ಕೇಂದ್ರ ಸಂಪುಟಕ್ಕೆ ಎಸ್ ಜೈಶಂಕರ್ ಅವರ ನಿಯೋಜನೆಗೆ ಎಲ್ಲ ಕಡೆಯಿಂದಲೂ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ವೃತ್ತಿಪರ ರಾಜತಾಂತ್ರಿಕನಾಗಿದ್ದ ಅವರು ಇದೀಗ ನರೇಂದ್ರ ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾರೆ. ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಾಗಿನಿಂದ ಅವರು ಸರಿಯಾದ ದಿಸೆಯಲ್ಲಿ ಹೋಗಲು ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಸಚಿವರಾದ ಬಳಿಕದ ತನ್ನ ಮೊದಲ ಸಾರ್ವಜನಿಕ ಸಭೆಯಲ್ಲಿ ಅವರು, ಪಾಕಿಸ್ಥಾನವನ್ನು ನಿಭಾಯಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಪಾಕಿಸ್ಥಾನದ ಹೆಸರನ್ನು ಉಲ್ಲೇಖ ಮಾಡದೆಯೇ, ಜೈಶಂಕರ್ ಅವರು SAARC ಕೆಲವೊಂದು ಸಮಸ್ಯೆಗಳನ್ನು ಹೊಂದಿದೆ ಎಂದಿದ್ದರು. ಈ ಮೂಲಕ SAARC ಬದಲು BIMSTEC ರಾಷ್ಟ್ರಗಳ ಸದಸ್ಯರನ್ನು ಪ್ರಮಾಣವಚನಕ್ಕೆ ಕರೆದಿರುವುದರ ಹಿಂದಿನ ಉದ್ದೇಶದ ಬಗ್ಗೆ ತಿಳಿಸಿದ್ದರು. “ತನ್ನ ಪ್ರಗತಿಯ ಜೊತೆಜೊತೆಗೆ ಭಾರತದ ಮೇಲೆ ನೆರೆಹೊರೆಯವರನ್ನು ಪ್ರಗತಿಯತ್ತ ಕೊಂಡೊಯ್ಯುವ ಜವಾಬ್ದಾರಿ ಇದೆ. ನಾವು ದಕ್ಷಿಣ ಏಷ್ಯಾದಲ್ಲಿ ಅತೀದೊಡ್ಡ ಆರ್ಥಿಕತೆ” ಎಂದು ಅವರು ಹೇಳಿದ್ದರು. ಗಡಿಯಾಚೆಗಿನ ಭಯೋತ್ಪಾದನೆ ಮಾತ್ರವಲ್ಲದೇ, SAARC ವ್ಯಾಪಾರ ಮತ್ತು ಕನೆಕ್ಟಿವಿಟಿ ಸಮಸ್ಯೆಯನ್ನೂ ಒಳಗೊಂಡಿದೆ ಎಂಬುದನ್ನು ಉಲ್ಲೇಖ ಮಾಡಿದ್ದಾರೆ.”
“SAARC ಕೆಲವೊಂದು ಸಮಸ್ಯೆಗಳನ್ನು ಹೊಂದಿದೆ, ಎಲ್ಲರಿಗೂ ಅದರ ಬಗ್ಗೆ ಗೊತ್ತಿದೆ. ಭಯೋತ್ಪಾದನೆಯ ವಿಷಯವನ್ನು ಪಕ್ಕಕ್ಕಿಟ್ಟರೂ, ಅಲ್ಲಿ ಕನೆಕ್ಟಿವಿಟಿ ಸಮಸ್ಯೆಯಿದೆ, ವ್ಯಾಪಾರ ಸಮಸ್ಯೆಯಿದೆ” ಎಂದು ಜೈಶಂಕರ್ ಹೇಳಿದ್ದಾರೆ.
