ನವದೆಹಲಿ: ಅಫ್ಘಾನಿಸ್ಥಾನ ಮತ್ತು ಒಮನ್ ವಿರುದ್ಧದ 2022 ರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಭಾರತದ 26 ಸದಸ್ಯರನ್ನು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ಆಯ್ಕೆ ಮಾಡಿದೆ. ಸದಸ್ಯರ ಹೆಸರನ್ನು ರಾಷ್ಟ್ರೀಯ ಫುಟ್ಬಾಲ್ ತಂಡದ ಕೋಚ್ ಇಗೊರ್ ಸ್ಟಿಮಾಕ್ ಇಂದು ಪ್ರಕಟಿಸಿದ್ದಾರೆ.
ಫಿಫಾ ಅಂಡರ್ -17 ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನವನ್ನು ನೀಡಿ ಎಲ್ಲರ ಗಮನವನ್ನು ಸೆಳೆದಿದ್ದ ಧೀರಜ್ ಸಿಂಗ್ ಮೊಯಿರಾಂಗ್ಥೆಮ್ ಭಾರತೀಯ ಫುಟ್ಬಾಲ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಗುರ್ಪ್ರೀತ್ ಸಿಂಗ್ ಸಂಧು ಮತ್ತು ಅಮೃಂದರ್ ಸಿಂಗ್ ಅವರು ಇತರ ಇಬ್ಬರು ಕೀಪರ್ಗಳು ಐಎಸ್ಎಲ್ ನಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿದ ಹಿನ್ನಲೆಯಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಪ್ರಣಯ್ ಹಾಲ್ಡರ್, ಸೀಮಿನ್ಲೆನ್ ಡೌಂಗೆಲ್, ಜಾಕಿಚಂದ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಭಾರತವು ಕ್ರಮವಾಗಿ ನವೆಂಬರ್ 14 ಮತ್ತು 19 ರಂದು ಅಫ್ಘಾನಿಸ್ಥಾನ ಮತ್ತು ಒಮನ್ ವಿರುದ್ಧ ಬ್ಯಾಕ್-ಟು-ಬ್ಯಾಕ್ ಪಂದ್ಯಗಳನ್ನು ಆಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.