ಈಗಾಗಲೇ ಜಗತ್ತಿನ ಮುಂದೆ ಹಲವಾರು ಬಾರಿ ಅವಮಾನವನ್ನು ಎದುರಿಸಿರುವ ಪಾಕಿಸ್ಥಾನ, ಇದೀಗ ಮತ್ತೊಂದು ಅವಮಾನಕ್ಕೆ ಒಳಗಾಗಿದೆ. ಭಯೋತ್ಪಾದಕರ ರಾಜಧಾನಿಯಾಗಿ ಹೊರಹೊಮ್ಮುತ್ತಿರುವ ಈ ದೇಶವನ್ನು ಜಗತ್ತು ಈಗ ಸಂಶಯದ ದೃಷ್ಟಿಯಿಂದಲೇ ನೋಡುತ್ತಿದೆ. ಹೀಗಾಗಿ ಜಗತ್ತಿನಾದ್ಯಂತ ಇರುವ ಪಾಕಿಸ್ಥಾನಿಗಳನ್ನೂ ಕೂಡ ಕೆಟ್ಟ ದೃಷ್ಟಿಯಲ್ಲೇ ನೋಡಲಾಗುತ್ತಿದೆ. ಟೈಮ್ಸ್ ಆಫ್ ಇಸ್ಲಾಮಾಬಾದ್ನಲ್ಲಿ ಪ್ರಕಟವಾದ ವರದಿಯಲ್ಲಿ, ಕಳೆದ ಐದು ವರ್ಷಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಅಕ್ರಮ ಪಾಕಿಸ್ಥಾನಿ ವಲಸಿಗರನ್ನು ಜಗತ್ತಿನ 134 ದೇಶಗಳಿಂದ ಗಡಿಪಾರು ಮಾಡಲಾಗಿದೆ.
ಪಾಕಿಸ್ಥಾನದ ಆಂತರಿಕ ಸಚಿವಾಲಯ ಒದಗಿಸಿದ ಅಂಕಿಅಂಶಗಳ ಪ್ರಕಾರ, 2014 ರಿಂದ ಒಟ್ಟು 5,19,000 ಪಾಕಿಸ್ಥಾನಿ ಪ್ರಜೆಗಳನ್ನು ವಿವಿಧ ದೇಶಗಳಿಂದ ಗಡಿಪಾರು ಮಾಡಲಾಗಿದೆ. ಕುತೂಹಲಕಾರಿ ಅಂಶವೆಂದರೆ, ಅಕ್ರಮ ಪಾಕಿಸ್ಥಾನಿ ವಲಸಿಗರನ್ನು ಇಸ್ಲಾಮಿಕ್ ದೇಶಗಳಿಂದಲೂ ಗಡಿಪಾರು ಮಾಡಲಾಗಿದೆ. ಅಕ್ರಮ ಪಾಕಿಸ್ಥಾನಿ ವಲಸಿಗರನ್ನು ಗಡಿಪಾರು ಮಾಡಿರುವ ದೇಶಗಳ ಪಟ್ಟಿಯಲ್ಲಿ ಸೌದಿ ಅರೇಬಿಯಾ, ಯುಎಇ, ಒಮನ್ ಮತ್ತು ಟರ್ಕಿಗಳು ಕೂಡ ಇವೆ.
