News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತಿರುಪತಿ ದೇಗುಲಕ್ಕೆ 10 ಎಲೆಕ್ಟ್ರಿಕ್ ಬಸ್‌ ಕೊಡುಗೆ ನೀಡಿದ ಸಂಸ್ಥೆ

ತಿರುಪತಿ:  ಇಂಜಿನಿಯರಿಂಗ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯಾದ ಮೇಘ ಎಂಜಿನಿಯರಿಂಗ್ 10 ಎಲೆಕ್ಟಿಕ್ ಬಸ್‌ಗಳನ್ನು ಟಿಟಿಡಿಗೆ (ತಿರುಮಲ ತಿರುಪತಿ ದೇವಸ್ತಾನಂ -ಟಿಟಿಡಿ) ಕೊಡುಗೆಯಾಗಿ ನೀಡಿದೆ. ತಿರುಮಲ ಬೆಟ್ಟದ ಮೇಲೆ ಪರಿಸರ ಸಂರಕ್ಷಣೆಗಾಗಿ ಎಲೆಕ್ಟ್ರಿಕ್‌ ಬಸ್‌ಗಳು ಮಹತ್ವದ ಕೊಡುಗೆ ನೀಡಲಿವೆ.

ಅಲ್ಲದೇ ತಿರುಮಲದಲ್ಲಿ ಸಂಚರಿಸುವ ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸಲು ಟಿಟಿಡಿ ಕೂಡ ಯೋಜನೆ ಸಿದ್ಧಪಡಿಸಿದೆ.‌

ಈಗಾಗಲೇ ಭಕ್ತರ ಅನುಕೂಲಕ್ಕಾಗಿ ತಿರುಮಲದಲ್ಲಿ 12 ಉಚಿತ ಬಸ್‌ಗಳು ಚಾಲನೆಯಲ್ಲಿವೆ. ತಿರುಮಲದಲ್ಲಿ ಪರಿಸರ ಸಂರಕ್ಷಣೆಗಾಗಿ ಡೀಸೆಲ್ ಬಸ್‌ಗಳ ಬದಲಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ.

“ತಿರುಮಲದಲ್ಲಿ ಸಂಚರಿಸುವ ಟ್ಯಾಕ್ಸಿಗಳನ್ನು ವಾಹನಗಳಾಗಿ ಪರಿವರ್ತಿಸಲು ಟಿಟಿಡಿ ಯೋಜನೆ ಸಿದ್ಧಪಡಿಸುತ್ತಿದೆ. ಈ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡು ಖಾಸಗಿ ಟ್ಯಾಕ್ಸಿಗೆ ಸಹಕಾರ ನೀಡಲು ತೀರ್ಮಾನಿಸಲಾಗಿದೆ. ತಿರುಮಲದಲ್ಲಿ ಟ್ಯಾಕ್ಸಿಗಳನ್ನು ಎಲೆಕ್ಟ್ರಿಜ್ ವಾಹನಗಳಾಗಿ ಪರಿವರ್ತಿಸುವುದು ನಮ್ಮ ಗುರಿ. ಆದರೆ ಟ್ಯಾಕ್ಸಿ ಚಾಲಕರು ದುಬಾರಿ ಇಟಿಕ್ಲಿಕ್ ವಾಹನಗಳನ್ನು ಖರೀದಿಸಲು ಸಾಧ್ಯವಿಲ್ಲದ ಕಾರಣ, ಟಿಟಿಡಿ ಅವರಿಗೆ ಬೆಂಬಲವನ್ನು ನೀಡುತ್ತದೆ. ಟ್ಯಾಕ್ಸಿ ಚಾಲಕರಿಗೆ ಟಿಟಿಡಿ ಒಂದು ಬಾರಿ ಹೂಡಿಕೆ ಮೂಲಕ ಬೆಂಬಲ ನೀಡಲಿದೆ. 10 ರಿಂದ 12 ಪ್ರಯಾಣಿಕರ ಸಾಮರ್ಥ್ಯದ ವಾಹನಗಳನ್ನು ತಯಾರಿಸುವ ಕಂಪನಿಗಳಿಂದ ಟೆಂಡರ್‌ಗಳನ್ನು ಆಹ್ವಾನಿಸಲಾಗುವುದು” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top