News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕುಲ್ಗಾಂ: ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಓರ್ವ ಉಗ್ರನ ಸಂಹಾರ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಓರ್ವ ಉಗ್ರನ ಸಂಹಾರವಾಗಿದೆ. ರಾಜ್ಯದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭದಲ್ಲಿ ಓರ್ವ ಉಗ್ರನನ್ನು ಎನ್‌ಕೌಂಟರ್ ಮೂಲಕ ಹೊಡೆದುರುಳಿಸಲಾಗಿದೆ ಎಂದು ಭದ್ರತಾ ಪಡೆಯ...

Read More

ಮುಂದಿನ ದಿನಗಳಲ್ಲಿ ಡಿಜಿಟಲ್ ಕರೆನ್ಸಿ ಪ್ರಾರಂಭಿಸಲಿದೆ ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ – ಆರ್‌ಬಿಐ ಮುಂದಿನ ದಿನಗಳಲ್ಲಿ ಡಿಜಿಟಲ್ ಕರೆನ್ಸಿ ಪ್ರಾರಂಭಿಸಲು ಉದ್ದೇಶಿಸಿದೆ ಎಂದು ಡೆಪ್ಯುಟಿ ಗವರ್ನರ್ ಟಿ.ರವಿಶಂಕರ್ ಹೇಳಿದ್ದಾರೆ. ಪ್ರಸ್ತುತ ಹಂತ ಹಂತವಾಗಿ ಈ ಕರೆನ್ಸಿಯನ್ನು ಜಾರಿಗೆ ತರಲು ಆರ್‌ಬಿಐ ಸಮ್ಮತಿಸಿದೆ. ಸಗಟು ಮತ್ತು ಚಿಲ್ಲರೆ ವಿಭಾಗದಲ್ಲಿ...

Read More

ಈ ಪದಕ ದೇಶಕ್ಕೆ ಸಮರ್ಪಣೆ : ಮೀರಾಬಾಯ್ ಚಾನು

ಟೊಕಿಯೋ: ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಪದಕ ತಂದುಕೊಟ್ಟ ವೈಟ್‌ಲಿಫ್ಟರ್ ಮೀರಾಬಾಯ್ ಚಾನು ಅವರು ತಮ್ಮ ಈ ಸಾಧನೆಯನ್ನು ದೇಶಕ್ಕೆ ಸಮರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಚಾನು, ನನ್ನ ಕನಸು ನನಸಾಗಿದೆ. ಈ ಬೆಳ್ಳಿ ಪದಕವನ್ನು ನನ್ನ ದೇಶಕ್ಕೆ...

Read More

ಟೊಕಿಯೋ ಒಲಿಂಪಿಕ್ಸ್‌ಗೆ ಅಮೂಲ್‌ನಿಂದ ವಿಶೇಷ ಡೂಡಲ್

ನವದೆಹಲಿ: 2020 ರ ಟೊಕಿಯೋ ಒಲಿಂಪಿಕ್ಸ್ ಜಪಾನ್‌ನಲ್ಲಿ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಡೈರಿ ದೈತ್ಯ ಅಮೂಲ್ ವಿಶೇಷ ಡೂಡಲ್ ಜೊತೆಗೆ ಕ್ರೀಡಾಕೂಟಕ್ಕೆ ಶುಭ ಹಾರೈಸಿದೆ. ಜಲ್ಪಾನ್ ಇನ್ ಜಪಾನ್ (Jalpaan in Japan) ಎಂಬ ಶಿರ್ಷಿಕೆ ನೀಡಿ ಗೆಟ್ ಫಾಸ್ಟರ್, ಹೆಲ್ದಿಯರ್,...

Read More

ಬಾಂಗ್ಲಾದೇಶ‌ಕ್ಕೆ ಆಕ್ಸಿಜನ್ ಎಕ್ಸ್‌ಪ್ರೆಸ್ ಮೂಲಕ ಆಮ್ಲಜನಕ ಒದಗಿಸಲಿದೆ ಭಾರತ

ನವದೆಹಲಿ: ಕೊರೋನಾ ಸೋಂಕಿತರ ಚಿಕಿತ್ಸೆ‌ಗೆ ಸಂಬಂಧಿಸಿದಂತೆ ಆಕ್ಸಿಜನ್ ಎಕ್ಸ್‌ಪ್ರೆಸ್ ಮೂಲಕ 200 ಟನ್ ಆಮ್ಲಜನಕ‌ವನ್ನು ನೆರೆಯ ಬಾಂಗ್ಲಾದೇಶ‌ಕ್ಕೆ ತಲುಪಿಸಲು ಭಾರತೀಯ ರೈಲ್ವೆ ಸಿದ್ಧತೆ ನಡೆಸಿದೆ. ಕೊರೋನಾ ಸಂದರ್ಭದಲ್ಲಿ ಪರಸ್ಪರ ಸಹಕಾರ. ಮನೋಭಾವ‌ದಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನಿ ಮೋದಿ ಸರ್ಕಾರ, ಇದೀಗ ಬಾಂಗ್ಲಾ...

