ಬೆಳಗಾವಿ: ಅನಾಥ ಮಕ್ಕಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರೈಲ್ವೇ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಬೆಳಗಾವಿ ರೈಲು ನಿಲ್ದಾಣದಲ್ಲಿ ಅನಾಥ ಮಕ್ಕಳಿಗಾಗಿ ತೊಟ್ಟಿಲನ್ನು ಅಳವಡಿಸಲಾಗಿದೆ.
ತೊಟ್ಟಿಲಲ್ಲಿ ಇಡಲಾಗುವ ಶಿಶುಗಳನ್ನು ಅನಾಥಾಶ್ರಮಗಳಲ್ಲಿ ನೋಡಿಕೊಳ್ಳಲಾಗುವುದು. ನಂತರ ಅವುಗಳನ್ನು ದತ್ತು ನೀಡಲು ಪಟ್ಟಿ ಮಾಡಲಾಗುತ್ತದೆ. ತೊಟ್ಟಿಲು ಮತ್ತು ನಂತರದ ಪ್ರಕ್ರಿಯೆಗಳನ್ನು ನಗರ ಮೂಲದ ಎನ್ಜಿಒ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ನಿರ್ವಹಿಸಲಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಶಿಶುಗಳನ್ನು ಬಿಟ್ಟು ಅವುಗಳ ಜೀವಕ್ಕೆ ಕುತ್ತು ತರುವ ನಡವಳಿಕೆಗಳಿಂದ ಮುಕ್ತಿಯನ್ನು ಪಡೆಯಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ತೊಟ್ಟಿಲಲ್ಲಿ ಬಿಡಲಾಗುವ ಶಿಶುಗಳನ್ನು ಸಮರ್ಪಕವಾದ ಕಾಳಜಿಯೊಂದಿಗೆ ನೋಡಿಕೊಳ್ಳಲಾಗುವುದು ಎಂದು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಬುಧವಾರ ತೊಟ್ಟಿಲು ಉದ್ಘಾಟನೆಯ ನಂತರ ಹೇಳಿದರು. ತೊಟ್ಟಿಲನ್ನು ನಿರ್ವಹಿಸಲು ಸಿದ್ಧರಿರುವುದಕ್ಕೆ ಎನ್ಜಿಒಗೆ ಧನ್ಯವಾದ ಅರ್ಪಿಸಿದರು.
“ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ವಿಶೇಷ ದತ್ತು ಸಂಸ್ಥೆಯಾಗಿದೆ. ಇದು ನಗರದಲ್ಲಿ ನಿರ್ಗತಿಕರಿಗಾಗಿ ಆಶ್ರಮವನ್ನು ನಡೆಸುತ್ತದೆ. ಶಿಶುಗಳನ್ನು ದತ್ತು ತೆಗೆದುಕೊಳ್ಳುವವರಿಗೂ ಅದು ಸಹಾಯ ಮಾಡುತ್ತದೆ. ಟ್ರಸ್ಟ್ ಒಂದು ದತ್ತಿ ಸಂಸ್ಥೆ ಮತ್ತು ಎಲ್ಲಾ ಸೇವೆಗಳು ಇಲ್ಲಿ ಉಚಿತ ” ಎಂದು ಇನಾಮ್ದಾರ್ ಅವರು ತಿಳಿಸಿದ್ದಾರೆ.
“ಶಿಶುಗಳನ್ನು ಬೆಚ್ಚಗಿಡಲು ತೊಟ್ಟಿಲು ಹೀಟರ್ ಹೊಂದಿದೆ ಎಂದು ಅವರು ಹೇಳಿದರು. ಶಿಶುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು ಮಹಿಳೆಯರ ವೈಟಿಂಗ್ ರೂಮಿನಲ್ಲಿ ಉತ್ತಮ ಸ್ಥಳದಲ್ಲಿ ಇರಿಸಲಾಗಿದೆ. ಮಗುವನ್ನು ತೊಟ್ಟಿಲಲ್ಲಿ ಬಿಟ್ಟ ನಂತರ ಅದನ್ನು ರೈಲ್ವೆ ಪೊಲೀಸರು ಮತ್ತು ಸ್ಟೇಷನ್ ಮಾಸ್ಟರ್ ಗಮನಕ್ಕೆ ತರಲಾಗುವುದು. ಶಿಶು ತೊಟ್ಟಿಲಿಗೆ ಬಂದ ಕೂಡಲೇ ಸಿಬ್ಬಂದಿಗಳು ಅಲ್ಲಿಗೆ ಬರುವಂತೆ ಮಾಡುವ ಸಲುವಾಗಿ ತೊಟ್ಟಿಲಿನ ಬಳಿ ಗಂಟೆಯನ್ನು ಇಡಲಾಗುತ್ತದೆ. ಮಗು ಪತ್ತೆಯಾದ ನಂತರ, ಪೊಲೀಸರು ಮೊದಲು ಮಾಹಿತಿ ವರದಿಯನ್ನು ನೋಂದಾಯಿಸುತ್ತಾರೆ. ನಂತರ ಮಗುವನ್ನು ಸಂಪೂರ್ಣ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಮತ್ತು ನಂತರ ಇತರ ಪ್ರಕ್ರಿಯೆ ಆರಂಭಿಸಲಾಗುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.