ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಸಾಮೂಹಿಕ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಸಜ್ಜಾಗಿರುವ ಕೇಂದ್ರ ಸರ್ಕಾರವು ಪಂಜಾಬ್, ಅಸ್ಸಾಂ, ಗುಜರಾತ್ ಮತ್ತು ಆಂಧ್ರಪ್ರದೇಶದ ರಾಜ್ಯಗಳಲ್ಲಿ ಪ್ರಾಯೋಗಿಕ ವ್ಯಾಕ್ಸಿನೇಷನ್ ಅಭಿಯಾನ ಪ್ರಾರಂಭಿಸಲು ಮುಂದಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಡಿಸೆಂಬರ್ 28-29ರಂದು ಪಂಜಾಬ್ ರಾಜ್ಯದಿಂದ ಪ್ರಾರಂಭವಾಗಲಿರುವ ಅಭಿಯಾನ, ದೇಶಾದ್ಯಂತ ಲಸಿಕೆ ಜಾರಿಯಾಗುವ ಕಾರ್ಯವಿಧಾನಗಳನ್ನು ಪರೀಕ್ಷಿಸುತ್ತದೆ ಮತ್ತು ನಿಜವಾದ ಅಭಿಯಾನ ಪ್ರಾರಂಭವಾಗುವ ಮೊದಲು ಗಮನಹರಿಸಬೇಕಾದ ಯಾವುದೇ ಸಂಗತಿಗಳು ಮತ್ತು ಅಡಚಣೆಗಳ ಬಗ್ಗೆ ಒಳನೋಟಗಳನ್ನು ಪಡೆಯಲಿದೆ.
ಪಂಜಾಬ್ನಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ) ಬೆಂಬಲದೊಂದಿಗೆ ಲುಧಿಯಾನ ಮತ್ತು ಶಾಹೀದ್ ಭಗತ್ ಸಿಂಗ್ ನಗರ ಜಿಲ್ಲೆಗಳಲ್ಲಿ ವ್ಯಾಕ್ಸಿನೇಷನ್ ನಡೆಯಲಿದೆ.
ರಾಜ್ಯದಲ್ಲಿ ಎರಡು ದಿನಗಳ ಡ್ರೈ ರನ್ ಚಟುವಟಿಕೆಯು ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ತೊಡಗಿರುವ ಹಂತಗಳ ಸಂಪೂರ್ಣ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ ಡೇಟಾ ಅಪ್ಲೋಡ್, ಸೆಷನ್ ಸೈಟ್ ಹಂಚಿಕೆ, ಪರೀಕ್ಷಾ ಫಲಾನುಭವಿಗಳೊಂದಿಗೆ ಸೆಷನ್ ಸೈಟ್ ನಿರ್ವಹಣೆ, ಮತ್ತು ಇತ್ಯಾದಿ ಇರಲಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಯ ದೃಡೀಕರಣಕ್ಕೆ ಕೇಂದ್ರದ ಔಷಧ ನಿಯಂತ್ರಕ ಶೀಘ್ರದಲ್ಲೇ ಅನುಮೋದನೆ ನೀಡಬಹುದೆಂದು ವರದಿಯಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಈ ಲಸಿಕೆಯನ್ನು ಭಾರತದಲ್ಲಿ ಪುಣೆ ಮೂಲದ ಸೀರಮ್ ಸಂಸ್ಥೆ ತಯಾರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.