ನವದೆಹಲಿ: ಅಂಡಮಾನ್ ಮತ್ತು ನಿರೋಬಾರ್ ಪ್ರದೇಶಗಳ ಕರಾವಳಿ ಕಾವಲು ಪಡೆಯ ಕಮಾಂಡರ್ ಇನ್ಸ್ಪೆಕ್ಟರ್ ಜನರಲ್ ದಿನೇಶ್ ರಾಜಪುತ್ರನ್ ಅವರು ದ್ವೀಪದ ದಕ್ಷಿಣ ಭಾಗದಲ್ಲಿರುವ ದ್ವೀಪ ಸಮೂಹಗಳಿಗೆ ಭೇಟಿ ನೀಡಿ , ಕರಾವಳಿ ತೀರದ ಭದ್ರತಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ.
ಕರಾವಳಿ ಕಾವಲು ಪಡೆಯ ಮುಖ್ಯ ಕಚೇರಿ ಇರುವ ಕ್ಯಾಂಪ್ಡೆಲ್ ಕೊಲ್ಲಿಗೆ ಭೇಟಿ ನಂಡಿದ ಅವರಿಗೆ, ಕಚೇರಿಯ ಅಧಿಕಾರಿಗಳು ಅಂಡಮಾನ್ ನಿಕೋಬಾರ್ ದ್ವೀಪದ ನಿಕೋಬಾರ್ ಜಿಲ್ಲೆಯ ದ್ವೀಪ ಸಮೂಹಗಳಲ್ಲಿ ಕೈಗೊಳ್ಳಲಾದ ಸುರಕ್ಷತೆ ಮತ್ತು ಭದ್ರತಾ ಕ್ರಮಗಳ ಬಗ್ಗೆ ವಿವರಿಸಿದ್ದಾರೆ.
ಕರಾವಳಿ ತೀರದ ರಕ್ಷಣೆಗಾಗಿ ಆಧುನಿಕ ಕಣ್ಗಾವಲು ತಂತ್ರಜ್ಞಾನ ಬಳಕೆ, ನೀರಿನೊಳಗೆ ಬಳಕೆ ಮಾಡುವ ರಿಮೋಟ್ ಆಪರೇಟೆಡ್ ವೆಹಿಕಲ್ನ ಪ್ರಾತ್ಯಕ್ಷಿಕೆಯನ್ನು ಅಧಿಕಾರಿಗಳು ಅವರೆದುರು ಪ್ರದರ್ಶಿಸಿದ್ದಾರೆ. ಅಂಡಮಾನ್ ನಿಕೋಬಾರ್ನ 572 ದ್ವೀಪಗಳು ಸೇರಿದಂತೆ ಉತ್ತರದ ಲ್ಯಾಂಡ್ಫಾಲ್ ದ್ವೀಪದಿಂದ, ದಕ್ಷಿಣದ ಇಂದಿರಾ ಪಾಯಿಂಟ್ ವರೆಗಿನ ಸಂಪೂರ್ಣ ಕರಾವಳಿಯು, ಕರಾವಳಿ ಕಾವಲು ಪಡೆ ಕಮಾಂಡರ್ನ ಆಡಳಿತಾತ್ಮಕ ನಿಯಂತ್ರಣದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.