ನವದೆಹಲಿ: ಭಾರತದ ಕೈಗಾರಿಕಾ ಮತ್ತು ಆರ್ಥಿಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಹೊತ್ತಿರುವ ಚಾರ್ಟರ್ಡ್ ಅಕೌಂಟೆನ್ಸಿಯು ಒಂದು ವೃತ್ತಿಯಾಗಿ ದೇಶದ ಮೊದಲ ರಕ್ಷಣಾ ಪದರವೆನಿಸಿಕೊಂಡಿದೆ. ಹಣ ದೋಚುವವರು ಮತ್ತು ಅವಕಾಶವಾದಿಗಳ ಬಗ್ಗೆ ಅಜಾಗರೂಕರಾಗಿರುವ ಸಾರ್ವಜನಿಕರಿಗೆ ರಕ್ಷಣೆಯನ್ನು ನೀಡುವವರ ಮೊದಲ ಸಾಲಿಗೆ ಇವರು ನಿಲ್ಲುತ್ತಾರೆ.
Institute of Chartered Accountants of India(ಐಸಿಎಐ) ಇಂದಿಗೆ 70 ವರ್ಷಗಳನ್ನು ಪೂರೈಸಿದೆ. 1949ರಲ್ಲಿ ಕೆಲವೇ ಕೆಲವು ಸದಸ್ಯರ ಮೂಲಕ ಆರಂಭಗೊಂಡ ಇದು, ಇಂದು 3 ಲಕ್ಷ ಸದಸ್ಯರನ್ನು ಒಳಗೊಂಡಿದೆ. ಅದರ 5 ಪ್ರಾದೇಶಿಕ ಮಂಡಳಿಗಳು ಮತ್ತು 164 ಶಾಖೆಗಳು ರಾಷ್ಟ್ರದಾದ್ಯಂತ ಇವೆ ಮತ್ತು 34 ಶಾಖೆಗಳು ವಿದೇಶಗಳಲ್ಲಿದೆ. ಇದರ ಸದಸ್ಯರು ರಾಷ್ಟ್ರೀಯ ಮತ್ತು ಜಾಗತಿಕ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.
ಐಸಿಎಐ ಸ್ಥಾಪನೆಯ ದಿನವನ್ನು (ಜುಲೈ 1) ಪ್ರತಿವರ್ಷ ದೇಶದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಡೇ ಆಗಿ ಆಚರಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಟ್ವಿಟ್ ಮಾಡಿರುವ ಮೋದಿಯವರು, “ಚಾರ್ಟರ್ಡ್ ಅಕೌಂಟೆಂಟ್ಗಳ ಕಠಿಣ ಪರಿಶ್ರಮವು ನಮ್ಮ ಸಮಾಜದಲ್ಲಿ ಪ್ರಾಮಾಣಿಕತೆ ಮತ್ತು ಉತ್ತಮ ಸಾಂಸ್ಥಿಕ ಆಡಳಿತದ ಸಂಸ್ಕೃತಿಯನ್ನು ಹೆಚ್ಚಿಸುತ್ತಿದೆ. ಆರ್ಥಿಕ ಸಮೃದ್ಧಿಯನ್ನು ಹೆಚ್ಚಿಸುವಲ್ಲಿ ಸಿಎಗಳು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇಂದು, ಸಿಎ ದಿನವಾಗಿದ್ದು, ಈ ಹಿನ್ನಲೆಯಲ್ಲಿ ಎಲ್ಲಾ ಸಿಎಗಳಿಗೆ ಅವರ ಮುಂದಿನ ಪ್ರಯತ್ನಗಳಿಗಾಗಿ ನಾನು ಶುಭಾಶಯ ತಿಳಿಸುತ್ತೇನೆ” ಎಂದಿದ್ದಾರೆ.
The hardworking fraternity of Chartered Accountants has been furthering the culture of honesty and better corporate governance in our society.
CAs also play a key role in advancing economic prosperity.
Today, on CA Day, my best wishes to all CAs for their future endeavours.
— Narendra Modi (@narendramodi) July 1, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.