ಎಸ್. ಜೈಶಂಕರ್ ಪದೇ ಪದೇ ಬಹುಪಕ್ಷೀಯತೆ ಮತ್ತು ಪ್ರಾದೇಶಿಕತೆಗಳ ಮೇಲಿನ ತನ್ನ ನಂಬಿಕೆಯನ್ನು ಪ್ರತಿಪಾದಿಸಿದರೂ ಸಹ, ಪಾಕಿಸ್ಥಾನವೂ SAARC ವೈಫಲ್ಯಕ್ಕೆ ಒಂದು ಕಾರಣ ಎಂಬುದನ್ನು ಅವರು ಅನೇಕ ಸಂದರ್ಭಗಳಲ್ಲಿ ಉಲ್ಲೇಖ ಮಾಡಿದ್ದಾರೆ. ನವದೆಹಲಿಯ ಎಡರನೇ ರೈಸಿನಾ ಭಾಷಣದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಅವರು ಮಾತನಾಡುತ್ತಾ, “ಭಾರತವು ಬಹುಪಕ್ಷೀಯತೆಯ ನೈಸರ್ಗಿಕ ಪ್ರತಿರೂಪವಾಗಿದೆ. ಇದು ಒಂದು ಮಟ್ಟಿಗೆ, ನಮ್ಮ ಸಂಪ್ರದಾಯಿಕ ಬಹುತ್ವ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಬಹುಪಕ್ಷೀಯತೆ ಪ್ರಪಂಚಕ್ಕೆ ವಾಸ್ತವವಾಗಿ ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚೆಯೇ, ನಾವು ಅದರ ಆಶಯ ಮತ್ತು ಅದರ ಅನಿವಾರ್ಯತೆಯನ್ನು ನಂಬಿಕೊಂಡಿದ್ದೆವು. ನಮ್ಮಂತೆಯೇ ವಿಶಾಲವಾದ ಮತ್ತು ವೈವಿಧ್ಯಮಯವಾದ ಪ್ರಪಂಚದಲ್ಲಿ ಮೈತ್ರಿಗಳ ಮೂಲಕ ಒಂದು ಸಣ್ಣ ಗುಂಪಿನ ನೇತೃತ್ವದಿಂದ ನಡೆಸಲ್ಪಡಬಹುದು ಎಂಬ ನಮಗೆ ಆಗ ಅರಿವಾಗಿರಲಿಲ್ಲ” ಎಂದಿದ್ದರು.
ಪ್ರಾದೇಶಿಕ ಮೈತ್ರಿಗಳ ಮಹತ್ವದ ಬಗ್ಗೆ ಮತ್ತು SAARC ಪ್ರಯೋಜನ ಪಡೆಯಲು ಪಾಕಿಸ್ಥಾನದ ವೈಫಲ್ಯದ ಬಗ್ಗೆ ರೈಸೀನಾ ಭಾಷಣದಲ್ಲಿ ಮಾತನಾಡಿದ್ದ ಅವರು, “ಪ್ರಾದೇಶಿಕ ಗುಂಪುಗಾರಿಕೆ ಇಂದು ಜಾಗತಿಕ ಕ್ರಮದ ನಿರ್ಮಾಣಕ್ಕೆ ತೊಡಕಾಗಿದೆ. ಅದರ ಚಾಲನಾ ಶಕ್ತಿ ಮತ್ತು ಸಾಮಾನ್ಯತೆ ಎಲ್ಲರಿಗೂ ಅರ್ಥವಾಗಿದೆ. ಭಾರತ SAARCನ ಸಂಸ್ಥಾಪಕ ಸದಸ್ಯ, ಆದರೆ ಒಂದು ರಾಷ್ಟ್ರದ ಅಭದ್ರತೆಯ ಪರಿಣಾಮದಿಂದಾಗಿ ಅದು ಪರಿಣಾಮಕಾರಿಯಾಗಿಲ್ಲ” ಎಂದಿದ್ದರು.
