ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದರೆ ಗುಜರಾತಿನಿಂದ ದೆಹಲಿಗೆ ಸೈಕಲ್ ಯಾತ್ರೆ ನಡೆಸುವುದಾಗಿ ಪಣತೊಟ್ಟಿದ್ದ ವ್ಯಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭೇಟಿಯಾದರು.
ಖಿಮ್ಚಂದ್ ಚಂದ್ರಾಣಿ ಅವರು ತನ್ನ ನಿರ್ಧಾರದಂತೆ ತಮ್ಮ ಹುಟ್ಟೂರಾದ ಗುಜರಾತಿನ ರಾಜಕೋಟ್ನಿಂದ 100 ಕಿಮೀ ದೂರದಲ್ಲಿರುವ ಅಮ್ರೇಲಿ ಜಿಲ್ಲೆಯಿಂದ ದೆಹಲಿಗೆ ಸೈಕಲ್ ಪರ್ಯಟನೆ ನಡೆಸಿದ್ದಾರೆ. 17 ದಿನಗಳ ಕಾಲ 1,100 ಕಿಮೀ ಕ್ರಮಿಸಿ ಅವರು ದೆಹಲಿಯನ್ನು ತಲುಪಿದ್ದಾರೆ.
ಚಂದ್ರಾಣಿ ಅವರನ್ನು ಭೇಟಿಯಾದ ಬಳಿಕ ಟ್ವಿಟ್ ಮಾಡಿರುವ ಮೋದಿ, “ಗುಜರಾತ್ನ ಅಮ್ರೆಲಿಯಿಂದ ಬಂದ ಅಸಾಧಾರಣ ಖಿಮ್ಚಂದ್ ಭಾಯ್ ಅವರನ್ನು ಭೇಟಿಯಾದೆ. ಬಿಜೆಪಿ 300+ ಸ್ಥಾನಗಳನ್ನು ಗೆದ್ದರೆ, ಅಮ್ರೆಲಿಯಿಂದ ದೆಹಲಿಗೆ ಸೈಕಲ್ ಪರ್ಯಟನೆ ನಡೆಸುವುದಾಗಿ ಅವರು ಪಣತೊಟ್ಟಿದ್ದರು. ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ ಮತ್ತು ಅವರ ಸೈಕಲ್ ಪ್ರಯಾಣವು ಹಲವಾರು ಅಭಿಮಾನಿಗಳನ್ನು ಗಳಿಸಿಕೊಂಡಿದೆ ಎಂದು ನಾನು ಕೇಳಲ್ಪಟ್ಟಿದ್ದೇನೆ. ಅವರ ವಿನಮ್ರತೆ ಮತ್ತು ಉತ್ಸಾಹದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ” ಎಂದಿದ್ದಾರೆ. ಇದರೊಂದಿಗೆ ಖಿಮ್ಚಂದ್ ಅವರೊಂದಿಗಿನ ನಾಲ್ಕು ಫೋಟೋಗಳನ್ನೂ ಮೋದಿ ಹಂಚಿಕೊಂಡಿದ್ದಾರೆ.
Met the exceptional Khimchandbhai from Amreli, Gujarat.
Khimchandbhai decided that if BJP wins 300+ seats, he would cycle from Amreli to Delhi. He kept his word and am told that his cycle journey has drawn several admirers.
I was deeply impressed by his humility and passion. pic.twitter.com/jtfDggCsHv
— Narendra Modi (@narendramodi) July 3, 2019
ಮೋದಿಯನ್ನು ಭೇಟಿಯಾದ ಬಳಿಕ ಮಾತನಾಡಿದ ಖಿಮ್ಚಂದ್ ಅವರು, “”ಲೋಕಸಭಾ ಚುನಾವಣೆಗೂ ಮುಂಚಿತವಾಗಿ ನಾನು ಬಿಜೆಪಿಯು 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ, ನನ್ನ ಸೈಕಲಿನಲ್ಲಿ ಅಮ್ರೆಲಿಯಿಂದ ದೆಹಲಿಗೆ ಪ್ರಯಾಣಿಸುತ್ತೇನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸುತ್ತೇನೆ ಎಂಬ ಪಣತೊಟ್ಟಿದ್ದೆ” ಎಂದಿದ್ದಾರೆ.
ತನ್ನ ಕಠಿಣ ಪ್ರಯಾಣದ ಬಗ್ಗೆ ವಿವರಿಸಿದ ಅವರು, “1170 ಕಿ.ಮೀ.ಗಳನ್ನು ಕ್ರಮಿಸಲು ನನಗೆ ಸುಮಾರು 17 ದಿನಗಳು ಬೇಕಾಯಿತು, ನಾನು ಪ್ರತಿದಿನ ಸುಮಾರು 70-80 ಕಿ.ಮೀ ಪ್ರಯಾಣಿಸಿದೆ. ದಾರಿಯುದ್ದಕ್ಕೂ ನಾನು ದೇವಾಲಯಗಳಲ್ಲಿ ಮತ್ತು ಆಶ್ರಮಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದೇನೆ. ನಾನು ಪ್ರಧಾನ ಮಂತ್ರಿಯೊಂದಿಗೆ ಐದು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದೇನೆ, ಅಮ್ರೆಲಿಯಿಂದ ಸೈಕಲ್ ಮೂಲಕ ಯಾತ್ರೆಯನ್ನು ನಡೆಸಿದ ನಾನು ತುಂಬಾ ಧೈರ್ಯಶಾಲಿ ಎಂದು ಅವರು ಹೇಳಿದರು” ಎಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.