ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ವಿದೇಶ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಮೇ 16 ರಂದು ಪ್ರಧಾನಮಂತ್ರಿಯವರು ಗೌತಮ ಬುದ್ಧನ ಜನ್ಮಸ್ಥಳವಾದ ನೇಪಾಳದ ಲುಂಬಿನಿಗೆ ಭೇಟಿ ನೀಡಲಿದ್ದಾರೆ.
ನೇಪಾಳ ಪ್ರಧಾನಿಯವರ ಪತ್ರಿಕಾ ಸಲಹೆಗಾರ ಅನಿಲ್ ಪರಿಯಾರ್ ಪ್ರಕಾರ, ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಹಿಮಾಲಯ ರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ.
ಒಂದು ಗಂಟೆ ಅವಧಿಯ ಪ್ರವಾಸದಲ್ಲಿ, ಪ್ರಧಾನಿ ಮೋದಿ ಅವರು ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಪಶ್ಚಿಮ ನೇಪಾಳದ ಲುಂಬಿನಿಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. 2019 ರಲ್ಲಿ ಪುನರಾಯ್ಕೆಯಾದ ನಂತರ ಪ್ರಧಾನಿ ಮೋದಿಯವರ ಮೊದಲ ನೇಪಾಳ ಭೇಟಿ ಇದಾಗಿದೆ. ಪ್ರಧಾನಿ ದೇವುಬಾ ಅವರು ಮೋದಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭೇಟಿಯ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆಯನ್ನು ಮಾಡಬೇಕಾಗಿದೆ.
ಜುಲೈ 2021 ರಲ್ಲಿ ಐದನೇ ಬಾರಿಗೆ ಪ್ರಧಾನ ಮಂತ್ರಿಯಾದ ನಂತರ ದೇವುಬಾ ಅವರು ಕಳೆದ ತಿಂಗಳು ದೆಹಲಿಗೆ ತಮ್ಮ ಮೊದಲ ದ್ವಿಪಕ್ಷೀಯ ಭೇಟಿ ನೀಡಿದರು. ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವೇಗವನ್ನು ತುಂಬುವ ಗುರಿಯನ್ನು ಹೊಂದಿದ್ದ ಈ ಭೇಟಿಯ ಸಮಯದಲ್ಲಿ, ದೇವುಬಾ ಅವರು ಗಡಿ ಸಮಸ್ಯೆ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಕುರಿತು ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದರು.
“ನಮ್ಮ ಎರಡು ದೇಶಗಳ ನಡುವಿನ ಸ್ನೇಹ ಮತ್ತು ಸಹಕಾರದ ವಿಶೇಷ ಸಂಬಂಧಗಳನ್ನು ಗಾಢವಾಗಿಸಲು ಒಂದು ನವೀಕೃತ ಅವಕಾಶ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಏಪ್ರಿಲ್ನಲ್ಲಿ ಮೋದಿ-ದೇಬಾ ಮಾತುಕತೆಗೆ ಮುಂಚಿತವಾಗಿ ಟ್ವಿಟರ್ನಲ್ಲಿ ಹೇಳಿದ್ದಾರೆ.
ಈ ಪ್ರದೇಶದಲ್ಲಿನ ಒಟ್ಟಾರೆ ಕಾರ್ಯತಂತ್ರದ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ನೇಪಾಳವು ಭಾರತಕ್ಕೆ ಮುಖ್ಯವಾಗಿದೆ. ಈ ಹಿಮಾಲಯ ರಾಷ್ಟ್ರವು ಐದು ಭಾರತೀಯ ರಾಜ್ಯಗಳೊಂದಿಗೆ 1,850 ಕಿಮೀ ಗಡಿಯನ್ನು ಹಂಚಿಕೊಂಡಿದೆ. ಅದೆಂದರೆ- ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್. ಸರಕು ಮತ್ತು ಸೇವೆಗಳ ಸಾಗಣೆಗಾಗಿ ನೇಪಾಳವು ಭಾರತವನ್ನು ಹೆಚ್ಚು ಅವಲಂಬಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.