ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ವಾಣಿಜ್ಯ ಮಿಷನ್ ಅಡಿ ಸಿಂಗಾಪುರದ ಎರಡು ಗ್ರಾಹಕ ಉಪಗ್ರಹಗಳನ್ನು ಉಡಾವಣೆ ಮಾಡಿದೆ.
228 ಟನ್ ತೂಕದ PSLV ತನ್ನ 57 ನೇ ಹಾರಾಟದಲ್ಲಿ, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ನಿಲ್ದಾಣದಿಂದ ಪೂರ್ವದ ಕಡಿಮೆ ಇಳಿಜಾರಿನ ಕಕ್ಷೆಗೆ ಏರಿತು ಎಂದು ಇಸ್ರೋ ಮೂಲಗಳು ತಿಳಿಸಿವೆ.
ಇದೊಂದು ಎನ್ಎಸ್ಐಎಲ್ನ ವಾಣಿಜ್ಯಿಕ ಯೋಜನೆಯಾಗಿದ್ದು, ಇದರಲ್ಲಿ ಟೆಲಿಒಎಸ್-2 ಪ್ರಾಥಮಿಕ ಉಪಗ್ರಹವಾಗಿದೆ, ಲ್ಯೂಮ್ಲೈಟ್-4 ಸಹ ಪ್ರಯಾಣಿಕ ಉಪಗ್ರಹವಾಗಿದೆ. ಟೆಲಿಒಎಸ್-2 ಉಪಗ್ರಹ 741 ಕೆಜಿ ತೂಕವಿದ್ದರೆ, ಲ್ಯೂಮ್ಲೈಟ್-4 ಉಪಗ್ರಹ 16 ಕೆಜಿ ತೂಕವಿದೆ. ಇವೆರಡೂ ಸಿಂಗಾಪುರದ ಉಪಗ್ರಹಗಳಾಗಿದ್ದು, ಅವುಗಳನ್ನು ಪೂರ್ವಕ್ಕೆ ಕನಿಷ್ಟ ಬಾಗಿರುವಂತೆ ಕಕ್ಷೆಗೆ ಅಳವಡಿಸಲಾಗಿದೆ.
ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರು ಎರಡು ಉಪಗ್ರಹಗಳ ಉಡಾವಣೆ ಯಶಸ್ವಿಯಾಗಿದೆ ಮತ್ತು ನಿಗದಿತ ಕಕ್ಷೆಗೆ ಸೇರಿಸಲಾಗಿದೆ ಎಂದು ಘೋಷಿಸಿದ್ದಾರೆ.
#WATCH | Andhra Pradesh: Indian Space Research Organisation (ISRO) launches its PSLV-C55 with two Singaporean satellites for Earth observation, from Sriharikota.
(Source: ISRO) pic.twitter.com/oKByHiqXjD
— ANI (@ANI) April 22, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.