ನವದೆಹಲಿ: ಗುವಾಹಟಿಯ ಸಾರುಸಜೈ ಕ್ರೀಡಾಂಗಣ ಸಂಕೀರ್ಣದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಕೇವಲ 20 ದಿನಗಳಲ್ಲಿ ನಿರ್ಮಿಸಿದ ಕೋವಿಡ್ -19 ರೋಗಿಗಳಿಗೆ ಮೀಸಲಾಗಿರುವ 300 ಹಾಸಿಗೆಗಳ ಹೊಸ ಆಸ್ಪತ್ರೆಯನ್ನು ಅಸ್ಸಾಂ ರಾಜ್ಯ ಸರ್ಕಾರ ಕಾರ್ಯಾರಂಭ ಮಾಡಿದೆ.
ಒಟ್ಟು 3200 ಚದರ ಮೀಟರ್ ವಿಸ್ತೀರ್ಣದಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಲು 21.46 ಕೋಟಿ ರೂಪಾಯಿ ವ್ಯಯವಾಗಿದೆ. ಇದು ಸಾಮಾನ್ಯ ವಾರ್ಡ್ನಲ್ಲಿ 200 ಹಾಸಿಗೆಗಳು ಮತ್ತು 100 ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳನ್ನು ಹೊಂದಿದೆ. ಈ ಸೌಲಭ್ಯವು ಪ್ರಯೋಗಾಲಯ, ಅಲ್ಟ್ರಾಸೌಂಡ್ ಮತ್ತು ಇಸಿಜಿ ಕೊಠಡಿ, ಔಷಧಾಲಯ ಮತ್ತು ಎಕ್ಸರೆ ಕೋಣೆಯನ್ನು ಹೊಂದಿದೆ.
“ಅಧಿಕಾರ ವಹಿಸಿಕೊಂಡಾಗಿನಿಂದ ನಾವು ಕೋವಿಡ್ -19 ರೋಗಿಗಳಿಗಾಗಿ ರಾಜ್ಯದಾದ್ಯಂತ 390 ಐಸಿಯು ಹಾಸಿಗೆಗಳು ಮತ್ತು 2,684 ಆಮ್ಲಜನಕ ಹಾಸಿಗೆಗಳನ್ನು ಸ್ಥಾಪಿಸಿದ್ದೇವೆ” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ.
Our fight against #Covid just grew stronger. Very happy to inaugurate the 300-bed COVID Care Hospital at Sarusajai, to act as an annex to Guwahati Medical College & Hospital.
Congratulations to team for pulling this off in a record time. @keshab_mahanta 1/5 pic.twitter.com/NYFZ9PuRaw
— Himanta Biswa Sarma (@himantabiswa) June 10, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.