ಚೆನ್ನೈ: ತಮಿಳುನಾಡು ಮೂಲದ ಬಾಲಕಿಯೊಬ್ಬಳು 46 ವಿಧದ ಖಾದ್ಯಗಳನ್ನು ಕೇವಲ 58 ನಿಮಿಷಗಳಲ್ಲಿ ತಯಾರಿಸುವ ಮೂಲಕ ವಿಶ್ವ ದಾಖಲೆಯನ್ನು ಮಾಡಿದ್ದಾಳೆ. ಈ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾಳೆ.
ಪಾಕಶಾಸ್ತ್ರದ ಯುನಿಕೋ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅನ್ನು ಎಸ್.ಎನ್.ಲಕ್ಷ್ಮೀ ಸಾಯಿ ಶ್ರೀ ಮಾಡಿದ್ದಾಳೆ.
ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ತಾನು ಅಡುಗೆ ಕಲಿತಿರುವುದಾಗಿ ಸಾಯಿ ಶ್ರೀ ಹೇಳಿಕೊಂಡಿದ್ದಾಳೆ.
“ನಾನು ನನ್ನ ತಾಯಿಯಿಂದ ಅಡುಗೆ ಕಲಿತಿದ್ದೇನೆ. ನಾನು ಈ ಮೈಲಿಗಲ್ಲನ್ನು ಸಾಧಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ “ಎಂದು ಬಾಲಕಿ ಹೇಳಿಕೊಂಡಿದ್ದಾಳೆ.
“ನಾನು ತಮಿಳುನಾಡಿನ ವಿಭಿನ್ನ ಸಾಂಪ್ರದಾಯಿಕ ಪಾಕಗಳನ್ನು ತಯಾರಿಸುತ್ತೇನೆ. ಲಾಕ್ ಡೌನ್ ಸಮಯದಲ್ಲಿ, ನನ್ನ ಮಗಳು ನನ್ನೊಂದಿಗೆ ಅಡುಗೆಮನೆಯಲ್ಲಿ ತನ್ನ ಸಮಯವನ್ನು ಕಳೆಯುತ್ತಿದ್ದಳು. ಆಕೆಯ ತಂದೆ ಆಕೆಗೆ ವಿಶ್ವದಾಖಲೆ ಮಾಡಲು ಹುರಿದುಂಬಿಸಿದರು”ಎಂದು ಆಕೆಯ ತಾಯಿ ಹೇಳಿದ್ದಾರೆ.
Tamil Nadu: A girl entered UNICO Book Of World Records by cooking 46 dishes in 58 minutes in Chennai yesterday. SN Lakshmi Sai Sri said, “I learnt cooking from my mother. I am very happy”. pic.twitter.com/AmZ60HWvYX
— ANI (@ANI) December 15, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.