ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಅವರು ಇಂದು ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಭೇಟಿ ಮಾಡಿದರು ಮತ್ತು ಸುಡಾನ್ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಕುರಿತು ಚರ್ಚಿಸಿದರು. ರಾಜತಾಂತ್ರಿಕ ಪ್ರಕ್ರಿಯೆಗಳ ಮೂಲಕ ಕದನ ವಿರಾಮ ಸಾಧಿಸುವತ್ತ ಗಮನ ಹರಿಸುವ ಬಗ್ಗೆ ಮಾತುಕತೆ ನಡೆಸಿದರು.
ಈ ನಡುವೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಈದ್-ಉಲ್-ಫಿತರ್ ಸಂದರ್ಭವನ್ನು ಗುರುತಿಸಲು ಕನಿಷ್ಠ ಮೂರು ದಿನಗಳ ಕಾಲ ಸುಡಾನ್ನಲ್ಲಿ ಕದನ ವಿರಾಮಕ್ಕೆ ಮನವಿ ಮಾಡಿದರು ಮತ್ತು ಸಂಘರ್ಷ ವಲಯಗಳಲ್ಲಿ ಸಿಲುಕಿರುವ ಜನರು ಸ್ಥಳಾಂತರವಾಗಲು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ಇದರಿಂದ ಅವಕಾಶ ಪಡೆಯುತ್ತಾರೆ ಎಂದಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಸುಡಾನ್ನ ಆಡಳಿತಾರೂಢ ಮಿಲಿಟರಿ ಜುಂಟಾದ ಇಬ್ಬರು ಮಿತ್ರ ನಾಯಕರ ನಡುವೆ ನಡೆದ ಹಿಂಸಾತ್ಮಕ ಹೋರಾಟದಲ್ಲಿ ಇದುವರೆಗೆ 330 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸೇನೆ ಮತ್ತು ಅರೆಸೇನಾಪಡೆಯ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವಿನ ಭೀಕರ ಯುದ್ಧಗಳು ಖಾರ್ಟೂಮ್ ಮತ್ತು ಡಾರ್ಫೂರ್ನಲ್ಲಿ ಸಾಕಷ್ಟು ಹಾನಿಯುಂಟು ಮಾಡಿವೆ.
ಇತ್ತೀಚಿನ ಹಿಂಸಾಚಾರವು ಹೊಸ ನಾಗರಿಕ ಸರ್ಕಾರವನ್ನು ರಚಿಸುವ ಅಂತರರಾಷ್ಟ್ರೀಯ ಬೆಂಬಲಿತ ಯೋಜನೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯದಿಂದ ಪ್ರಚೋದಿಸಲ್ಪಟ್ಟಿದೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.