು ಫೋಸ್ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.