ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರೋಣ್ ದಾಳಿಯ ವಿಚಾರಗಳು ಹೆಚ್ಚು ಸದ್ದು ಮಾಡುತ್ತಿವೆ. ಇದಕ್ಕೆ ಪೂರಕ ಎಂಬಂತೆ ಜಮ್ಮುವಿನ ಅಖ್ನೂರ್ ವಿಭಾಗದಲ್ಲಿ ಡ್ರೋನ್ನ ಮೂಲಕ ರವಾನೆಯಾಗುತ್ತಿದ್ದ 5 ಕೆಜಿ ಸ್ಪೋಟಕಗಳನ್ನು ಜಮ್ಮು ಕಾಶ್ಮೀರದ ಪೊಲೀಸರು ಹೊಡೆದುರುಳಿಸಿದ ಘಟನೆ ನಡೆದಿದೆ.
ಈ ಡ್ರೋಣ್ ಅನ್ನು ಚೀನಾ, ಹಾಂಕಾಂಗ್, ತೈವಾನ್ ಗಳು ತಯಾರಿಸಿದ ವಸ್ತುಗಳಿಂದ ತಯಾರು ಮಾಡಲಾಗಿತ್ತು. ಇದರಲ್ಲಿ ತುಂಬಿದ್ದ ಸ್ಫೋಟಕ ವಸ್ತುಗಳಿಗೆ ವೈರ್ಗಳ ಜೋಡಣೆಯೊಂದು ಬಾಕಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಅನಧಿಕೃತ ಡ್ರೋನ್ಗಳ ಹಾರಾಟ ಹೆಚ್ಚಾಗಿ ಕಂಡುಬರುತ್ತಿದ್ದು, ಇಂತಹ ದಾಳಿಗಳನ್ನು ಭಾರತೀಯ ಭದ್ರತಾ ಪಡೆಗಳು ಸಮರ್ಥವಾಗಿ ಎದುರಿಸುತ್ತಲೇ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.