ಪಾಕಿಸ್ಥಾನಿಗಳನ್ನು ಗಡಿಪಾರು ಮಾಡಿದ ದೇಶಗಳ ಪಟ್ಟಿಯಲ್ಲಿ ಸೌದಿ ಅರೇಬಿಯಾ ಅಗ್ರಸ್ಥಾನದಲ್ಲಿದ್ದು, 2014 ರಿಂದ ಅದು 3,25,000 ಕ್ಕೂ ಹೆಚ್ಚು ಅಕ್ರಮ ಪಾಕಿಸ್ಥಾನಿ ವಲಸಿಗರನ್ನು ಹೊರಹಾಕಿದೆ. ಧನ ಸಹಾಯಕ್ಕಾಗಿ ಸೌದಿ ಅರೇಬಿಯಾದ ಹಿಂದೆ ಬಿದ್ದು ಅಂಗಲಾಚುತ್ತಿರುವ ಪಾಕಿಸ್ಥಾನಕ್ಕೆ ಇದು ದೊಡ್ಡ ಹಿನ್ನಡೆಯೇ ಆಗಿದೆ. 74 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೌದಿ ಅರೇಬಿಯಾದ ರಾಜಕುಮಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸಂಪೂರ್ಣವಾಗಿ ಕಡೆಗಣನೆ ಮಾಡಿದ್ದರು, ಮಲೇಷ್ಯಾ ಪ್ರಧಾನಿ ಮಹಾತಿರ್ ಮೊಹಮದ್ ಮತ್ತು ಟರ್ಕಿಶ್ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರೊಂದಿಗೆ ಹೊಸ ಇಸ್ಲಾಮಿಕ್ ಬಣವನ್ನು ರಚಿಸಲು ಇಲ್ಲಿ ಇಮ್ರಾನ್ ಪ್ರಯತ್ನಿಸುತ್ತಿದ್ದಾರೆಂದು ವರದಿಯಾಗಿದೆ. ಇದು ಸೌದಿ ರಾಜಕುಮಾರ ಅಸಮಾಧಾನಕ್ಕೆ ಕಾರಣವಾಗಿದೆ. ನ್ಯೂಯಾರ್ಕ್ ಪ್ರವಾಸಕ್ಕಾಗಿ ಖಾನ್ ಅವರಿಗೆ ತಾನು ಉಡುಗೊರೆಯಾಗಿ ನೀಡಿದ್ದ ವಿಮಾನದಿಂದ ಖಾನ್ ಮತ್ತು ಅವರ ನಿಯೋಗವನ್ನು ಕೆಳಗಿಳಿಯುವಂತೆ ಸೌದಿ ರಾಜಕುಮಾರ ಆಗ್ರಹಿಸಿದ್ದರು ಎನ್ನಲಾಗಿದೆ.
ಎರಡನೇಯ ಅತೀ ದೊಡ್ಡ ಇಸ್ಲಾಮಿಕ್ ದೇಶವಾದ ಯುಎಇ ಕೂಡ ಅಕ್ರಮ ಪಾಕಿಸ್ಥಾನಿಯರನ್ನು ಗಡಿಪಾರುವ ಮಾಡುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ, 2014 ರಿಂದ ಅದು ಅವಧಿಯಲ್ಲಿ 52,000 ಕ್ಕೂ ಹೆಚ್ಚು ಪಾಕಿಸ್ಥಾನಿಗಳನ್ನು ಗಡಿಪಾರು ಮಾಡಿದೆ ಎಂದು ವರಿದಗಳು ಹೇಳುತ್ತಿವೆ.
ಇಮ್ರಾನ್ ಖಾನ್ ತನ್ನ ಇಸ್ಲಾಮಿಕ್ ಸಹವರ್ತಿಗಳನ್ನು ನಯವಾಗಿಸಲು ಪ್ರಯತ್ನಿಸುತ್ತಿದ್ದರೂ, ಅಂಕಿಅಂಶಗಳು ವಿಭಿನ್ನ ಕಥೆಯನ್ನೇ ಹೇಳುತ್ತಿವೆ. ಪಾಕಿಸ್ಥಾನವು ತನ್ನ ಮುಸ್ಲಿಂ ಗುರುತು ಮತ್ತು ಮುಸ್ಲಿಂ ಉಮ್ಮಾ ಮೂಲಕ ಸಂಬಂಧಗಳನ್ನು ನಿರಂತರವಾಗಿ ಜಗತ್ತಿನ ಮುಂದೆ ಸಾರುತ್ತಾ ಬರುತ್ತಿದೆ, ಅದು ಕಾಶ್ಮೀರ ವಿಷಯದಲ್ಲೇ ಇರಲಿ ಅಥವಾ ಭಾರತ ವಿರೋಧಿ ವಾಕ್ಚಾತುರ್ಯದಲ್ಲೇ ಇರಲಿ ತನ್ನ ಮುಸ್ಲಿಂ ಅಸ್ಮಿತೆಯನ್ನು ತೋರಿಸಲು ಅದು ಸದಾ ಹವಣಿಸುತ್ತಿರುತ್ತದೆ. ಆದರೂ, ಪಾಕಿಸ್ಥಾನಿಗಳು ಹೆಚ್ಚು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿರುವುದನ್ನು ಗಮನಿಸಿರುವ ದೇಶಗಳು ಅವರನ್ನು ಹೊರ ಹಾಕುವ ಕಾರ್ಯವನ್ನು ಮಾಡುತ್ತಿದೆ. ಅದರಲ್ಲೂ ಮುಸ್ಲಿಂ ರಾಷ್ಟ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಗಡಿಪಾರು ಮಾಡುವ ಕಾರ್ಯವನ್ನು ಮಾಡುತ್ತಿವೆ. ಅಕ್ರಮ ಪಾಕಿಸ್ಥಾನಿ ವಲಸಿಗರನ್ನು ಅನೇಕ ಆರೋಪಗಳ ಮೇಲೆ ಗಡೀಪಾರು ಮಾಡಲಾಗಿದೆ, ಇದರಲ್ಲಿ ದಾಖಲೆಗಳ ನಕಲಿ ಮಾಡುವಿಕೆ ಮತ್ತು ಹಲವಾರು ಕ್ರಿಮಿನಲ್ ಅಪರಾಧಗಳು ಸೇರಿವೆ.
