ನವದೆಹಲಿ: ಇಂದು ಜಾರ್ಖಂಡ್ ರಾಜ್ಯದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆ ಜರುಗುತ್ತಿದೆ. ಒಟ್ಟು 20 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.
ಇಂದು ಚುನಾವಣೆ ಕಣದಲ್ಲಿ 260 ಅಭ್ಯರ್ಥಿಗಳಿದ್ದು, ಇದರಲ್ಲಿ 29 ಮಹಿಳೆಯರಾಗಿದ್ದಾರೆ. 48,25,038 ಮತದಾರರು ಈ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಇದರಲ್ಲಿ 23,93,437 ಮಂದಿ ಮಹಿಳಾ ಮತದಾರರು. 90 ಮಂದಿ ತೃತೀಯ ಲಿಂಗಿಗಳು ಆಗಿದ್ದಾರೆ. ಒಟ್ಟು 6066 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಇದರಲ್ಲಿ 1016 ನಗರ ಪ್ರದೇಶಗಳಲ್ಲಿನ ಮತಗಟ್ಟೆಗಳು ಆದರೆ, ಉಳಿದವು ಗ್ರಾಮೀಣ ಭಾಗದಲ್ಲಿ ಇವೆ.
ಚುನಾವಣೆಯನ್ನು ಅತ್ಯಂತ ಶಾಂತಿಯುತವಾಗಿ ಮತ್ತು ಕಾನೂನು ಬದ್ಧವಾಗಿ ನಡೆಸಲು ಚುನಾವಣಾ ಆಯೋಗವು ಎಲ್ಲಾ ರೀತಿಯ ಕ್ರಮಗಳನ್ನು. ಜಿಲ್ಲಾ ಪೊಲೀಸರು ಮಾನಿಟರಿಂಗ್ ಸೆಲ್ಗಳನ್ನು ಸ್ಥಾಪನೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹಬ್ಬುವುದನ್ನು ತಡೆಗಟ್ಟುತ್ತಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಜಾರ್ಖಂಡ್ ನಾದ್ಯಂತ 40000 ಭದ್ರತಾ ಪಡೆಗಳನ್ನು ಗೊಳಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಬಹರ್ಗೋರಾ, ಘಟ್ಸಿಲಾ, ಪೊಟ್ಕ, ಜುಗ್ಸಲಾಯಿ, ಜಮ್ಶೇಡ್ಪುರ (ಪೂರ್ವ), ಜಮ್ಶೇಡ್ಪುರ (ಪಶ್ಚಿಮ), ಸೆರೈಕೆಲಾ, ಚೈಬಸಾ, ಮಜಗಾಂವ್, ಜಗನಾಥಪುರ, ಮನೋಹರ್ ಪುರ್, ಚಕ್ರಧಾರಾಪುರ್, ಕರ್ಸವಾನ್, ತಮರ್, ತೋರ್ಪಾ, ಕುಂತಿ, ಮಂದರ್, ಸಿಸೈ, ಸಿಮ್ಡೇಗಾ, ಕೊಲೆಬಿರಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.