ಮುಂಬಯಿ: ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ದೊಡ್ಡಮಟ್ಟದ ಹಿನ್ನಡೆಯಾಗಿದೆ. ಅದರ 400 ಮಂದಿ ತಳಮಟ್ಟದ ಕಾರ್ಯಕರ್ತರು ಶಿವಸೇನೆಯನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಶಿವಸೇನೆ ನಿರ್ಧರಿಸಿದ್ದು ಈ ಕಾರ್ಯಕರ್ತರಿಗೆ ತೀವ್ರತರದಲ್ಲಿ ಅಸಮಾಧಾನವನ್ನು ಉಂಟುಮಾಡಿತು ಎನ್ನಲಾಗಿದೆ.
ಮುಂಬೈ ಧಾರಾವಿಯಲ್ಲಿ ನಡೆದ ಸಮಾರಂಭದಲ್ಲಿ ಈ 400 ಮಂದಿ ಶಿವಸೇನೆ ಕಾರ್ಯಕರ್ತರು ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ.
ನಾವು ಶಿವಸೇನೆ ಪ್ರತಿಪಾದಿಸುತ್ತಿದ್ದ ಹಿಂದುತ್ವ ಸಿದ್ಧಾಂತದ ಕಟ್ಟಾ ಅನುಯಾಯಿಗಳು. ಆದರೆ ಅವರ ನಿರ್ಧಾರ ನಮ್ಮನ್ನು ನೋವಿಗೀಡು ಮಾಡಿದೆ. ಹೀಗಾಗಿ ನಾವು ಪಕ್ಷವನ್ನು ತೊರೆಯುತ್ತಿದ್ದೇವೆ ಎಂದು ಶಿವಸೇನೆ ತೊರೆದು ಬಿಜೆಪಿ ಸೇರಿದ ರಮೇಶ್ ನಾಯರ್ ಹೇಳಿದ್ದಾರೆ.
“ನಾನು ಕಳೆದ ಹತ್ತು ವರ್ಷಗಳಿಂದ ಶಿವಸೇನೆಗಾಗಿ ದುಡಿದಿದ್ದೇನೆ. ಶಿವಸೇನೆಯ ಹಿಂದುತ್ವ ಸಿದ್ಧಾಂತಕ್ಕೆ ನಾವು ಬೆಂಬಲ ನೀಡುತ್ತಿದ್ದೆವು. ಜನರಿಗೆ ಸೇವೆ ಮಾಡುವ ಕಾರ್ಯವನ್ನು ನನಗೆ ವಹಿಸಲಾಗಿತ್ತು, ಆದರೀಗ ಶಿವಸೇನೆಯು ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರವನ್ನು ರಚನೆ ಮಾಡಿದೆ. ಇದನ್ನು ಒಪ್ಪಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವೆಲ್ಲರೂ ಬಿಜೆಪಿಯನ್ನು ಸೇರಲು ನಿರ್ಧಾರ ಮಾಡಿದೆವು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.