ವೀರ ಸಾವರ್ಕರ್ ಹೆಸರನ್ನು ಕೇಳಿದರೆ ದೇಶ ಭಕ್ತರಿಗೆ ರೋಮಾಂಚನವಾದರೆ, ಇನ್ನೂ ಕೆಲವರಿಗೆ ಮೈ ಮೇಲೆಯೇ ಮೆಣಸಿನ ಕಾಯಿ ಅರೆದಂತಾಗುತ್ತದೆ.! ಸಣ್ಣ ವಯಸ್ಸಿನಲ್ಲಿ ಸಾಮಾನ್ಯವಾಗಿ ಮಣ್ಣಾಟ, ಬುಗುರಿಯಾಟ ಆಡುತ್ತಿದ್ದರೆ, ಸಾವರ್ಕರ್ ಮಾತ್ರ ಚಾಪೆಕಾರ್ ಸಹೋದರರನ್ನು ನೆನೆದು ಕಣ್ಣೀರಿಡುತ್ತಿದ್ದರು, ಶಿವಾಜಿಯ ಕಥೆಗಳನ್ನು ತನ್ನ ಸ್ನೇಹಿತರಿಗೆ ಹೇಳುತ್ತಿದ್ದರು.
ಬ್ರಿಟಿಷರು ಭಾರತಕ್ಕೆ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡಬಹುದಾದರೆ ನಾವೇಕೆ ಬ್ರಿಟಿಷರ ನಾಡಿಗೆ ತೆರಳಿ ಅವರನ್ನು ಸದೆಬಡಿಯಬಾರದೆಂದು ಯೋಚಿಸಿ ಶಿಷ್ಯವೇತನವನ್ನು ಗಿಟ್ಟಿಸಿ ಲಂಡನ್ಗೆ ಹಾರಿಯೇಬಿಟ್ಟರು. ಭಾರತೀಯ ಭವನದಲ್ಲಿ ಉಳಿದುಕೊಂಡು ಅಲ್ಲಿದ್ದ ಯುವಕರನ್ನು ಒಟ್ಟುಗೂಡಿಸಿ ಕ್ರಾಂತಿಕಾರಿಗಳ ಪಡೆಯನ್ನೇ ಕಟ್ಟಿದರು. ಆ ಕ್ರಾಂತಿಕಾರಿಗಳಲ್ಲಿ ಮೊದಲು ಹೊರಬಂದ ಸಿಂಹವೇ ಪಂಜಾಬಿನ ಮದನ್ ಲಾಲ್ ಧಿಂಗ್ರ. ತುಂಬಿದ ಸಭೆಯಲ್ಲಿಯೇ ಬ್ರಿಟಿಷ್ ಅಧಿಕಾರಿಯ ಹತ್ಯೆ ಮಾಡಿದರು. ಯಾವಾಗ ಈ ಹತ್ಯೆ ಬ್ರಿಟಿಷರ ನೆಲದಲ್ಲಾಯಿತೋ ಅಂದೇ ಬ್ರಿಟಿಷರಿಗೆ ನಡುಕ ಹುಟ್ಟಿದ್ದು ಸುಳ್ಳಲ್ಲ.!
1905 ರಲ್ಲಿ ಭಾರತದಲ್ಲಿ ಮಾಡಿದ್ದ ಭಾಷಣಕ್ಕಾಗಿ ಲಂಡನ್ನಲ್ಲಿ ಸಾವರ್ಕರ್ ಅವರ ಬಂಧನವಾಗುತ್ತದೆ. ಎಸ್. ಎಸ್. ಮೋರಿಯಾ ಹಡಗು ಲಂಡನ್ನಿಂದ ಸಾವರ್ಕರ್ರನ್ನು ಹೊತ್ತು ಭಾರತದತ್ತ ಹೊರಡುತ್ತದೆ. ಸಾವರ್ಕರ್ರಿಗೆ ತಾನು ಬಂಧನವಾದರೆ ಸ್ವಾತಂತ್ರ್ಯಕ್ಕೆ ಹೋರಾಡುವುದು ಹೇಗೆ ಎಂದು ತಿಳಿದು ಯೋಚಿಸುತ್ತಾ ಹಡಗಿನಲ್ಲಿ ಶೌಚಾಲಕ್ಕೆ ಧಾವಿಸುತ್ತಾರೆ. ಶೌಚಾಲಯದಲ್ಲಿ ಸಣ್ಣ ಕಿಂಡಿಯನ್ನು ನೋಡಿದ ಸಾವರ್ಕರ್ ಇದೇ ಸರಿಯಾದ ಸಮಯ ಮತ್ತು ದಾರಿ ಎಂದು ನಿರ್ಧಾರ ಮಾಡಿ ಬಟ್ಟೆಯನ್ನ ತೆಗೆದು ದೇಹವನ್ನು ಪ್ರಾಣಾಯಾಮದಿಂದ ಕುಗ್ಗಿಸಿ ಸ್ವಾತಂತ್ರ್ಯ ಲಕ್ಷ್ಮೀ ಕಿ ಜಯ್ ಎಂದು ಹಾರಿಯೇ ಬಿಡುತ್ತಾರೆ. ಹಾರಿದ ರಭಸಕ್ಕೆ ಮೈ ಚರ್ಮವೆಲ್ಲಾ ಹರಿದು ಹೋಗುತ್ತದೆ ಆದರೂ ಲೆಕ್ಕಿಸದೆ ಉಪ್ಪುನೀರಿನಲ್ಲಿ ಈಜಿ ದಡವನ್ನು ತಲುಪುತ್ತಾರೆ. ಆದರೂ ಬ್ರಿಟಿಷರು ಹುಡುಕಿ ಎಳೆದುಕೊಂಡು ಬಂದು ಕೋರ್ಟ್ ನ ಕಟ ಕಟೆಯಲ್ಲಿ ನಿಲ್ಲಿಸುತ್ತಾರೆ. ಅಲ್ಲಿ ಸಾವರ್ಕರ್ ಅವರಿಗೆ 25 ವರ್ಷಗಳ 2 ಕರಿನೀರ ಶಿಕ್ಷೆ ಘೋಷಣೆಯಾಗುತ್ತದೆ.