Read More

ಭಾರತದ ಬೆಳ್ಳಿ ಬೆಡಗಿಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ಅಭಿನಂದನೆ

ನವದೆಹಲಿ: ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟ ದೇಶದ ಬೆಳ್ಳಿ ಬೆಡಗಿ ಮೀರಾಬಾಯ್ ಚಾನು ಅವರ ಸಾಧನೆಯನ್ನು ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದಾರೆ. ತಮ್ಮ ಅದ್ಭುತ ಪ್ರದರ್ಶನ‌ದಿಂದ ಭಾರತಕ್ಕೆ ಉಲ್ಲಾಸವಾಗಿದೆ. ಭವ್ಯ ಕ್ರೀಡಾಕೂಟಕ್ಕೆ ಹರ್ಷದಾಯಕ ಆರಂಭವನ್ನು ನೀಡಿದ್ದೀರಿ ಎಂದು...

Read More

ಸಾಮಾನ್ಯ ಪ್ರವೇಶ ಪರೀಕ್ಷೆ‌ಗಳನ್ನು ರದ್ದು ಮಾಡುವುದಿಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಎನ್‌ಇಇಟಿ ಮೊದಲಾದ ಸಾಮಾನ್ಯ ಪ್ರವೇಶ ಪರೀಕ್ಷೆ‌ಗಳನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವರಾದ ಭಾರತಿ ಪ್ರವೀಣ್ ಪವಾರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಈ ಬಾರಿ ಕೊರೋನಾ ಸೂಕ್ತ ನಡಾವಳಿಗಳನ್ನು ಅನುಸರಿಸಿಕೊಂಡು 2021...

Read More

ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ : ಬೆಳ್ಳಿ ಪದಕ ಗೆದ್ದ ಮೀರಾಬಾಯ್ ಚಾನು

ಟೊಕಿಯೋ: ಏಸ್ ಇಂಡಿಯನ್ ವೈಟ್ ಲಿಫ್ಟರ್ ಮೀರಾಬಾಯ್ ಚಾನು ಅವರು 2020 ಟೊಕಿಯೋ ಒಲಿಂಪಿಕ್ಸ್‌ನಲ್ಲಿ ವೈಟ್‌ಲಿಫ್ಟಿಂಗ್ (49 ಕೆ ಜಿ) ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದು, ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ....

Read More

5 ಕೆಜಿ ಸ್ಫೋಟಕ ತುಂಬಿದ್ದ ಡ್ರೋಣ್ ಹೊಡೆದುರುಳಿಸಿದ ಜಮ್ಮು ಫೊಲೀಸರು

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರೋಣ್ ದಾಳಿಯ ವಿಚಾರಗಳು ಹೆಚ್ಚು ಸದ್ದು ಮಾಡುತ್ತಿವೆ. ಇದಕ್ಕೆ ಪೂರಕ ಎಂಬಂತೆ ಜಮ್ಮುವಿನ ಅಖ್ನೂರ್ ವಿಭಾಗದಲ್ಲಿ ಡ್ರೋನ್‌‌ನ ಮೂಲಕ ರವಾನೆಯಾಗುತ್ತಿದ್ದ 5 ಕೆಜಿ ಸ್ಪೋಟಕಗಳನ್ನು ಜಮ್ಮು ಕಾಶ್ಮೀರದ ಪೊಲೀಸರು ಹೊಡೆದುರುಳಿಸಿದ ಘಟನೆ ನಡೆದಿದೆ. ಈ...

Read More

ಬಂಡಿಪೋರಾ‌ದಲ್ಲಿ ಇಬ್ಬರು ಉಗ್ರರನ್ನು ವಧಿಸಿದ ಭಾರತೀಯ ಸೇನಾ ಪಡೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಬಂಡಿಪೋರಾ‌ದಲ್ಲಿ ಭಾರತೀಯ ಸೇನಾಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಇಬ್ಬರು ಉಗ್ರರ ಸಂಹಾರವಾಗಿದೆ. ಬಂಡಿಪೋರಾದ ಸುಮ್ಬ್ಲಾರ್ ಪ್ರದೇಶದಲ್ಲಿ ಉಗ್ರಗಾಮಿ‌ಗಳು ಅವಿತಿರುವ ಖಚಿತ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಭದ್ರತಾ ಪಡೆಗಳ ಮೇಲೆ ಅವಿತಿದ್ದ...

Read More

Recent News

Back To Top