ನವದೆಹಲಿ: ಭಾರತೀಯ ಉದ್ಯಮಿ ರತನ್ ಟಾಟಾ ಅವರು ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್ ಆಫ್ ಆಸ್ಟ್ರೇಲಿಯಾ’ ಗೌರವವನ್ನು ಪಡೆದರು. ಭಾರತದ ಉದ್ಯಮಿ ರತನ್ ಟಾಟಾ ಅವರಿಗೆ ಆಸ್ಟ್ರೇಲಿಯಾ ರಾಯಭಾರಿ ‘ಆರ್ಡರ್ ಆಫ್ ಆಸ್ಟ್ರೇಲಿಯ’ ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಆಸ್ಟ್ರೇಲಿಯಾ ರಾಯಭಾರಿ ಬ್ಯಾರಿ ಓ’ಫಾರೆಲ್ ಅವರು, ರತನ್ ಟಾಟಾ ಅವರು ಭಾರತಕ್ಕೆ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಯ ಪರಿಣಾಮ ಆಸ್ಟ್ರೇಲಿಯಾದಲ್ಲಿಯೂ ಕಂಡುಬಂದಿದೆ. ರತನ್ ಟಾಟಾ ಅವರು ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಬಾಂಧವ್ಯಕ್ಕೆ ದೀರ್ಘಕಾಲದ ಬದ್ಧತೆಗಾಗಿ ‘ಆರ್ಡರ್ ಆಫ್ ಆಸ್ಟ್ರೇಲಿಯ’ ಗೌರವವನ್ನು ಪಡೆದಿರುವುದು ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯದ ಅತ್ಯುನ್ನತ ನಾಗರಿಕ ಗೌರವವನ್ನು ರತನ್ನೀ ಟಾಟಾ ಪಡೆದಿರುವುದು ಭಾರತಕ್ಕೆ ಹೆಮ್ಮೆ ಎಂದು ಪರಿಗಣಿಸಬಹುದು.
ಟಾಟಾ ಅವರು 2022 ರ ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದದ ಪರವಾಗಿ ಮಾತನಾಡಿದ್ದಾರೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸುಮಾರು 17,000 ಆಸ್ಟ್ರೇಲಿಯನ್ ಉದ್ಯೋಗಿಗಳನ್ನು ಹೊಂದಿರುವ ಭಾರತದ ಅತಿದೊಡ್ಡ ಸಂಸ್ಥೆಯಾಗಿದೆ.
Ratan Tata is a titan of biz, industry & philanthropy not just in 🇮🇳, but his contributions have also made a significant impact in 🇦🇺. Delighted to confer Order of Australia (AO) honour to @RNTata2000 in recognition of his longstanding commitment to the 🇦🇺🇮🇳relationship. @ausgov pic.twitter.com/N7e05sWzpV
— Barry O’Farrell AO (@AusHCIndia) April 22, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.