News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2021-22ರಲ್ಲಿ 110 ಲಕ್ಷ ಮೆಟ್ರಿಕ್ ಟನ್‌ ತಲುಪಿದ ಸಕ್ಕರೆ ರಫ್ತು

ನವದೆಹಲಿ: ನೇರ ಲಾಭ ವರ್ಗಾವಣೆ ಯೋಜನೆಯ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಹೆಚ್ಚಿನ ಹಣ ಬರುತ್ತಿದೆ. ತಂತ್ರಜ್ಞಾನದ ಬಳಕೆಯು ಮಧ್ಯವರ್ತಿಗಳನ್ನು ತೊಡೆದುಹಾಕಿದೆ, ಪಾರದರ್ಶಕತೆ ತಂದಿದೆ ಮತ್ತು ರೈತರಿಗೆ ಅನುಕೂಲವಾಗಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ..

ಇತ್ತೀಚಿನ ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆಯ ಮೇಲಿನ ವೆಚ್ಚವು ಬಹುಪಟ್ಟು ಹೆಚ್ಚಿದೆ, ಇದು ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.

ಇಂದು ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ತೋಮರ್ ಅವರು ಆಹಾರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಆಹಾರ ಧಾನ್ಯಗಳ ಖರೀದಿಗಾಗಿ ದೃಢವಾದ ಕಾರ್ಯವಿಧಾನಗಳನ್ನು ರಚಿಸಲು ಮತ್ತು ದೇಶದಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಉಪಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಡಿಬಿಟಿ ಯೋಜನೆ ಮೂಲಕ ರೈತರ ಖಾತೆಗೆ 3 ಲಕ್ಷ 81 ಸಾವಿರ ಕೋಟಿ ರೂಪಾಯಿ ತಲುಪಿದೆ ಎಂದು ಸಚಿವರು ಹೇಳಿದರು.

ಕೋವಿಡ್ ಸಾಂಕ್ರಾಮಿಕದ ಪರಿಣಾಮಗಳನ್ನು ಎದುರಿಸಲು 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗಿದೆ. ಇದಕ್ಕಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ 3 ಲಕ್ಷದ 90 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು.

2021-22 ನೇ ಸಾಲಿನ ಒಟ್ಟು 1 ಲಕ್ಷದ 18 ಸಾವಿರ ಕೋಟಿ ರೂಪಾಯಿಗಳ ಪೈಕಿ ಕಬ್ಬು ರೈತರ 1 ಲಕ್ಷದ 14 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಬಾಕಿಯನ್ನು ತೆರವುಗೊಳಿಸಲಾಗಿದೆ. ಭಾರತವು ಸಕ್ಕರೆಯ ಅತಿದೊಡ್ಡ ಉತ್ಪಾದಕ ಮತ್ತು ರಫ್ತುದಾರನಾಗಿ ಹೊರಹೊಮ್ಮಿದೆ. ಇತ್ತೀಚಿನ ವರ್ಷಗಳಲ್ಲಿ ಸಕ್ಕರೆಯ ರಫ್ತು  ಹೆಚ್ಚಾಗಿದೆ. 2017-18ರಲ್ಲಿ ಒಟ್ಟು ರಫ್ತು 6.8 ಲಕ್ಷ ಮೆಟ್ರಿಕ್ ಟನ್‌ಗಳಾಗಿದ್ದು, 2021-22ರಲ್ಲಿ 110 ಲಕ್ಷ ಮೆಟ್ರಿಕ್ ಟನ್‌ಗೆ ತಲುಪಿದೆ ಎಂದು ಅವರು ಹೇಳಿದರು.

ರಾಗಿ ಖರೀದಿಗೆ ಸಂಬಂಧಿಸಿದಂತೆ ತೋಮರ್ ಮಾತನಾಡಿ, ಏಳು ರಾಜ್ಯಗಳು 13 ಲಕ್ಷ ಟನ್‌ಗಳಷ್ಟು ಖರೀದಿ ಮಾಡಿವೆ ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top