ಬಂಟ್ವಾಳ: ತಾಲೂಕಿನ ಬಿ.ಮೂಡ ಗ್ರಾಮಗಳಿಗೆ ಸಂಬಂಧಪಟ್ಟ ಪುರಾತನ ಹಿನ್ನೆಲೆ ಹೊಂದಿರುವ ಪ್ರಸಿದ್ಧ ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಫೆ. 13ರಿಂದ 15ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಿತು.
ಫೆ.13ರಂದು ಬೆಳಿಗ್ಗೆ ಗಂಟೆ 7ರಿಂದ ಪ್ರಾರ್ಥನೆ ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ವಾಸ್ತುಹೋಮ, ರಾಕ್ಷೆಘ್ನ ಹೋಮ, ವಾಸ್ತು ಬಲಿ, ಮಹಾಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ 7ಕ್ಕೆ ಸುಮನಸ ಯಕ್ಷ ಬಳಗ ಬಂಟ್ವಾಳ ಇವರಿಂದ ಯೋಗೀಶ್ ಅಳದಂಗಡಿ ಮಾರ್ಗದರ್ಶನದಲ್ಲಿ ಏಕಾದಶಿ ದೇವಿ ಮಹಾತ್ಮೆ ಎಂಬ ಯಕ್ಷಗಾನ ನಡೆಯಿತು.
ಫೆ.14ರಂದು ಬೆಳಿಗ್ಗೆ 7ರಿಂದ ಗಣಹೋಮ, ಬಿಂಬ ಕಲಶ ಪೂಜೆ, ಬಿಂಬ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6ರಿಂದ ದೀಪಾಲಂಕಾರ ಪೂಜೆ, ವಾದ್ಯಸೇವೆ, ಮಹಾಪೂಜೆ, ಬಲಿ ಹೊರಟು ವಸಂತ ಕಟ್ಟೆ ಪೂಜೆ ವಿಶೇಷ ನರ್ತನ ಬಲಿ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂಡಳಿ ಬ್ರಹ್ಮರಕೂಟ್ಲು ಇವರಿಂದ ನೃತ್ಯ ಭಜನಾ ಕಾರ್ಯಕ್ರಮ, ೧೫ರಂದು ಬೆಳಿಗ್ಗೆ 7ರಿಂದ ಗಣಹೋಮ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ನವಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ವಿಶೇಷ ರಂಗಪೂಜೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ 10.30ಕ್ಕೆ ಶ್ರೀ ಪದ್ಮಶ್ರೀ ಪದ್ಮಭೂಷಣ್ ಡಾ| ಕೆ. ಜೆ. ಯೇಸುದಾಸ್ ಇವರ ಶಿಷ್ಯರಾದ ಗಾನಭೂಷಣ ಶ್ರೀ ಕೆ. ವೆಂಕಟಕೃಷ್ಣ ಭಟ್ ಹಾಗೂ ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.