ನವದೆಹಲಿ: ಭಾರತದ ದೇಶೀ ನಿರ್ಮಿತ ಇನ್ ಸರ್ವಿಸ್ ಲೈಟ್ ಕಂಬಾತ್ ಏರ್ಕ್ರಾಫ್ಟ್ ನಾವೆಲ್ (LCA-N) ತೇಜಸ್ ಎಂಕೆಐ ಶನಿವಾರ ಭಾರತೀಯ ನೌಕಾಪಡೆಯ ಏರ್ಕ್ರಾಫ್ಟ್ ಕ್ಯಾರಿಯರ್ ಐಎನ್ಎಸ್ ವಿಕ್ರಮಾದಿತ್ಯದ ಮೇಲೆ ಲ್ಯಾಂಡ್ ಆಗುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಇದೇ ಮೊದಲ ಬಾರಿಗೆ ಈ ಪ್ರಯೋಗವನ್ನು ಮಾಡಲಾಗಿದ್ದು, ಇದು ಯಶಸ್ವಿಯಾಗಿದೆ.
ಈ ಮಹತ್ವದ ಮೈಲಿಗಲ್ಲು, ನಿರ್ದಿಷ್ಟವಾದ ಡೆಕ್ ಆಧಾರಿತ ಯುದ್ಧ ಕಾರ್ಯಾಚರಣೆಗಳಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸ್ಥಾಪಿತ ತಂತ್ರಜ್ಞಾನಗಳನ್ನು ಸಾಬೀತುಪಡಿಸಿದೆ. ಭಾರತೀಯ ನೌಕಾಪಡೆಗಾಗಿ ಟ್ವಿನ್ ಎಂಜಿನ್ ಡೆಕ್ ಬೇಸ್ಡ್ ಫೈಟರ್ ಅನ್ನು ಅಭಿವೃದ್ಧಿಪಡಿಸಲು ಮತ್ತು ತಯಾರಿಸಲು ಭಾರತಕ್ಕೆ ಈ ಯಶಸ್ಸು ಕಾರಣವಾಗಲಿದೆ.
“ಡಿಆರ್ಡಿಒ, ಶೋರ್ ಬೇಸ್ಡ್ ಟೆಸ್ಟ್ ಫೆಸಿಲಿಟಿ ಕುರಿತು ವ್ಯಾಪಕವಾದ ಪ್ರಯೋಗಗಳನ್ನು ನಡೆಸಿ ಪೂರ್ಣಗೊಳಿಸಿದ ನಂತರ, ಎಡಿಎ ಅಭಿವೃದ್ಧಿಪಡಿಸಿದ ಎಲ್ಸಿಎ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಇಂದು 11 ಜನವರಿ 2020 ರಂದು 10:02 ಗಂಟೆಗೆ ಯಶಸ್ವಿಯಾಗಿ ಲ್ಯಾಂಡ್ ಆಯಿತು. ಕಮಡೋರ್ ಜೈದೀಪ್ ಮೌಲಂಕರ್ ಮೊದಲ ಲ್ಯಾಂಡಿಂಗ್ ಮಾಡಿದರು” ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಟ್ವಿಟ್ ಮಾಡಿದೆ.
After completing extensive trials on the Shore Based Test Facility, DRDO, ADA developed LCA Navy did an arrested landing on INS Vikramaditya succesfully today 11 jan 2020 at 10:02 hours. Commodore Jaideep Maolankar did the maiden landing.
— DRDO (@DRDO_India) January 11, 2020
BREAKING: Top sources tell us an LCA Navy prototype has just conducted its first landing on @IndianNavy aircraft carrier INS Vikramaditya. Details awaited. [Art below, not photo] pic.twitter.com/gbcGnxZJgk
— Livefist (@livefist) January 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.