ನವದೆಹಲಿ: ಪಶ್ಚಿಮಬಂಗಾಳ, ತಮಿಳುನಾಡು, ಪುದುಚೇರಿ, ಕೇರಳ ಮತ್ತು ಅಸ್ಸಾಂ ರಾಜ್ಯಗಳಿಗೆ ಕೇಂದ್ರ ಚುನಾವಣಾ ಆಯೋಗ ಇಂದು ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ.
ಈ ಐದು ರಾಜ್ಯಗಳಲ್ಲಿ 18.68 ಕೋಟಿ ಮತದಾರರು ಇದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ತಿಳಿಸಿದ್ದಾರೆ. ಈ ರಾಜ್ಯಗಳಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
ಅಸ್ಸಾಂ ಚುನಾವಣೆ ಮೂರು ಹಂತಗಳಲ್ಲಿ, ಕೇರಳ ಮತ್ತು ತಮಿಳುನಾಡು, ಪುದುಚೇರಿಯಲ್ಲಿ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ. ಪಶ್ಚಿಮಬಂಗಾಳ ಚುನಾವಣೆ 8 ಹಂತಗಳಲ್ಲಿ ನಡೆಯಲಿದೆ.
ಮಾರ್ಚ್ 27 ರಿಂದ ಅಸ್ಸಾಂನಲ್ಲಿ ಚುನಾವಣೆ ನಡೆಯಲಿದೆ. ಅಸ್ಸಾಂ ವಿಧಾನಸಭಾ ಚುನಾವಣೆ 3 ಹಂತಗಳಲ್ಲಿ ನಡೆಯಲಿದೆ. 1 ನೇ ಹಂತದ ಮತದಾನ ಮಾರ್ಚ್ 27, ಎರಡನೇ ಹಂತದ ಮತದಾನ ಏಪ್ರಿಲ್ 1 ಮತ್ತು ಮೂರನೇ ಹಂತದ ಮತದಾನ ಏಪ್ರಿಲ್ 6ರಂದು ನಡೆಯಲಿದೆ.
ಏಪ್ರಿಲ್ 6 ರಂದು ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ಮತದಾನ ನಡೆಯಲಿದೆ.
ಮಾರ್ಚ್ 27ರಿಂದ ಪಶ್ಚಿಮಬಂಗಾಳದಲ್ಲಿ ಚುನಾವಣೆ ಆರಂಭವಾಗಲಿದೆ. ಮಾರ್ಚ್ 27 ರಂದು 1 ನೇ ಹಂತದ ಮತದಾನ, ಏಪ್ರಿಲ್ 1 ರಂದು ಎರಡನೇ ಹಂತದ ಮತದಾನ, ಏಪ್ರಿಲ್ 6 ರಂದು ಮೂರನೇ ಹಂತದ ಮತದಾನ, ಏಪ್ರಿಲ್ 10 ರಂದು ನಾಲ್ಕನೇ ಹಂತದ ಮತದಾನ, ಏಪ್ರಿಲ್ 17 ರಂದು ಐದನೇ ಹಂತದ ಮತದಾನ, ಏಪ್ರಿಲ್ 22 ರಂದು ಆರನೇ ಹಂತದ ಮತದಾನ, ಎಪ್ರಿಲ್ 26ರಂದು ಏಳನೇ ಹಂತ-, ಅಂತಿಮ ಹಂತದ ಮತದಾನ ಎಪ್ರಿಲ್ 29ರಂದು ನಡೆಯಲಿದೆ.
ಎಲ್ಲಾ ರಾಜ್ಯಗಳ ಫಲಿತಾಂಶ ಮೇ 2ರಂದು ಘೋಷಣೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.