ರಾಮೇಶ್ವರಂ: ಉತ್ತಮ ಸೇವೆಗಾಗಿ ಭಾರತೀಯ ರೈಲ್ವೆಯು ತಾಂತ್ರಿಕ ಸುಧಾರಣೆಗಳೊಂದಿಗೆ ಪ್ರಗತಿಯತ್ತ ದಾಫುಗಾಲಿಡುತ್ತಿದೆ. ಆದರೂ, ಪರಂಪರೆಗೆ ಅದು ಸದಾ ಬದ್ಧತೆಯನ್ನು ಪ್ರದರ್ಶಿಸಿದೆ. ಪರಂಪರೆಯ ಸಂರಕ್ಷಣೆಯೊಂದಿಗೆ ಮತ್ತೊಂದು ಅದ್ಭುತ ಪ್ರಗತಿಯನ್ನು ಸಾಧಿಸಿರುವ ರೈಲ್ವೆ ಪ್ರಾಧಿಕಾರವು ಶುಕ್ರವಾರ 105 ವರ್ಷಗಳ ಹಳೆಯ ಪಂಬನ್ ರೈಲು ಸೇತುವೆಯಲ್ಲಿನ ಶೆರ್ಜರ್ಸ್ ಸ್ಪಾನ್ (ಅಟ್ಟಳಿಗೆ) ಅನ್ನು ಹಡಗು, ದೋಣಿಗಳ ಸುಲಲಿತ ಸಂಚಾರಕ್ಕಾಗಿ ಲಿಫ್ಟ್ ಮಾಡಿತು.
ಶೆರ್ಜರ್ಸ್ ಸ್ಪಾನಿನ ಕೆಲವೊಂದು ಕಡೆ ಎಂಜಿನಿಯರ್ಗಳು ಬಿರುಕುಗಳನ್ನು ಪತ್ತೆ ಹಚ್ಚಿದ ನಂತರ ಪಂಬನ್ ರೈಲು ಸೇತುವೆಯ ರೈಲು ಸಂಚಾರವನ್ನು 85 ದಿನಗಳವರೆಗೆ ಸ್ಥಗಿತಗೊಳಿಸಲಾಗಿತ್ತು.
ಕೆಲವು ರಿಪೇರಿ ಕಾಮಗಾರಿಯನ್ನು ನಡೆಸಿದ ಬಳಿಕ, ರೈಲ್ವೆಯು ಕಳೆದ ಫೆಬ್ರವರಿಯಲ್ಲಿ ಸಂಚಾರಕ್ಕಾಗಿ ಸೇತುವೆಯನ್ನು ತೆರೆದಿತ್ತು. ಸೇತುವೆ ತೆರೆಯುವ ಮೊದಲು ಅಧಿಕಾರಿಗಳು ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು.
ಇದೀಗ ಶುಕ್ರವಾರ ಶೆರ್ಜರ್ಸ್ ಸ್ಪಾನ್ ಅನ್ನು ಲಿಫ್ಟ್ ಮಾಡಿ ಅಧಿಕಾರಿಗಳು ಹಡುಗಳು ಸಂಚಾರಕ್ಕೆ ಅನುವು ಮಾಡಿಕೊಟ್ಟ ಬಳಿಕ ಪಂಬನ್ ಸೇತುವೆ ಮತ್ತೊಮ್ಮೆ ಸುದ್ದಿ ಮಾಡಿದೆ. ತಿಂಗಳಿಗೊಮ್ಮೆ ಹಡುಗುಗಳ ಸಂಚಾರಕ್ಕೆ ಇದನ್ನು ಲಿಫ್ಟ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Rameswaram: Railway authorities lift Scherzer’s span in Pamban rail bridge to enable ships to pass. #TamilNadu pic.twitter.com/IzD1xckT1m
— ANI (@ANI) June 28, 2019
ಈ ಸೇತುವೆಯ ವಿಶೇಷತೆಯೆಂದರೆ ಇದು ಪಲ್ಕ್ ಸ್ಟ್ರೈಟ್ / ಜಲಸಂಧಿ ಮೇಲೆ ನಿರ್ಮಿಸಲ್ಪಟ್ಟ ಒಂದು ಕ್ಯಾಂಟಿಲಿವರ್ ಬ್ರಿಡ್ಜ್. ಈ ಸೇತುವೆ ರಾಮೇಶ್ವರ ಮತ್ತು ದೇಶದ ಉಳಿದ ಸ್ಥಳಗಳ ನಡುವಿನ ಸಂಬಂಧವನ್ನು ರೂಪಿಸುತ್ತದೆ. ಸೇತುವೆ ಸಮುದ್ರದ ಮೇಲೆ ಈ ರೀತಿ ನಿರ್ಮಾಣ ಮಾಡಲಾದ ಮೊದಲನೆಯ ಸೇತುವೆಯಾಗಿದೆ. ಇದು 2.3 ಕಿ. ಮೀ ಉದ್ದವನ್ನು ಹೊಂದಿರುವ ದೇಶದ ಎರಡನೇ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಈ ಸೇತುವೆಯು ದಕ್ಷಿಣ ಭಾರತೀಯ ರೈಲ್ವೆ ಯೋಜನೆಯ ಭಾಗವಾಗಿ ನಿರ್ಮಾಣಗೊಂಡಿತು. ಸೇತುವೆ ನಿರ್ಮಾಣಕ್ಕೆ 1887 ರಲ್ಲಿ ಆರಂಭವಾಗಿ 1912 ರಲ್ಲಿ ಪೂರ್ಣಗೊಂಡಿತು.
ಸೇತುವೆಯ ನಿರ್ಮಾಣದ ಜೊತೆಗೆ, ಕಾರ್ಮಿಕರು ಏಳು ಗುಮ್ಮಟಗಳನ್ನು ಹೊಂದಿರುವ ಪ್ರಸಿದ್ಧ ನೀಲ್-ಮಂದಿರ ದೇವಾಲಯವನ್ನೂ ಸಹ ಇಲ್ಲಿ ನಿರ್ಮಿಸಿದ್ದಾರೆ. ಈ ಸೇತುವೆಯು ಕಾಲ ನೀಡಿದ ಎಲ್ಲಾ ಸವಾಲುಗಳಿಗೆ ಎದೆಯೊಡ್ಡಿ ನಿಂತಿದೆ. ಇದರ ನಿರ್ಮಾಣದ ಕಾಲದಲ್ಲಿ ಪಟ್ಟ ಪರಿಶ್ರಮದ ಫಲವೇ ಈ ಸೇತುವೆ ಇಷ್ಟು ಧೃಡವಾಗಿ ನಿಲ್ಲಲು ಕಾರಣವಾಗಿದೆ. ಸೇತುವೆಯ ಕ್ಯಾಂಟಿಲಿವರ್ ಅಂಶವೆಂದರೆ ಇದು ಹಡಗುಗಳನ್ನು ಕೆಳಗೆ ಹಾದು ಹೋಗುವುದಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.