ನವದೆಹಲಿ: ಈ ಬಾರಿಯ ಆಗಸ್ಟ್ ತಿಂಗಳಿನಿಂದ ತೊಡಗಿದಂತೆ ರವಿವಾರದ ರಜಾ ಅವಧಿಯಲ್ಲಿಯೂ ಸಂಬಳ, ಡಿವಿಡೆಂಡ್ಗಳನ್ನು ಒಳಗೊಂಡಂತೆ ಇತರ ಪಾವತಿಗಳು ಗ್ರಾಹಕರ ಖಾತೆಗೆ ಪಾವತಿಯಾಗಲಿದೆ ಎಂದು ಆರ್ಬಿಐ ತನ್ನ ನೂತನ ನೀತಿಯಲ್ಲಿ ತಿಳಿಸಿದೆ.
ನ್ಯಾಷನಲ್ ಅಟೋಮೆಟೆಡ್ ಕ್ಲಿಯರಿಂಗ್ ಹೌಸ್ ಎಂಬ ಹೊಸ ಸೂತ್ರದನ್ವಯ ಈ ಕ್ರಮ ಜಾರಿಯಾಗಲಿದೆ. ಇದರಲ್ಲಿ ಸಾಲದ ಕಂತುಗಳನ್ನು ಕಡಿತಗೊಳಿಸುವುದಕ್ಕೂ ಪೂರಕ ವ್ಯವಸ್ಥೆ ಕೈಗೊಳ್ಳಲಾಗಿದೆ. ಬ್ಯಾಂಕ್ಗೆ ರಜೆ ಇದ್ದರೂ, ವಾರದ 7 ದಿನಗಳಲ್ಲಿ ನಿರಂತರ ಪಾವತಿ ಪ್ರಕ್ರಿಯೆ ಈ ನೂತನ ನೀತಿಯ ಮೂಲಕ ನಡೆಯಲಿದೆ ಎಂದು ಆರ್ಬಿಐ ತಿಳಿಸಿದೆ.
ಹಲವು ಮಂದಿ ಗ್ರಾಹಕರ ಖಾತೆಗಳಿಗೆ ದೊಡ್ಡ ಮೊತ್ತದ ಮೌಲ್ಯವನ್ನು ಸುಲಭವಾಗಿ ವರ್ಗಾಯಿಸುವ ನಿಟ್ಟಿನಲ್ಲಿ ಎನ್ಪಿಸಿಐ ಹೊಸ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಿದೆ. ವಿತ್ತೀಯ ಸಂಸ್ಥೆಗಳು, ಬ್ಯಾಂಕ್ಗಳು, ಕಾರ್ಪೊರೇಟ್ ಸಂಸ್ಥೆ, ಸರ್ಕಾರಕ್ಕೂ ಈ ವ್ಯವಸ್ಥೆ ಅನುಕೂಲ ಕಲ್ಪಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.