
ಭೋಪಾಲ್: ಮಧ್ಯಪ್ರದೇಶದಲ್ಲಿ ಜನವರಿ 18 ರಂದು ಹಸಮಣೆಯನ್ನು ಏರಲಿರುವ ದಂಪತಿಗಳು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಅರಿವು ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ.
“ಸಿಎಎ ಪರವಾಗಿ ಅರಿವನ್ನು ಮೂಡಿಸುವುದು ನನ್ನ ಉದ್ದೇಶ. ಜನರು ಕಾಯ್ದೆಯ ಬಗ್ಗೆ ಸತ್ಯವನ್ನು ಅರಿತುಕೊಳ್ಳಬೇಕು ಎಂಬುದು ನನ್ನ ಆಶಯ” ಎಂದು ವರ ಪ್ರಭಾತ್ ಅವರು ಹೇಳಿದ್ದಾರೆ. ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಅವರು ಸಿಎಎ ಪರ ಘೋಷಣೆಗಳನ್ನು ಮೂಡಿಸಿದ್ದಾರೆ.
ಇತ್ತೀಚಿಗಷ್ಟೇ ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯ ದಂಪತಿಗಳೂ ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಎನ್ ಆರ್ ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಬೆಂಬಲವನ್ನು ಸೂಚಿಸಿದ್ದರು.
ಮೋಹಿತ್ ಮಿಶ್ರಾ ಮತ್ತು ಸೋನಂ ಪಾಠಕ್ ಅವರು, ‘ವಿ ಸಪೋರ್ಟ್ ಸಿಎಎ ಮತ್ತು ಎನ್ ಆರ್ ಸಿ” ಎಂದು ದೊಡ್ಡ ಅಕ್ಷರದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಬರೆಸಿದ್ದಾರೆ.
ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕ ಕಿರುಕುಳ ಅನುಭವಿಸಿ ಭಾರತಕ್ಕೆ 2014 ರ ಡಿಸೆಂಬರ್ 31ರೊಳಗೆ ಪಲಾಯನ ಮಾಡಿದ ಹಿಂದೂಗಳು, ಸಿಖ್ಖರು, ಜೈನರು, ಪಾರ್ಸಿಗಳು, ಬೌದ್ಧರು ಮತ್ತು ಕ್ರಿಶ್ಚಿಯನ್ನರಿಗೆ ಪೌರತ್ವ ನೀಡುವ ಸಿಎಎ ಜಾರಿಗೆ ಬಂದ ನಂತರ ದೇಶಾದ್ಯಂತ ಹಲವಾರು ಪ್ರತಿಭಟನೆಗಳು ಭುಗಿಲೆದ್ದವು. ಪ್ರತಿಪಕ್ಷಗಳು ದೊಂಬಿಯನ್ನು ಎಬ್ಬಿಸಿದ್ದವು. ಇದೀಗ ದೇಶವ್ಯಾಪಿಯಾಗಿ ಸಿಎಎ ಪರವಾದ ಮೌನ ಅಭಿಯಾನಗಳು ಆರಂಭಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