ರಾಷ್ಟ್ರಗಳ ನಡುವೆ ಪ್ರಾದೇಶಿಕ ಸಹಕಾರವನ್ನು ಸಾಧಿಸಲು SAARC ಸಕಾರಾತ್ಮಕ ಅಭಿವೃದ್ಧಿ ಮಾಡಿದರೂ, ಪಾಕಿಸ್ಥಾನದ ವರ್ತನೆ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕುಂದಿಸಿದೆ. SAARCನ ಇತರ ರಾಷ್ಟ್ರಗಳು ಪಾಕಿಸ್ಥಾನ ಪ್ರಾಯೋಜಕತ್ವದ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತಾರೆ. ಆದರೂ, ಪಾಕಿಸ್ಥಾನಕ್ಕೆ ಮತ್ತು ಕಾರ್ಯಗಳಿಗೆ ಪ್ರಾದೇಶಿಕ ಗುಂಪುಗಾರಿಕೆಯ ಆಶೀರ್ವಾದದೊಂದಿಗೆ ಈಗಲೂ SAARC ಒಂದು ರೀತಿಯ ಕಾನೂನುಬದ್ಧತೆಯನ್ನು ಒದಗಿಸುತ್ತದೆ. SAARC ಮೂಲಕ ಪ್ರಾದೇಶಿಕ ಮೈತ್ರಿಗಳ ಪ್ರಾಮುಖ್ಯತೆಯ ಬಗ್ಗೆ ಮತ್ತಷ್ಟು ಉಲ್ಲೇಖಿಸಿದ ಅವರು, “ಬಿಬಿಐಎನ್ ಉಪ-ಪ್ರಾದೇಶಿಕ ಗುಂಪುಗಳ ಮೂಲಕ ಇದನ್ನು ಭಾಗಶಃ ಪರಿಹಾರ ಮಾಡಬಹುದು ಎಂದು ನಾವು ಭಾವಿಸುತ್ತೇವೆ. BIMSTEC ನ ಸದಸ್ಯರ ನಡುವೆ ಪ್ರಸ್ತುತ ಇರುವ ಉತ್ಸಾಹವು ಹೆಚ್ಚು ದೂರಗಾಮಿ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಬಹುದು ಎಂಬುದು ನಮ್ಮ ನಿರೀಕ್ಷೆ ” ಎಂದಿದ್ದರು.
ಈ ಮಾತುಗಳ ಮೂಲಕ, ಭಾರತ ಸಮಸ್ಯೆಗಳ ಆಗರವಾದ SAARC ಅನ್ನು ಅತಿಯಾಗಿ ನೆಚ್ಚಿಕೊಂಡಿರುವುದಿಲ್ಲ ಮತ್ತು ಭಾರತದ ಪ್ರಾದೇಶಿಕ ಏಕೀಕರಣದ ದೃಷ್ಟಿಕೋನವು BIMSTEC ಮತ್ತು ಇತರ ಪ್ರಾದೇಶಿಕ ಮೈತ್ರಿಗಳಿಗೆ ಹೆಚ್ಚು ಹೊಂದಿಕೊಳ್ಳುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ. ಭಾರತವು ತನ್ನ ರಾಜತಾಂತ್ರಿಕ ಮತ್ತು ಕಾರ್ಯತಾಂತ್ರಿಕ ಕಾರ್ಯದಲ್ಲಿ SAARC ಅನ್ನು ಕೆಳದರ್ಜೆಗಿಳಿಸುವುದರಿಂದ, ಈಗಾಗಲೇ ಜಾಗತಿಕವಾಗಿ ಮೂಲೆಗುಂಪಾಗಿರುವ ಪಾಕಿಸ್ಥಾನಕ್ಕೆ ಈಗಲೂ ನ್ಯಾಯಸಮ್ಮತೆಯನ್ನು ನೀಡುವ ಸಂಸ್ಥೆಯೊಂದನ್ನು ಅದರಿಂದ ಕಸಿದುಕೊಂಡಂತಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.