ನವದೆಹಲಿ: ಶಕ್ತಿ ದೇವತೆಗೆ ಸಮರ್ಪಿತಗೊಂಡಿರುವ ವೈಷ್ಣೋದೇವಿ ದೇಗುಲಕ್ಕೆ ತೆರಳಲು ಬಯಸುವ ಭಕ್ತಾದಿಗಳಿಗಾಗಿ ಭಾರತೀಯ ರೈಲ್ವೇಯ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಅಂಗ ಸಂಸ್ಥೆ IRCTCಯು ಮಾತಾರಾಣಿ ರಾಜಧಾನಿ ಪ್ಯಾಕೇಜ್ ಅನ್ನು ದೆಹಲಿಯಿಂದ ಪ್ರಾರಂಭಿಸುತ್ತಿದೆ. ಜಮ್ಮು ಕಾಶ್ಮೀರದಲ್ಲಿ 5200 ಅಡಿ ಎತ್ತರದಲ್ಲಿ ವೈಷ್ಣೋದೇವಿ ದೇಗುಲ ಇದೆ. ಕಾತ್ರಾದಿಂದ 12 ಕಿಮೀ ದೂರದಲ್ಲಿ ದೇಗುಲವಿದೆ.
ವೈಷ್ಣೋದೇವಿಗೆ ತೆರಳುವ ಭಕ್ತರು ದೆಹಲಿಯಿಂದ ಮಾತಾ ರಾಣಿ ರಾಜಧಾನಿ ರೈಲಿನ ಮೂಲಕ ಅತ್ಯಂತ ಸರಳವಾಗಿ ವೈಷ್ಣೋದೇವಿ ತಲುಪಬಹುದಾಗಿದೆ.
Irctctourism.com ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಯಾತ್ರಿಕರು 3 ಎಸಿ ವಿಭಾಗದಲ್ಲಿ 20:40 HRSನಲ್ಲಿ ನವದೆಹಲಿ ರೈಲ್ವೆ ನಿಲ್ದಾಣದಿಂದ (ಎನ್ಡಿಎಲ್ಎಸ್) ರೈಲಿನ ಮೂಲಕ ವೈಷ್ಣೋದೇವಿಗೆ ಪ್ರಯಾಣಿಸಬಹುದಾಗಿದೆ. ನಿತ್ಯ ಪ್ರಯಾಣ ನಡೆಸಲಿದೆ ಮತ್ತು ಆಹಾರವು ಎಪಿಎಐ + ಒಂದು ಉಪಹಾರವನ್ನು ಒಳಗೊಂಡಿದೆ, ಪ್ರಯಾಣಿಕನು ಹೋಟೆಲ್ ಕಂಟ್ರಿ ರೆಸಾರ್ಟ್ನಲ್ಲಿ ಉಳಿಯಲು ಅವಕಾಶವಿದೆ.
ಒಬ್ಬ ವ್ಯಕ್ತಿಯ ಪ್ರಯಾಣಕ್ಕೆ ರೂ. 7785 ದರವನ್ನು ಐಆರ್ಸಿಟಿಸಿ ನಗದಿಪಡಿಸಿದೆ. ಮಗುವಿಗೆ (5-11 ವರ್ಷಗಳು) ರೂ.5090 ನಿಗದಿಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.