ನವದೆಹಲಿ: ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿನ ತನ್ನ ಬದ್ಧತೆಯನ್ನು ಪುನರುಚ್ಚರಿಸಿರುವ ಭಾರತವು, ಸೌಹಾರ್ದ ಸಂಕೇತವಾಗಿ ಸೌರ ಫಲಕಗಳನ್ನು ವಿಶ್ವಸಂಸ್ಥೆಗೆ ಉಡುಗೊರೆಯಾಗಿ ನೀಡಿದೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿರುವ ಕಾನ್ಫರೆನ್ಸ್ ಕಟ್ಟಡದ ಮೇಲ್ಛಾವಣಿಯಲ್ಲಿ ಈ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಈ ಸೌರ ಫಲಕಗಳು ಗರಿಷ್ಠ 50 KW ಉತ್ಪಾದನಾ ಶಕ್ತಿಯನ್ನು ತಲುಪುವ ಸಾಮರ್ಥ್ಯವನ್ನು ಹೊಂದಿವೆ.
ಭಾರತದ ಉಡುಗೊರೆಯ ಭಾಗವಾಗಿ ಕಟ್ಟಡದ ಮೇಲೆ ಹಸಿರು ಮೇಲ್ಛಾವಣಿಯನ್ನು ಸಹ ಸ್ಥಾಪಿಸಲಾಗಿದೆ. ಯುಎನ್ ಪ್ರಧಾನ ಕಚೇರಿಯಲ್ಲಿನ ಕಾನ್ಫರೆನ್ಸ್ ಕಟ್ಟಡವು ಈಸ್ಟ್ ರಿವರ್ಗೆ ಅಭಿಮುಖವಾಗಿದೆ. ಇದು ಐಕಾನಿಕ್ ಸೆಕ್ರೆಟರಿಯೇಟ್ ಬಿಲ್ಡಿಂಗ್ ಮತ್ತು ಯುಎನ್ನ ಸಾಮಾನ್ಯ ಸಭೆಯ ಕಟ್ಟಡದ ನಡುವೆ ಇದೆ.
ನ್ಯೂಯಾರ್ಕ್ ನಗರದಲ್ಲಿ ಯುಎನ್ ಕಟ್ಟಡದ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಭಾರತ $ 1 ಮಿಲಿಯನ್ ಕೊಡುಗೆ ನೀಡಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ಯುಎನ್ನಲ್ಲಿನ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು ಟ್ವಿಟ್ ಮಾಡಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಹವಾಮಾನ ಕ್ರಮಕ್ಕೆ ನೀಡಿದ ಕರೆಗೆ ಸ್ಪಂದನೆ ನೀಡಿದ ಮೊದಲ ದೇಶ ಭಾರತ ಎಂದು ಪ್ರತಿಕ್ರಿಯೆ ನೀಡಿದ್ದರು.
ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಶಕ್ತಿಯನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸೌರ ಯೋಜನೆಗೆ ಭಾರತ ಹಣ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಉಡುಗೊರೆಯನ್ನು ಹಸ್ತಾಂತರಿಸಿದ ಅಕ್ಬರುದ್ದೀನ್, “ಯುಎನ್ ಪ್ರಧಾನ ಕಚೇರಿಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸುವುದರಿಂದ ಅಂತಾರಾಷ್ಟ್ರೀಯ ಹಂತದಲ್ಲಿ ಸೌರಶಕ್ತಿ ಸಹಕಾರ ಹೆಚ್ಚಿಸುತ್ತದೆ ಎಂಬುದು ನನ್ನ ಆಶಯವಾಗಿದೆ” ಎಂದು ಹೇಳಿದ್ದಾರೆ.
ಹವಾಮಾನ ಬದಲಾವಣೆಯ ಕುರಿತಾದ ಪ್ಯಾರಿಸ್ ಒಪ್ಪಂದವನ್ನು ಮಂಡಿಸುವಲ್ಲಿ ಭಾರತ ಮುಂಚೂಣಿಯಲ್ಲಿದೆ ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದೆ. 2016 ರಲ್ಲಿ ಮೋದಿ ಸರ್ಕಾರದ ಪ್ರಯತ್ನದ ಮೇರೆಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟವನ್ನು ರಚಿಸಲಾಯಿತು. ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐಎಸ್ಎ) 122 ಕ್ಕೂ ಹೆಚ್ಚು ದೇಶಗಳ ಒಕ್ಕೂಟವಾಗಿದೆ, ಅವುಗಳಲ್ಲಿ ಹೆಚ್ಚಿನವು ಸನ್ ಶೈನ್ ದೇಶಗಳಾಗಿವೆ.
I thank Ambassador @AkbaruddinIndia @IndiaUNNewYork for India’s generous contribution for the installation of solar panels on the roof of the @UN conference building. A strong message promoting #Innovation for action on #climatechange #efficiency pic.twitter.com/SsmTYMgzbU
— Jan Beagle (@JanMBeagle) September 19, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.