ಪಾಕಿಸ್ಥಾನಿಗಳು ತಮ್ಮ ನಡುವೆಯೇ ಒಂದು ಪ್ರಮುಖ ಅಸ್ತಿತ್ವವಾದದ ಬಿಕ್ಕಟ್ಟನ್ನು ಹೊಂದಿದ್ದಾರೆ, ಅವರು ಅರಬ್ ಭೂಮಿಯಿಂದ ಬಂದವರು ಮತ್ತು ಅರಬ್ಬರ ವಂಶಸ್ಥರು ಎಂಬ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ ಮತ್ತು ಇದರ ಪರಿಣಾಮವಾಗಿ, ಅರಬ್ಬರ ಸಂಸ್ಕೃತಿಯನ್ನು ಅನುಕರಿಸುವ ಮೂಲಕ ಮತ್ತು ಅವರ ಹೆಸರುಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರನ್ನು ಅನುಕರಣೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ, ಅರಬ್ಬರು ಪಾಕಿಸ್ಥಾನಿಗಳ ನೈಜ ಗುರುತುಗಳನ್ನು ಚೆನ್ನಾಗಿಯೇ ಅರಿತುಕೊಂಡಿದ್ದಾರೆ ಮತ್ತು ಅವರ ಅನುಕರಣೆಯ ವರ್ತನೆಗಳನ್ನು ಪ್ರಹಸನವೆಂದು ಪರಿಗಣಿಸುತ್ತಾರೆ, ಇದನ್ನು ಅಂಕಿಅಂಶಗಳು ಸ್ಪಷ್ಟವಾಗಿ ತಿಳಿಸಿವೆ. ಪಾಕಿಸ್ಥಾನ ಭಾರತ ವಿರೋಧಿ ನಿಲುವಿನ ಪರ ವಕಾಲತ್ತು ವಹಿಸಿದ ಮಲೇಷಿಯಾದ ಪ್ರಧಾನಿ ಕಳೆದ 5 ವರ್ಷಗಳಲ್ಲಿ 18,312 ಕ್ಕೂ ಹೆಚ್ಚು ಪಾಕಿಸ್ಥಾನಿಗಳನ್ನು ಹೊರಹಾಕಿದ್ದಾರೆ. ಇಷ್ಟು ಮಾತ್ರವಲ್ಲದೇ, ಕನಿಷ್ಠ 65,000 ಅಕ್ರಮ ಪಾಕಿಸ್ಥಾನಿ ವಲಸಿಗರನ್ನು ಟರ್ಕಿ ಮತ್ತು ಸೌದಿ ಅರೇಬಿಯಾದ ಗಡಿಪಾರು ಶಿಬಿರಗಳಲ್ಲಿ ಬಂಧಿಸಲಾಗಿದೆ ಎಂದು ಆಂತರಿಕ ಸಚಿವಾಲಯದ ವರದಿಯು ಬಹಿರಂಗಪಡಿಸಿದೆ.
2014 ಮತ್ತು 2019ರ ನಡುವೆ ಬ್ರಿಟನ್ನಿಂದ 15,320, ಗ್ರೀಸ್ನಿಂದ 17,534, ಅಮೆರಿಕದಿಂದ 936, ಚೀನಾದಿಂದ 275, ಕೆನಡಾದಿಂದ 445, ಇರಾನ್ನಿಂದ 15,413, ಮತ್ತು ಜರ್ಮನಿಯಿಂದ 920 ಪಾಕಿಸ್ಥಾನಿಯರನ್ನು ಗಡಿಪಾರು ಮಾಡಲಾಗಿದೆ.