ಕರಿನೀರ ಶಿಕ್ಷೆ ಎಂದರೆ ಎಂಥಾ ಧ್ಯರ್ಯವಂತರಾದರೂ ಒಂದು ಸಲ ಹೆದರುವಂತಹ ಶಿಕ್ಷೆ ಅದು. ಭೂಲೋಕದ ನರಕ ಅಂತಲೇ ಆ ಶಿಕ್ಷೆಯನ್ನು ಕರೆಯುತ್ತಿದ್ದರು. ತೆಂಗಿನಕಾಯಿಯನ್ನು ಗಾಣಕ್ಕೆ ಹಾಕಿ, ಎತ್ತುಗಳ ಬದಲಿಗೆ ಮನುಷ್ಯರನ್ನು ಕಟ್ಟಿ ದಿನಕ್ಕೆ 30 ಪೌಂಡ್ ಎಣ್ಣೆ ತೆಗೆಯುವುದು ಎಂದರೆ ನೂಲು ತೆಗೆದಷ್ಟು ಸುಲಭವಲ್ಲ.!
ಅಸ್ಪೃಶ್ಯತೆಯನ್ನು ಸಮಾಜದಿಂದ ಹೋಗಲಾಡಿಸಲು ಸಾವರ್ಕರ್ ಕ್ರಾಂತಿಯೊಂದನ್ನೇ ಮಾಡಿಬಿಟ್ಟರು. ಪುಣೆಯ ಪತಿತ ಪಾವನ ಮಂದಿರದಲ್ಲಿ ದಲಿತರಿಂದ ಪೂಜೆ ಮಾಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು ಸಾವರ್ಕರ್. ಇಡೀ ಹಿಂದೂ ಸಮಾಜ ಒಗ್ಗೂಡಿ ನಡೆಯಬೇಕು ಎಂಬುದು ಸಾವರ್ಕರ್ ಅವರ ಕನಸಾಗಿತ್ತು.
1950 ರ ಏಪ್ರಿಲ್ ೪4 ರಂದು ಪಾಕಿಸ್ತಾನದ ಪ್ರಧಾನಿ ಲಿಯಾಖತ್ ಭಾರತಕ್ಕೆ ಬರುತ್ತಾರೆ ಎಂಬುದಕ್ಕಾಗಿ, ಕೋಮು ಘರ್ಷಣೆ ಉಂಟಾಗುತ್ತದೆ ಎಂಬ ನೆಪವೊಡ್ಡಿ ಸಾವರ್ಕರ್ ಅವರನ್ನು ನೆಹರೂ ಸರ್ಕಾರ ಬಂಧಿಸಿ ವಿಲಕ್ಷಣವಾಗಿ ಅವಮಾನಿಸುತ್ತದೆ.!
13 ವರ್ಷಗಳ ಕಾಲ ಭಾರತದ ಸ್ವಾತಂತ್ರ್ಯಕ್ಕಾಗಿ ಕರಿನೀರ ಶಿಕ್ಷೆ ಯನ್ನು ಅನುಭವಿಸಿದ್ದ ಸಾವರ್ಕರ್ ರಿಗೆ ಸ್ವಾತಂತ್ರ್ಯ ನಂತರವೂ ಬಂಧನ ಎಂದರೆ ! ಎಂಥಾ ದುಃಖದ ಸಂಗತಿ..! ಗಾಂಧಿ ಹತ್ಯೆಯಾದಾಗ ಸಾವರ್ಕರ್ ಅವರ ಮನೆಯ ಮೇಲೆ ಕಲ್ಲುಬಿತ್ತು, ಕಲ್ಲೇಟಿನ ಗಾಯದಿಂದ ಸಾವರ್ಕರ್ ಅವರ ಹಣೆಯಿಂದ ರಕ್ತ ಸುರಿದರೆ, ಅವರ ತಮ್ಮ ಬಾಳಾ ತೀರಿಕೊಂಡೇ ಬಿಟ್ಟರು. ಸಾವರ್ಕರ್ ರಿಗೂ ಗಾಂಧೀಜಿ ಹತ್ಯೆಗೂ ಸಂಬಂಧವೇ ಇಲ್ಲ ಎಂದರೂ, ಕಾಂಗ್ರೆಸ್ ನವರು ಈಗಲೂ ಸಂಬಂಧ ಕಟ್ಟುತ್ತಾರೆ…
ಇವನ್ನೆಲ್ಲಾ ನೋಡಿ ಮನ ನೊಂದು 21 ದಿನಗಳ ಕಾಲ ಅನ್ನ ಆಹಾರ ಬಿಟ್ಟು ತಾಯಿ ಭಾರತೀಯ ಪಾದ ಕಮಲಗಳಲ್ಲಿ ಸಾವರ್ಕರ್ ಪ್ರಾಣ ಬಿಟ್ಟರು. ಸಾವರ್ಕರ್ ಅವರು ಮಾಡಿದ ಸೇವೆಗೆ ನಾವೇನು ನೀಡಿದರೂ ಎಷ್ಟೇ ಅವರ ಪರ ಘೋಷಣೆ ಕೂಗಿದರೂ ಕಡಿಮೆಯೇ..
ಜೈ ಸಾವರ್ಕರ್
✍️ ಕಲಾನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.