ನವದೆಹಲಿ: 2036 ಒಲಿಂಪಿಕ್ಸ್ ಕಡೆಗೆ ಗಮಹರಿಸಿರುವ ಕೇಂದ್ರ ಸರ್ಕಾರವು ಅಥ್ಲೀಟ್ಗಳಿಗೆ ತಿಂಗಳಿಗೆ 50,000 ರೂ. ಸಹಾಯಧನ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
“ಹೊಸ ಕ್ರೀಡಾ ಮೂಲಸೌಕರ್ಯಗಳನ್ನು ದೊಡ್ಡ ಸಂಖ್ಯೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (TOPS) ಅಡಿಯಲ್ಲಿ, ಸುಮಾರು 3,000 ಅಥ್ಲೀಟ್ಗಳಿಗೆ 2036 ಒಲಿಂಪಿಕ್ಸ್ಗೆ ತಯಾರಿ ಮಾಡಿಕೊಳ್ಳಲು ತಿಂಗಳಿಗೆ 50,000 ರೂಪಾಯಿ ಸಹಾಯಧನವನ್ನು ನೀಡಲಾಗುತ್ತಿದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
ಭಾರತವು 2036 ಒಲಿಂಪಿಕ್ಸ್ಗೆ ಆತಿಥ್ಯ ವಹಿಸಲು ಬಿಡ್ ಸಲ್ಲಿಸಲಿದೆ, ಜೊತೆಗೆ ಈ ಭವ್ಯ ಕ್ರೀಡಾ ಕೂಟದ ಪದಕ ಪಟ್ಟಿಯಲ್ಲಿ ಭಾರತವು ಟಾಪ್ ಐದರಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇಂತಹ ಕ್ರೀಡಾ ಕಾರ್ಯಕ್ರಮಗಳನ್ನು ಭಾರತದಲ್ಲಿ ಆಯೋಜಿಸುವ ಉದ್ದೇಶವು ಕ್ರೀಡೆಯನ್ನು ಜನರ ಜೀವನದ ಸಹಜ ಭಾಗವಾಗಿಸುವುದು ಎಂದು ಶಾ ಹೇಳಿದ್ದಾರೆ. “ಕಲಿಕೆಗೆ ಒಂದೇ ಒಂದು ಸ್ಥಳವಿದೆ—ಆಟದ ಮೈದಾನ. ಆಟದ ಮೈದಾನದಲ್ಲೇ ಸೋಲನ್ನು ಸ್ವೀಕರಿಸುವ ಅಭ್ಯಾಸ ಮತ್ತು ಗೆಲುವಿನ ಉತ್ಸಾಹವು ಬೆಳೆಯುತ್ತದೆ” ಎಂದು ಅವರು 21ನೇ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಆಟಗಳು-2025ರಲ್ಲಿ ಭಾಗವಹಿಸಿದ ಭಾರತೀಯ ತಂಡವನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕಳೆದ 10 ವರ್ಷಗಳಲ್ಲಿ ಕ್ರೀಡೆಗೆ ಬಹಳಷ್ಟು ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದರು. “ಪಿಎಂ ಮೋದಿಯವರ ನಾಯಕತ್ವದಲ್ಲಿ, ಕಳೆದ 10 ವರ್ಷಗಳಲ್ಲಿ ಕ್ರೀಡೆಗೆ ದೊಡ್ಡ ಮಟ್ಟದಲ್ಲಿ ಒತ್ತು ನೀಡಲಾಗಿದೆ. ಕ್ರೀಡಾ ಬಜೆಟ್ ಐದು ಪಟ್ಟು ಹೆಚ್ಚಾಗಿದೆ. 2036 ಒಲಿಂಪಿಕ್ಸ್ಗೆ ತಯಾರಿ ಮಾಡಿಕೊಳ್ಳಲು ಸರ್ಕಾರವು ಸುಮಾರು 3,000 ಅಥ್ಲೀಟ್ಗಳಿಗೆ ತಿಂಗಳಿಗೆ 50,000 ರೂ. ಸಹಾಯಧನವನ್ನು ನೀಡುತ್ತಿದೆ” ಎಂದು ಅವರು ಹೇಳಿದರು.
ಗೃಹ ಸಚಿವರು, ಗೆಲುವು ಮತ್ತು ಸೋಲು ಜೀವನದ ಶಾಶ್ವತ ಚಕ್ರವಾಗಿದೆ ಎಂದು ಹೇಳಿದರು. ಗೆಲುವಿನ ಗುರಿಯನ್ನು ಇಟ್ಟುಕೊಂಡು, ಗೆಲುವಿಗಾಗಿ ಯೋಜನೆ ಮಾಡುವುದು ಪ್ರತಿಯೊಬ್ಬರ ಸ್ವಭಾವವಾಗಿರಬೇಕು ಮತ್ತು ಗೆಲುವು ಒಂದು ಅಭ್ಯಾಸವಾಗಿರಬೇಕು. ಗೆಲುವಿನ ಅಭ್ಯಾಸವನ್ನು ಬೆಳೆಸಿಕೊಂಡವರು ಯಾವಾಗಲೂ ಅಸಾಧಾರಣವಾಗಿ ಪ್ರದರ್ಶನ ನೀಡುತ್ತಾರೆ ಎಂದು ಅವರು ತಿಳಿಸಿದರು.
ಶಾ ಅವರು, ಮೋದಿ ಸರ್ಕಾರವು ಕ್ರೀಡೆಯನ್ನು ಪ್ರತಿ ಗ್ರಾಮಕ್ಕೂ ಕೊಂಡೊಯ್ಯಲು ವ್ಯವಸ್ಥೆ ಮಾಡುತ್ತಿದೆ. ವಿವಿಧ ವಯಸ್ಸಿನ ಮಕ್ಕಳ ಆಯ್ಕೆ ಮತ್ತು ತರಬೇತಿಯನ್ನು ಪ್ರತಿ ಕ್ರೀಡೆಯಲ್ಲಿ ವೈಜ್ಞಾನಿಕವಾಗಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಗೃಹ ಸಚಿವರು, 21ನೇ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಆಟಗಳಲ್ಲಿ ಭಾರತೀಯ ತಂಡವು 613 ಪದಕಗಳನ್ನು ಗೆದ್ದಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು ಮತ್ತು ಅತ್ಯುತ್ತಮ ಪ್ರದರ್ಶನ ನೀಡಿ ದೇಶಕ್ಕೆ ಹೆಮ್ಮೆ ತಂದ ಪೊಲೀಸ್ ಮತ್ತು ಅಗ್ನಿಶಾಮಕ ಸೇವೆ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.