ಈ ಹಿಂದೆ, ಸೌದಿ ಸರ್ಕಾರವು ಪಾಕಿಸ್ಥಾನದ ವೈದ್ಯಕೀಯ ಪದವಿಗಳನ್ನು ಅಮಾನ್ಯ ಮಾಡಿತ್ತು. ಪಾಕಿಸ್ಥಾನಿ ವೈದ್ಯರುಗಳ ಅರ್ಹತೆ ಮತ್ತು ಪರಿಣತಿಯು ಸೌದಿ ಕಮಿಷನ್ ಫಾರ್ ಹೆಲ್ತ್ ಸ್ಪೆಷಾಲಿಟೀಸ್ (ಎಸ್ಸಿಎಫ್ಹೆಚ್ಎಸ್) ನಿಯಮಗಳನ್ನು ಪೂರೈಸುವುದಿಲ್ಲ ಎಂದು ಪಾಕಿಸ್ಥಾನಿ ವೃತ್ತಿಪರರಿಗೆ ಅದು ಸ್ಪಷ್ಟವಾಗಿ ತಿಳಿಸಿತ್ತು. ಸೌದಿ ಅರೇಬಿಯಾವು ಪಾಕಿಸ್ಥಾನಿ ವೃತ್ತಿಪರರಿಗೆ ಈಗಾಗಲೇ ದೇಶವನ್ನು ತೊರೆಯುವಂತೆ ತಿಳಿಸಿದೆ ಮತ್ತು ಅವರು ಆದೇಶವನ್ನು ಪಾಲಿಸದಿದ್ದರೆ ಅವರನ್ನು ಗಡಿಪಾರು ಮಾಡಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದೆ.
ಈ ಹಿಂದೆ, ಅಮೆರಿಕಾ ಸರ್ಕಾರವು ಪಾಕಿಸ್ಥಾನದ ನಾಗರಿಕರಿಗೆ ವೀಸಾ ಮಾನ್ಯತೆಯನ್ನು ಐದು ವರ್ಷದಿಂದ 1 ವರ್ಷಕ್ಕೆ ಇಳಿಸಿತ್ತು. ಇದು ಪಾಕಿಸ್ಥಾನಕ್ಕೆ ದೊಡ್ಡ ಹೊಡೆತವಾಗಿದೆ. ಯಾಕೆಂದರೆ ಆ ದೇಶವು ಅಮೆರಿಕಾದಲ್ಲಿರುವ ಪಾಕಿಸ್ಥಾನಿ ಕಾರ್ಮಿಕರಿಂದ ಉತ್ತಮ ಪ್ರಮಾಣದ ಆದಾಯ(ಹಣಕಾಸು ವರ್ಷ 2019 ರ ಮೊದಲ 10 ತಿಂಗಳಲ್ಲಿ 372.43 ಮಿಲಿಯನ್ ಡಾಲರ್) ಪಡೆಯುತ್ತದೆ. ಪಾಕಿಸ್ಥಾನದಲ್ಲಿ ಮತ್ತು ಭಾರತ, ಅಫ್ಘಾನಿಸ್ಥಾನ, ಇರಾನ್ ಮತ್ತು ಅಮೆರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳು ಪಾಕಿಸ್ಥಾನದಲ್ಲಿ ನೆಲೆಗೊಂಡಿರುವ ಉಗ್ರರಿಂದಲೇ ನಡೆಯುತ್ತಿದೆ. ಇದು ಪಾಕಿಸ್ಥಾನಿಯರ ಬಗೆಗೆ ಜಗತ್ತಿಗೆ ಒಂದು ರೀತಿಯ ಸಂಶಯವನ್ನು ಹುಟ್ಟು ಹಾಕಿದೆ. ಪಾಕಿಸ್ಥಾನಿಗಳು ಪ್ರತಿಯೊಬ್ಬರಿಗೂ ಅಪಾಯಕಾರಿ ಎಂದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಇಸ್ಲಾಮಿಕ್ ರಾಷ್ಟ್ರಗಳು ಅಥವಾ ಇಸ್ಲಾಮೇತರ ದೇಶಗಳು ಆಗಿರಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಪಾಕಿಸ್ಥಾನ ಮತ್ತು ಪಾಕ್ ಜನರ ಬಗ್ಗೆ ಸಂಶಯದ ಧೋರಣೆಯನ್ನು ಇಟ್ಟುಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.